HEALTH TIPS

ಲಸಿಕೆ 6 ತಿಂಗಳವರೆಗೂ ಪರಿಣಾಮಕಾರಿ: ಅಂತರ ಬಗ್ಗೆ ಚಿಂತೆ ಬೇಡ ಎಂದ ತಜ್ಞರು

                ನವದೆಹಲಿ: ದೇಶದಲ್ಲಿ ಕೊರೋನಾ ಎರಡನೇ ಅಲೆಯಿಂದ ಎದುರಾದ ಆಘಾತದ ಹಿನ್ನೆಲೆಯಲ್ಲಿ ,ನಾಲ್ಕರಿಂದ ಆರು ವಾರ, ಆರರಿಂದ ಎಂಟು ಅಥವಾ ಎಂಟರಿಂದ ಹನ್ನೆರಡು …ಹೀಗೆ ಭಾರತದಲ್ಲಿ ಕೋವಿಶೀಲ್ಡ್ ಎರಡು ಡೋಸ್ ಗಳ ನಡುವಿನ ಅಂತರ ಹೆಚ್ಚುತ್ತಿರುವ ಬಗ್ಗೆ ಕೆಲವರಲ್ಲಿ ಉಂಟಾಗಿರುವ ಗೊಂದಲ ಮತ್ತು ನಡೆಯುತ್ತಿರುವ ಅಪಪ್ರಚಾರ ಕುರಿತಂತೆ ತಜ್ಞರು ಸ್ಪಷ್ಟನೆ ನೀಡಿದ್ದಾರೆ.


 

 ಒಂದನೇ ಡೋಸ್ ಸ್ವೀಕರಿಸಿದವರು ಈ ಅಂತರದ ಬಗ್ಗೆ ಚಿಂತಿಸುವ ಯಾವುದೇ ಅಗತ್ಯ ಇಲ್ಲ. ಲಸಿಕೆ ೬ ತಿಂಗಳವರೆಗೆ ಪರಿಣಾಮಕಾರಿಯಾಗಿದ್ದು, ಆರು ತಿಂಗಳ ಮೊದಲು ಯಾವುದೇ ಸಮಯದಲ್ಲಿ ಎರಡನೇ ಡೋಸ್ ಹಾಕಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.


       ಕಳೆದ ವಾರ ಕೇಂದ್ರ ಸರ್ಕಾರ ರೋಗನಿರೋಧಕ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ತಂಡ (ಎನ್‌ಟಿಎಜಿಐ) ಶಿಫಾರಸ್ಸಿನ ಮೇರೆಗೆ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರವನ್ನು ೮ವಾರಗಳಿಂದ 12-16 ವಾರಗಳಿಗೆ ವಿಸ್ತರಿಸಿತ್ತು. ಇದರ ಬೆನ್ನಿಗೇ ಜನರಲ್ಲಿ ಗೊಂದಲ ಮೂಡಿಸುವ ಮತ್ತು ಸರಕಾರ ನಿಲುವಿನ ವಿರುದ್ಧ ಅಪಪ್ರಚಾರಗಳೂ ಆರಂಭಗೊಂಡಿದ್ದವು.


            ಲಸಿಕೆಗಳು ಕೊರತೆ ಮತ್ತು ಸರಬರಾಜಿನಲ್ಲಿ ವ್ಯತ್ಯಯ ಇರುವುದರಿಂದ ಸರಕಾರ ಅಂತರವನ್ನು ಹೆಚ್ಚಿಸಿದೆ ಎಂಬ ಪ್ರಚಾರ ಮತ್ತು ಜನರ ಆತಂಕಗಳಿಗೆ ಪ್ರತಿಕ್ರಿಯಿಸಿದ ರೋಗ ನಿರೋಧಕ ತಜ್ಞ ಹಾಗೂ ದಿಲ್ಲಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಮ್ಯುನೊಲಾಜಿ (ಎನ್‌ಐಐ) ಯ ಡಾ.ರಾತ್ ಡಾ.ರಾತ್, ಲಸಿಕೆ ಡೋಸಿಂಗ್ “ಸಾಕಷ್ಟು ಹೊಂದಿಕೊಳ್ಳುವ ಮತ್ತು ಕ್ಷಮಿಸುವ” ಕ್ಷಮತೆ ಹೊಂದಿದೆ .ನಾಲ್ಕು ವಾರಗಳು ಕಳೆದ ನಂತರ, ಮುಂದಿನ ಡೋಸ್ ಅನ್ನು ಆರು ತಿಂಗಳವರೆಗೆ ಯಾವಾಗಬೇಕಾದರೂ ತೆಗೆದುಕೊಳ್ಳಬಹುದು.



ಎಂದಿದ್ದಾರೆ .
ಲಸಿಕೆ ಡೋಸ್ ತೆಗೆದುಕೊಂಡಾಗ ಅವುಗಳು ಸುರಕ್ಷಿತವಾಗಿರುತ್ತವೆ. ಆದರೆ ಹಿಂದಿನ ಡೋಸ್‌ನ ಒಂದು ತಿಂಗಳಿಗಿಂತ ಕಡಿಮೆ ಅವಯಲ್ಲಿ ನೀಡಿದರೆ ಯಾವುದೇ ದೊಡ್ಡ ಕ್ಷಮತೆಯನ್ನು ಒದಗಿಸುವುದಿಲ್ಲ ಎಂದಿರುವ ವಿಜ್ಞಾನಿಗಳು,ಮೊದಲ ಡೋಸ್ ಲಸಿಕೆ ಪಡೆದ ಕನಿಷ್ಠ ನಾಲ್ಕು ವಾರಗಳು ಕಳೆದ ನಂತರ ಆರು ತಿಂಗಳ ಒಳಗೆ ಎರಡನೇ ಡೋಸ್ ಅನ್ನು ಸ್ವೀಕರಿಸಿ ಎಂದು ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries