HEALTH TIPS

21 ಸದಸ್ಯರ ಕ್ಯಾಬಿನೆಟ್: ಸಿಪಿಎಂನಿಂದ 12, ಸಿಪಿಐನಿಂದ ನಾಲ್ಕು; ಎ.ವಿಜಯರಾಘವನ್

             ತಿರುವನಂತಪುರ: ವಿಧಾನಸಭಾ ಚುನಾವಣೆಯ ಬಳಿಕ ಬಹುಮತದಿಂದ ಪುನರಾಯ್ಕೆಗೊಂಡ ಎಲ್.ಡಿ.ಎಫ್ ಸರ್ಕಾರದ ಸಚಿವ ಸಂಪುಟದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಲು ಸೋಮವಾರ ನಡೆದ ಎಡರಂಗದ  ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸರ್ಕಾರದಲ್ಲಿ 21 ಸದಸ್ಯರಿರಲಿದ್ದಾರೆ ಎಂದು ಎಲ್‍ಡಿಎಫ್ ಕನ್ವೀನರ್ ಮತ್ತು ರಾಜ್ಯ ಕಾರ್ಯದರ್ಶಿ ಎ. ವಿಜಯರಾಘವನ್ ಹೇಳಿರುವರು. ಪ್ರಮಾಣವಚನ ಸ್ವೀಕಾರ ಸಮಾರಂಭ ಮೇ.20 ರಂದು ನಡೆಯಲಿದೆ. ಸಮಾರಂಭವನ್ನು ಸಾಧ್ಯವಾದಷ್ಟು ಸರಳವಾಗಿ ನಡೆಸಲಾಗುವುದು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರನ್ನು ಹೊರತುಪಡಿಸಿ, ಸಿಪಿಐ (ಎಂ) ನಲ್ಲಿ ಎಲ್ಲರೂ ಹೊಸಬರು.

                 21 ಸದಸ್ಯರ ಸರ್ಕಾರವು ಸಿಪಿಎಂನಿಂದ 12 ಮಂತ್ರಿಗಳನ್ನು ಹೊಂದಿರುತ್ತದೆ. ಸಿಪಿಐನಿಂದ ನಾಲ್ಕು ಮಂತ್ರಿಗಳು, ಕೇರಳ ಕಾಂಗ್ರೆಸ್ ನಿಂದ ಒಬ್ಬರು, ಜನತಾದಳದ ಒಬ್ಬರು ಮತ್ತು ಎನ್‍ಸಿಪಿಯಿಂದ ಒಬ್ಬರು. ಡೆಮಾಕ್ರಟಿಕ್ ಕೇರಳ ಕಾಂಗ್ರೆಸ್ ಮತ್ತು ಐ.ಎನ್.ಎಲ್ ಸಚಿವರು ಮುಂದಿನ ಎರಡೂವರೆ ವರ್ಷಗಳನ್ನು ಕೇರಳ ಕಾಂಗ್ರೆಸ್ ಬಿ ಮತ್ತು ಕೇರಳ ಕಾಂಗ್ರೆಸ್ ಎಸ್ ನೊಂದಿಗೆ ಹಂಚಿಕೊಳ್ಳಲಿದ್ದಾರೆ.

                 ಸ್ಪೀಕರ್ ಹುದ್ದೆ ಸಿಪಿಎಂ ಮತ್ತು ಡೆಪ್ಯೂಟಿ ಸ್ಪೀಕರ್ ಹುದ್ದೆ ಸಿಪಿಐಗೆ ಹಂಚಿಕೆಯಾಗಿದೆ. ಕೇರಳ ಕಾಂಗ್ರೆಸ್ ಶಾಸಕರಿಗೆ ಮುಖ್ಯ ವಿಪ್ ಸ್ಥಾನ ನೀಡಲಾಗಿದೆ. ಸಚಿವರ ಖಾತೆಗಳನ್ನು ಮುಖ್ಯಮಂತ್ರಿ ನಿರ್ಧರಿಸುತ್ತಾರೆ ಎಂದು ಎಲ್ ಡಿ ಎಫ್ ಕನ್ವೀನರ್ ಹೇಳಿದರು. ಸಚಿವರ ಖಾತೆಗಳನ್ನು ನಿರ್ಧರಿಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ಇದೆ ಎಂದು ವಿಜಯರಾಘವನ್ ಮಾಧ್ಯಮಗಳಿಗೆ ತಿಳಿಸಿದರು.

                  ಪ್ರಮಾಣವಚನ ಸಮಾರಂಭ  ಸಾಧ್ಯವಾದಷ್ಟು ಕಡಿಮೆ ಜನರ ಪಾಲ್ಗೊಳ್ಳುವಿಕೆಯೊಂದಿಗೆ ನಡೆಸಲಾಗುವುದು. ಸಮಾರಂಭಕ್ಕೆ  500 ಜನರಿಗೆ ಮಾತ್ರ ಪ್ರವೇಶ ಅವಕಾಸ ನೀಡಲಾಗಿದೆ. ಮಾಧ್ಯಮಗಳಿಗೆ  ಪ್ರವೇಶವಿರುವುದಿಲ್ಲ. ಮುಖ್ಯಮಂತ್ರಿ ಮತ್ತು ಸಚಿವರ ಸಂಬಂಧಿಕರಿಗೂ ಪ್ರವೇಶಿ¸ಲು ಅನುಮತಿ ಇಲ್ಲ ಎಂದು ವಿಜಯರಾಘವನ್ ತಿಳಿಸಿರುವರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries