ತಿರುವನಂತಪುರ: ರಾಜ್ಯದಲ್ಲಿ ಕೊರೋನಾ ಹರಡುವಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ತಜ್ಞರು ಕೂಡಲೇ ಲಾಕ್ ಡೌನ್ ಘೋಷಿಸಲು ನಿರ್ದೇಶನ ನೀಡಿದ್ದಾರೆ. ಸಂಜೆ ನಂತರ ಮತ್ತೆ ಪರಿಸ್ಥಿತಿ ಹದಗೆಡುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ. ಲಸಿಕೆಯ ಮೊದಲ ಡೋಸ್ ಎಲ್ಲರಿಗೂ ಲಭ್ಯವಾಗುವಂತೆ ತಜ್ಞರು ಒತ್ತಾಯಿಸಿರುವರು.
ಮೇ.4 ರಿಂದ ಮುಂದಿನ ಏಳು ದಿನಗಳವರೆಗೆ ರಾಜ್ಯದಲ್ಲಿ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿದೆ. ಆದರೆ ಈ ನಿರ್ಬಂಧಗಳು ಸಾಕಾಗದು. ಕನಿಷ್ಠ ಎರಡು ವಾರಗಳವರೆಗೆ ಸಂಪೂರ್ಣ ಲಾಕ್ ಡೌನ್ ಮಾಡುವಂತೆ ತಜ್ಞರು ಸೂಚಿಸಿದ್ದಾರೆ. ಈಗ ಲಾಕ್ ಡೌನ್ ಹೇರದಿದ್ದರೆ ಬಳಿಕ ಯಾವ ಪ್ರಯೋಜನವೂ ಇರದು ಎಂದು ಎಚ್ಚರಿಕೆ ನೀಡಲಾಗಿದೆ.
ಎರಡನೇ ಡೋಸ್ ಲಸಿಕೆಗೆ ಆದ್ಯತೆ ನೀಡುವ ಬದಲು, ಮೊದಲ ಡೋಸ್ ನ್ನು ಹೆಚ್ಚಿನ ಜನರಿಗೆ ನೀಡಬೇಕು. ಸೋಂಕಿನ ತೀವ್ರತೆಯನ್ನು ಕಡಿಮೆ ಮಾಡಲು ಜನರು ಕನಿಷ್ಠ ಒಂದು ಡೋಸ್ ತೆಗೆದುಕೊಳ್ಳಬೇಕೆಂದು ತಜ್ಞರು ಶಿಫಾರಸು ಮಾಡಿದ್ದಾರೆ. ಏಕೆಂದರೆ ಲಸಿಕೆಯ ಒಂದು ಡೋಸ್ ಮೂಲಕ ರೋಗನಿರೋಧಕ ಶಕ್ತಿಯನ್ನು ಖಚಿತಪಡಿಸಿಕೊಳ್ಳಬಹುದು ಎಂದು ಸೂಚಿಸಲಾಗಿದೆ.
ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಭಾನುವಾರವೂ ಸತತ ಆರನೇ ದಿನ 30,000 ದಾಟಿದ ಹಿನ್ನೆಲೆಯಲ್ಲಿ ತಜ್ಞರು ಸರ್ಕಾರಕ್ಕೆ ಈ ನಿರ್ದೇಶನ ನೀಡಿದ್ದಾರೆ. ಪರೀಕ್ಷಾ ಸಕಾರಾತ್ಮಕ ದರಗಳು ಸಹ ಹೆಚ್ಚಾಗಿದೆ. ತಿರುವನಂತಪುರ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಆಮ್ಲಜನಕ ಹಾಸಿಗೆಗಳ ಕೊರತೆ ಇದೆ. ಇದು ಪ್ರಕರಣಗಳ ಸಂಖ್ಯೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.





