HEALTH TIPS

ಗಿಡ ನೆಡುವ ಜನರಿಗೆ ಪ್ರಶಸ್ತಿ ನೀಡುವ ಯೋಜನೆ ಪ್ರಾರಂಭಿಸಿದ ಮಧ್ಯಪ್ರದೇಶ ಸರ್ಕಾರ

         ಭೋಪಾಲ್: ಮಳೆಗಾಲದಲ್ಲಿ ಗಿಡಗಳನ್ನು ನೆಡುವ ನಾಗರಿಕರಿಗೆ ಪ್ರಶಸ್ತಿ ನೀಡುವ ಯೋಜನೆ ಅಂಕುರ್ ಅನ್ನು ಪ್ರಾರಂಭಿಸುವುದಾಗಿ ಮಧ್ಯಪ್ರದೇಶ ಸರ್ಕಾರ ಶನಿವಾರ ಪ್ರಕಟಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

       ಸಸಿಗಳನ್ನು ನೆಡಲು ಮುಂದಾಗಿರುವ ಜನರಿಗೆ ಅವರ ಭಾಗವಹಿಸುವಿಕೆಗಾಗಿ ಪ್ರಾಣವಾಯು ಪ್ರಶಸ್ತಿ ನೀಡಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.

        ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್, "ನಾವು ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸುತ್ತಿದ್ದೇವೆ. ಆದರೆ ಮರಗಳು ನೈಸರ್ಗಿಕ ಆಮ್ಲಜನಕವನ್ನು ಒದಗಿಸುತ್ತವೆ. ಯಾವುದೇ ಆಮ್ಲಜನಕ ಸ್ಥಾವರಗಳು ಮರಗಳಿಗಿಂತ ದೊಡ್ಡದಲ್ಲ. ಮಳೆಗಾಲದಲ್ಲಿ ಅಂಕುರ್ ಯೋಜನೆಯಡಿ ಸಸಿ ನೆಡುವ ಅಭಿಯಾನವನ್ನು ನಡೆಸಲಾಗುವುದು. ಪ್ರಕೃತಿಯಲ್ಲಿನ ಅಸಮತೋಲನವನ್ನು ಸರಿಪಡಿಸಬೇಕಾದರೆ ಮಳೆಗಾಲದಲ್ಲಿ ಹೆಚ್ಚಿನ ಮರಗಳನ್ನು ನೆಡುವುದಾಗಿ ಪ್ರತಿಜ್ಞೆ ಮಾಡುವಂತೆ ನಾಗರಿಕರನ್ನು ಒತ್ತಾಯಿಸಿದರು.

      ಈ ಮೂಲಕ ಸಾರ್ವಜನಿಕರನ್ನು ಈ ಯೋಜನೆಯಲ್ಲಿ ಭಾಗವಹಿಸುವಂತೆ ಮಾಡಲಾಗುತ್ತದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೀವಾಸ್ತವ್ ಹೇಳಿದರು.

         ಟ್ರೀ ಪ್ಲಾಂಟೇಶನ್ ಡ್ರೈವ್‌ನಲ್ಲಿ ಭಾಗವಹಿಸಲು ಬಯಸುವ ಜನರು ವಾಯುದೂತ್ ಆಯಪ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಮೊದಲಿಗೆ ಸಸಿ ನೆಡುವವರು ಚಿತ್ರವನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ. ಜೊತೆಗೆ 30 ದಿನಗಳವರೆಗೆ ಸಸಿಯನ್ನು ನೋಡಿಕೊಂಡ ನಂತರ ಮತ್ತೊಂದು ಛಾಯಾಚಿತ್ರವನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ ಎಂದು ಶ್ರೀವಾಸ್ತವ್ ಹೇಳಿದರು.

ಪರಿಶೀಲನೆಯ ನಂತರ, ಪ್ರತಿ ಜಿಲ್ಲೆಯಿಂದ ಆಯ್ಕೆಯಾದ ವಿಜೇತರಿಗೆ ಮುಖ್ಯಮಂತ್ರಿ ಪ್ರಾಣವಾಯು ಪ್ರಶಸ್ತಿಯನ್ನು ನೀಡಲಿದ್ದಾರೆ ಎಂದು ಅಧಿಕಾರಿ ಹೇಳಿದರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries