HEALTH TIPS

ಸಮರಸ ಸಂವಾದ: ಅತಿಥಿ: ಶಿಕ್ಷಣ ಸಲಹೆಗಾರ ಕೃಷ್ಣ ಆಳ್ವ.ಅನಂತಪುರ. ವಿಷಯ:ಕೋವಿಡ್ ಹಿನ್ನೆಲೆಯಲ್ಲಿ ಹಳಿತಪ್ಪಿದ ಶಿಕ್ಷಣ ಕ್ಷೇತ್ರದ ಸಾಧಕ-ಬಾಧಕಗಳು. ವಿದ್ಯಾಭ್ಯಾಸ:ಮುಂದೇನು.

   ಮಹಾಮಾರಿ ಕೋವಿಡ್ ಹಿನ್ನೆಲೆಯಲ್ಲಿ ಕಳೆದೊಂದು ವರ್ಷಕ್ಕಿಂತಲೂ ಹೆಚ್ಚು ಕಾಲಗಳಿಂದ ದಿಕ್ಕೆಟ್ಟಿರುವ ಶಾಲಾ ಶಿಕ್ಷಣ ಕ್ಷೇತ್ರ ಭಾರೀ ಅತಂಕಗಳಿಗೆ ಕಾರಣವಾಗಿದೆ. ಪುಟಾಣಿಗಳ ಅಕ್ಷರ ಕಲಿಕೆಯ ಬೆಳಕು ಕುಂದುವ ಭೀತಿಯಲ್ಲಿದೆ. ಗ್ರಾಮೀಣ ಪ್ರದೇಶಗಳಲ್ಲಂತೂ ಪರಿಸ್ಥಿತಿ  ಭಿನ್ನ ಹಾದಿ ತುಳಿದಿದ್ದು, ಮಕ್ಕಳ ಭವಿಷ್ಯದ ಕನಸಿಗೆ ತಣ್ಣೀರೆರಚಿದೆ. 

  ಈ ಹಿನ್ನೆಲೆಯಲ್ಲಿ ಸಭ್ಯ ನಾಗರಿಕ ಸಮಾಜದ ಡೋಲಾಯಮಾನ,ಉತ್ತರಗಳಿಲ್ಲದ ಸವಾಲುಗಳಿಗೆ ಶಿಕ್ಷಣ ಸಲಹೆಗಾರರ ಮೂಲಕ ಒಂದಷ್ಟು ಸ್ಥ್ಯೆರ್ಯ ಮೂಡಿಸುವ ಸಮರಸದ ಯತ್ನ ಈ ಮೂಲಕ.

  ಇಂದು ನಮ್ಮ ಜೊತೆ ಚಿಂತನೆ ಹಂಚಿಕೊಂಡವರು ಶ್ರೀ.ಕೃಷ್ಣ ಆಳ್ವ. ಅನಂತಪುರ ಅವರು. ಪುತ್ತಿಗೆ ಗ್ರಾ.ಪಂ.ವ್ಯಾಪ್ತಿಯ ಕಣ್ಣೂರು ಗ್ರಾಮದ ಅನಂತಪುರ ನಿವಾಸಿಯಾದ ಶ್ರೀಯುತ ಆಳ್ವರು ಸುದೀರ್ಘ ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ದುಡಿದವರು. ರಾಷ್ಟ್ರದ ಪ್ರಮುಖ ಸೇವಾ ಸಂಸ್ಥೆಗಳಲ್ಲಿ ಒಂದಾದ ಅಜೀಂ ಪ್ರೇಂ ಜಿ ಫೌಂಡೇಶನ್ ನಲ್ಲಿ ಕಾರ್ಯನಿರ್ವಹಿಸಿದವರು. ಜೊತೆಗೆ ಕೇರಳ ಶಿಕ್ಷಣ ಇಲಾಖೆಗೆ ಬೇಕಾಗಿ ವಿವಿಧ ದಿಶೆಗಳಲ್ಲಿ ಮಾರ್ಗದರ್ಶಕರಾಗಿರುವರು. ಸಾಮಾಜಿಕ,ಸಾಂಸ್ಕೃತಿಕ,ರಾಜಕೀಯ ಕ್ಷೇತ್ರಗಳ ಕಾಳಜಿಯವರಾದ ಆಳ್ವರು ರಾಷ್ಟ್ರದ ಸಮಗ್ರ ಶಿಕ್ಷಣ ವ್ಯವಸ್ಥೆಯನ್ನು ಆಳವಾಗಿ ಅಧ್ಯಯನ ಮಾಡಿದವರು. ಇಂದು ಅವರೊಂದಿಗೆ ಸಮರಸಸುದ್ದಿ ನಡೆಸಿದ ಸಂವಾದದ ಆಯ್ದ ಭಾಗಗಳು ವೀಕ್ಷಕರಿಗಾಗಿ.
     ವೀಕ್ಷಿಸಿ, ಕಳಕಳಿಯ ವಿಚಾರಗಳನ್ನು ಇತರರಿಗೂ ಹಂಚಿ...ಸಮರಸ ಸುದ್ದಿಯನ್ನು ಸಹೃದಯದಿಂದ ಪ್ರೋತ್ಸಾಹಿಸಿ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries