ತಿರುವನಂತಪುರ: ತೌಕ್ತೆ ಚಂಡಮಾರುತ ಕೇರಳದ ಕರಾವಳಿಯನ್ನು ಹಿಂದೆ ಸರಿದಿದ್ದು, ರಾಜ್ಯದಲ್ಲಿ ಮಳೆ ಮತ್ತು ಸಮುದ್ರ ಮಟ್ಟದ ಏರಿಕೆ ಕಡಿಮೆಯಾಗಿದೆ. ಹವಾಮಾನ ಇಲಾಖೆ ಮೂರು ಜಿಲ್ಲೆಗಳಲ್ಲಿ ನೀಡಿರುವ ಮಳೆ ಎಚ್ಚರಿಕೆ ಹಿಂಪಡೆಯಲಾಗಿದೆ. ಕೋಝಿಕೋಡ್ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ.
ತಿರುವನಂತಪುರ, ಪಾಲಕ್ಕಾಡ್ ಮತ್ತು ವಯನಾಡ್ ಜಿಲ್ಲೆಗಳಲ್ಲಿ ಚಮಡಮಾರುತದ ಎಚ್ಚರಿಕೆ ಹಿಂಪಡೆಯಲಾಗಿದೆ. ಮುನ್ಸೂನ್ ಪ್ರಾರಂಭವಾಗುವವರೆಗೂ ಹವಾಮಾನವು ಶಾಂತವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಏತನ್ಮಧ್ಯೆ, ಚಂಡಮಾರುತದಿಂದ ಹೆಚ್ಚು ಹಾನಿಗೊಳಗಾದ ಉತ್ತರ ಜಿಲ್ಲೆಗಳಲ್ಲಿ, ಅನೇಕ ಕುಟುಂಬಗಳು ಇನ್ನೂ ಪರಿಹಾರ ಕೇಂದ್ರಗಳು ಮತ್ತು ಸಂಬಂಧಿಕರ ಮನೆಗಳಲ್ಲಿ ಉಳಿದುಕೊಂಡಿದ್ದಾರೆ.
ಅನೇಕ ಜಿಲ್ಲೆಗಳಲ್ಲಿ ಲಘು ಮಟ್ಟದ ಮಳೆ ಮುಂದುವರೆದಿದೆ. ಮಧ್ಯ ಮತ್ತು ದಕ್ಷಿಣ ಕೇರಳದ ಹವಾಮಾನವು ಶಾಂತವಾಗಿದೆ. ಎರ್ನಾಕುಳಂನಲ್ಲಿ ಸೋಮವಾರ ಬೆಳಿಗ್ಗೆ ಮಳೆ ಭಾರೀ ಮಳೆಯಾಗಿದೆ. ಸಮುದ್ರ ಮಟ್ಟ ಕುಸಿಯುತ್ತಿದ್ದಂತೆ, ಚೆಲ್ಲಾನ ಎಂಬ ಪ್ರದೇಶದಲ್ಲಿ ಮನೆಯೊಳಗೆ ನುಗ್ಗಿದ್ದ ನೀರು ಕಡಿಮೆಯಾಯಿತು.
ಏತನ್ಮಧ್ಯೆ, ಮಂಗಳವಾರ ರಾತ್ರಿಯವರೆಗೆ ಹೆಚ್ಚಿನ ಅಲೆಗಳ ಸಾಧ್ಯತೆಯ ಬಗ್ಗೆ ರಾಜ್ಯಕ್ಕೆ ಎಚ್ಚರಿಕೆ ನೀಡಲಾಗಿದೆ. ತಿರುವನಂತಪುರದ ಪೊಳಿಯೂರ್ ನಿಂದ ಕಾಸರಗೋಡಿನ ವರೆಗಿನ ಕರಾವಳಿಯಲ್ಲಿ 3.5 ಮೀ ನಿಂದ 4.5 ಮೀ ಎತ್ತರಕ್ಕೆ ಹೆದ್ದೆರೆಗಳು ಬಂದಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮೀನುಗಾರರಿಗೆ ಸಮುದ್ರಕ್ಕೆ ಹೋಗದಂತೆ ಎಚ್ಚರಿಕೆ ನೀಡಲಾಗಿದೆ.



