ತಿರುವನಂತಪುರಂ: ಈ ಶೈಕ್ಷಣಿಕ ವರ್ಷದಲ್ಲಿ ಶಾಲಾ ಬಿಸಿಯೂಟÀ ನಡೆಸಲು ಕೇಂದ್ರ ಪಾಲಿನಿಂದ 251.35 ಕೋಟಿ ರೂ.ಮಂಜೂರುಗೊಂಡಿದೆ. ರಾಜ್ಯಕ್ಕೆ 68,262 ಮೆಟ್ರಿಕ್ ಟನ್ ಆಹಾರ ಧಾನ್ಯಗಳು ಸಿಗಲಿವೆ. ಈ ನಿಟ್ಟಿನಲ್ಲಿ ರಾಜ್ಯವು ಸಲ್ಲಿಸಿದ ವಾರ್ಷಿಕ ಯೋಜನೆ ಮತ್ತು ಬಜೆಟ್ ಪ್ರಸ್ತಾಪಗಳನ್ನು ಕೇಂದ್ರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ವಿಭಾಗದ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ಅನುಮೋದನೆ ಮಂಡಳಿ ಸಭೆ ಅನುಮೋದಿಸಿತು.
ಕಾರ್ಯಕ್ರಮ ಅನುಮೋದನೆ ಮಂಡಳಿ ಸಭೆಯು ರಾಜ್ಯದ ಕಡ್ಡಾಯ ಪಾಲು ಸೇರಿದಂತೆ ಒಟ್ಟು `394.15 ಕೋಟಿ ರೂ. ಅನುಮತಿ ನೀಡಿದೆ. ಆದಾಗ್ಯೂ, ಈ ಯೋಜನೆಗಾಗಿ ರಾಜ್ಯ ಬಜೆಟ್‍ನಲ್ಲಿ ಹೆಚ್ಚುವರಿ ಮೊತ್ತ 526 ಕೋಟಿ ರೂ.ಗಳನ್ನು ಈಗಾಗಲೇ ಒದಗಿಸಲಾಗಿದ್ದು, ಅಡುಗೆಯವರಿಗೆ ಗೌರವ ಧನ ಹೆಚ್ಚುವರಿ ಹೊರೆ ಮತ್ತು ಆಹಾರ ಧಾನ್ಯಗಳ ಸಾಗಣೆಯನ್ನು ಗಣನೆಗೆ ತೆಗೆದುಕೊಂಡಿದೆ.
ಶಾಲೆಗಳಲ್ಲಿ ಅಡಿಗೆ ಮತ್ತು ತರಕಾರಿ ತೋಟಗಳನ್ನು ಸ್ಥಾಪಿಸಲು ಮತ್ತು ಅವುಗಳನ್ನು ಉತ್ತಮ ಸ್ಥಿತಿಯಲ್ಲಿ ನಿರ್ವಹಿಸಲು ರಾಜ್ಯವು ಮಾಡಿದ ಕಾರ್ಯಗಳನ್ನು ಸಭೆ ಶ್ಲಾಘಿಸಿದೆ. ರಾಜ್ಯದ ಬಜೆಟ್ ನ್ನು ಸಾರ್ವಜನಿಕ ಶಿಕ್ಷಣದ ಪ್ರಧಾನ ಕಾರ್ಯದರ್ಶಿ ಎಪಿಎಂ ಮೊಹಮ್ಮದ್ ಹನೀಶ್ ಮಂಡಿಸಿದರು. ಆನ್‍ಲೈನ್ ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಜೀವನ್‍ಬಾಬು ಕೆ ಮತ್ತು ಸಾಮಾನ್ಯ ಶಿಕ್ಷಣದ ಹೆಚ್ಚುವರಿ ನಿರ್ದೇಶಕ ಸಿಎ ಸಂತೋಷ್ ಭಾಗವಹಿಸಿದ್ದರು.
ಶಾಲೆಗಳು ಮತ್ತೆ ತೆರೆಯುವವರೆಗೆ ಅಸ್ತಿತ್ವದಲ್ಲಿರುವ ಆಹಾರ ಭದ್ರತಾ ಭತ್ಯೆಯ ವಿತರಣೆಯನ್ನು ಮುಂದುವರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಆಹಾರ ಭದ್ರತಾ ಭತ್ಯೆ ಎಂಬುದು ಆಹಾರ ಧಾನ್ಯಗಳು ಮತ್ತು ಅಗತ್ಯ ಆಹಾರ ಪದಾರ್ಥಗಳ ಸಂಯೋಜನೆಯಾಗಿದ್ದು ಅದನ್ನು ಅಡುಗೆ ವೆಚ್ಚಕ್ಕಾಗಿ ಒದಗಿಸಬಹುದು.








