HEALTH TIPS

ಒಡಿಶಾದಲ್ಲಿ ಮೊದಲ 'ಬ್ಲ್ಯಾಕ್ ಫಂಗಸ್' ಸೋಂಕು ಪತ್ತೆ, 71 ವರ್ಷದ ಕೋವಿಡ್ ಸೋಂಕಿತನಿಗೆ ಚಿಕಿತ್ಸೆ!

         ಭುವನೇಶ್ವರ: ಮಾರಕ ಕೊರೋನಾ ಸೋಂಕಿನ ಅಬ್ಬರಕ್ಕೆ ತತ್ತರಿಸಿ ಹೋಗುತ್ತಿರುವ ಜನತೆಗೆ ಬ್ಲಾಕ್ ಫಂಗಸ್ ಮತ್ತೊಂದು ಹೊಡೆತ ನೀಡಿದ್ದು, ಒಡಿಶಾದ ಕೋವಿಡ್ ಸೋಂಕಿತನಲ್ಲಿ ಮೊದಲ ಬ್ಲಾಕ್ ಫಂಗಸ್ ಸೋಂಕು ಪತ್ತೆಯಾಗಿದೆ.


         ಅನಿಯಂತ್ರಿತ ಮಧುಮೇಹ ಸಮಸ್ಯೆಯ ಇತಿಹಾಸ ಹೊಂದಿರುವ 71 ವರ್ಷದ ಕೋವಿಡ್ ರೋಗಿಯಲ್ಲಿ ಮ್ಯೂಕೋರ್ಮೈಕೋಸಿಸ್ ಅಥವಾ 'ಕಪ್ಪು ಶಿಲೀಂಧ್ರ ಸೋಂಕು ಪತ್ತೆ ಮಾಡಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಒಡಿಶಾದ ಜಾಜ್‌ಪುರ ಜಿಲ್ಲೆಯ ನಿವಾಸಿ ಕೋವಿಡ್ ಸೋಂಕಿತ ರೋಗಿಯನ್ನು ರಾಜ್ಯ ರಾಜಧಾನಿ ಭುವನೇಶ್ವರದ ಪ್ರಮುಖ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

        ಈ ಬಗ್ಗೆ ಮಾಹಿತಿ ನೀಡಿದ ವೈದ್ಯಕೀಯ ಶಿಕ್ಷಣ ಮತ್ತು ತರಬೇತಿ ನಿರ್ದೇಶಕ ಡಾ. ಸಿಬಿಕೆ ಮೊಹಂತಿ ಅವರು, ಪ್ರಸ್ತುತ 71 ವರ್ಷದ ಸೋಂಕಿತರಿಗೆ ಮಧುಮೇಹ ವಿರೋಧಿ ಮತ್ತು ಶಿಲೀಂಧ್ರನಾಶಕ ಚಿಕಿತ್ಸೆ ನೀಡಲಾಗುತ್ತಿದೆ. ಏಪ್ರಿಲ್ 20 ರಂದು ಅವರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿತ್ತು. ಅವರು ಹೋಮ್ ಐಸೋಲೇಷನ್ ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಮೇ 8ರಂದು ಕಣ್ಣುಗಳಲ್ಲಿ ಊತ ಮತ್ತು ಮೂಗಿನಿಂದ ಕಪ್ಪುದ್ರವ ಹೊರಬರುವಿಕೆ ಕುರಿತು ವರದಿ ಮಾಡಿದ್ದಾರೆ" ಎಂದು ಹೇಳಿದ್ದಾರೆ.

ಹೀಗಾಗಿ ಅವರನ್ನು ಆಸ್ಪತ್ರೆಗೆ ಕರೆಸಿಕೊಂಡು ಮೂಗಿನ ಪರೀಕ್ಷೆ ಮಾಡಲಾಗಿದೆ. ಈ ವೇಳೆ ಮೂಗಿನ ಎಂಡೋಸ್ಕೋಪಿ ಟರ್ಬಿನೇಟ್ ಮೇಲೆ ಕಪ್ಪುಬಣ್ಣದ ಗೆಡ್ಡೆ ಇರುವುದು ಪತ್ತೆಯಾಗಿದೆ ಎಂದು ಇಎನ್ ಟಿ ಶಸ್ತ್ರಚಿಕಿತ್ಸಕ ಡಾ. ರಾಧಾ ಮಾಧಾಬ್ ಸಾಹು ಅವರ ವರದಿಯಲ್ಲಿ ತಿಳಿಸಲಾಗಿದೆ.

      ಈ ಹಿಂದೆ ರೋಗಿಯು ಹಳೆಯ ನೀರನ್ನೂ ಮುಟ್ಟಿರುನ ಸಾಧ್ಯತೆ ಇದ್ದು, ಈ ನೀರಿನಲ್ಲಿದ್ದ ಮ್ಯೂಕೋರ್ಮೈಕೋಸಿಸ್ ಅಥವಾ ಕಪ್ಪು ಶಿಲೀಂಧ್ರ ಆತನಿಗೆ ಸೋಂಕು ಉಂಟು ಮಾಡಿದೆ. ಮೂಲಗಳ ಪ್ರಕಾರ ರೋಗಿಯು ತನ್ನ ಮನೆಯಲ್ಲಿದ್ದ ಹಳೆಯ ಏರ್ ಕೂಲರ್ ನಲ್ಲಿ ಸಂಗ್ರಹವಾಗಿದ್ದ ನೀರನ್ನು ಮುಟ್ಟಿದ್ದಾರೆ. ಅದರಲ್ಲಿದ್ದ ಶಲೀಂದ್ರ ಇವರಿಗೆ ಸೋಕಿ ಸೋಂಕು ಉಂಟಾಗಿದೆ. ಮನೆಯಲ್ಲೇ ಸೋಂಕು ತಗುಲಿದ್ದು, ಆಸ್ಪತ್ರೆಯಲ್ಲಿ ಅಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಅವರ ರಕ್ತ ಪರೀಕ್ಷಾ ವರದಿಗಾಗಿ ಕಾಯಲಾಗುತ್ತಿದ್ದು, ಪ್ರಸ್ತುತ ರೋಗಿಯ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

      ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಮತ್ತು ಮ್ಯೂಕೋರ್ಮೈಕೋಸಿಸ್ ಚಿಕಿತ್ಸೆಯು ರಾಜ್ಯದಲ್ಲಿ ಲಭ್ಯವಿದೆ ಎಂದು ಹೇಳಿದರು. ಎಚ್‌ಐವಿ / ಏಡ್ಸ್, ಅನಿಯಂತ್ರಿತ ಮಧುಮೇಹ, ಮೆಲ್ಲಿಟಸ್ ಕ್ಯಾನ್ಸರ್, ಅಂಗಾಂಗ ಕಸಿ, ದೀರ್ಘಕಾಲೀನ ಕಾರ್ಟಿಕೊಸ್ಟೆರಾಯ್ಡ್ ಮತ್ತು ಇಮ್ಯುನೊಸಪ್ರೆಸಿವ್ ಥೆರಪಿ ಮುಂತಾದ ಸಮಸ್ಯೆಗಳು ಈ ರೋಗದ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಮುಂಚಿನ ಹೆಚ್ಚಿನ ಪ್ರಕರಣಗಳಿಗೆ ಕಾರಣವಾಗುವ ಅಂಶವನ್ನು ಅದು ತಿಳಿಸಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries