HEALTH TIPS

ಪ್ರಕೃತಿಗಿಂತ ಮಿಗಿಲಾದ ನ್ಯಾಯ ದೇವತೆ ಬೇರೊಂದಿಲ್ಲ!: ಸಮುದ್ರಕ್ಕೆ ಎಸೆದ ತ್ಯಾಜ್ಯಗಳು ಬಡ್ಡಿ ಸಹಿತ ಮರಳಿಕೆ: ಟನ್ ಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯಗಳು ಸಮುದ್ರ ತೀರದಲ್ಲಿ

                 ತಿರುವನಂತಪುರ: ನಾವು ಪದೇ-ಪದೇ ಉಚ್ಚರಿಸುವ ಸಮಜಾಯಿಶಿPಯ ಮಾತೆಂದರೆ ಅದು ಪ್ರಕೃತಿ, ಪ್ರಕೃತಿಗಿಂತ ಮಿಗಿಲಾದುದು ಯಾವುದೂ ಇಲ್ಲವೆಂಬುದು. ಆದರೆ ಮಾತಿಗಷ್ಟೇ ಸೀಮಿತವಾಗಿರುವ ಇಂತಹಹ ಮಾತುಗಳ ಮಧ್ಯೆ ಪ್ರಕೃತಿ ಸುಮ್ಮನಿದ್ದೀತೇ!? 


           ಪ್ರಸ್ತುತ ಚಂಡಮಾರುತದ ಪ್ರಭಾವದಿಂದ ಕಡಲು ಎಂದಿಗಿಂತ ಒಂದಷ್ಟು ಹೆಚ್ಚೇ ಉಕ್ಕೇಳುತ್ತಿದ್ದು, ಮನುಷ್ಯರು ಎಸಗಿರುವ ಕರ್ಮದ ನಿಜಬಣ್ಣವನ್ನು ಬಯಲಿಗೆಳೆದಿರುವುದು ಕಂಡುಬರುತ್ತಿದೆ. ಹೌದು, ನಾವು ಒಮ್ಮೆ ಎಸೆದ ತ್ಯಾಜ್ಯವನ್ನು ಇದೀಗ ಸಾಗರ ಮತ್ತೆ ದಡಕ್ಕೆ ಮರಳಿಸುವ ಮೂಲಕ ಇನ್ನು ಆ ಹೆಸರಲ್ಲಿ ತಗಾದೆ, ಮನುಷ್ಯರ ಉಸಾಬರಿಯೇ ಬೇಡ ಎಂಬಂತಿದೆ. ತಿರುವನಂತಪುರದಿಂದ ಮಂಜೇಶ್ವರ ಕಣ್ವತೀರ್ಥದ ಕಡಲ ಕಿನಾರೆ ಪೂರ್ತಿ ಇದೀಗ ಮಿಲಿಯಗಟ್ಟಲೆ ಟನ್ ಗಳ ಪ್ಲಾಸ್ಟಿಕ್ ತ್ಯಾಜ್ಯದಿಂದ ತುಂಬಿಹೋಗಿದೆ.

         ಆದರೆ ಮತ್ತೊಂದೆಡೆ ಸಮುದ್ರಕ್ಕೆ ಎಸೆದ ತ್ಯಾಜ್ಯಗಳು ಮತ್ತೆ ದಡಕ್ಕೆ ಮರಳಿರುವುದು ಕರಾವಳಿ ವಾಸಿಗಳಿಗೆ ಸಮಾಧಾನ ತಂದಿದೆ. 

         ಹೀಗೂ ಉಂಟು.....ಸಮುದ್ರ ಬದಿಯಲ್ಲಿ ವಾಸಿಸುವ ಹಲವು ಕುಟುಂಬಗಳು ಚಂಡಮಾರುತದಿಂದ ತತ್ತರಿಸಿ ತಮ್ಮ ದೈನಂದಿನ ಅಗತ್ಯಗಳನ್ನು ಪೂರೈಸುವ ಹಲವು ಸಾಮಗ್ರಿಗಳನ್ನು ಕಳೆದುಕೊಂಡಿದ್ದು, ಇದೀಗ ಮರಳಿರುವ ರಾಶಿಗಳಲ್ಲಿ ತಮ್ಮ ವಸ್ತುಗಳಿಗೆ ದಿನಪೂರ್ತಿ ತಡಕಾಡುವ ದೃಶ್ಯಗಳೂ ಕಂಡುಬಂದಿದೆ.  ಗೃಹೋಪಯೋಗಿ ವಸ್ತುಗಳ ಕೊರತೆಯಿಂದ ಬಳಲುತ್ತಿರುವ ಜನರಿಗೆ ಪ್ಲಾಸ್ಟಿಕ್ ತ್ಯಾಜ್ಯವು ಡಬಲ್ ಹುರುಪು ಮೂಡಿಸಲು ಕಾರಣವಾಗಿದೆ. ಹೆಚ್ಚಾಗಿ ಪ್ಲಾಸ್ಟಿಕ್ ಬಾಟಲಿಗಳು, ಥರ್ಮೋಕೋಲ್ಸ್ ಮತ್ತು ಬಟ್ಟೆಗಳು ದಡದಲ್ಲಿ ರಾಶಿಬಿದ್ದಿರುವುದು ಹಲವರಿಗೆ ಉಪಕಾರವೂ ಆಗುತ್ತಿದೆ.

                     150 ಕ್ಕೂ ಹೆಚ್ಚು ಚೀಲಗಳ ಪ್ಲಾಸ್ಟಿಕ್ ಬಾಟಲಿಗಳು ಮತ್ತು ಬೂಟುಗಳನ್ನು ತಿರುವನಂತಪುರದಲ್ಲಿ ಈಗಾಗಲೇ ಬೇರ್ಪಡಿಸಲಾಗಿದೆ ಎಂದು ತಿಳಿದುಬಂದಿದೆ. ಕಡಲತೀರಗಳು ಕಾರ್ಖಾನೆಗಳಿಂದ ಹರಿಯುವ ರಾಸಾಯನಿಕ ತ್ಯಾಜ್ಯ ಮತ್ತು ಪ್ಲಾಸ್ಟಿಕ್‍ಗಳ ನಿಕ್ಷೇಪಗಳಾಗಿವೆ.

                  ಹಲವೆಡೆ ಸ್ವಯಂಸೇವಕರು ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಿದ್ದಾರೆ. ಆದರೆ ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕೆ ಎಂದು ನಿರ್ಧರಿಸದ ಕಾರಣ ಕರಾವಳಿ ನಿವಾಸಿಗಳು ತೀವ್ರ ಸಂಕಷ್ಟದಲ್ಲಿದ್ದಾರೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries