ತಿರುವನಂತಪುರ: ಎರಡನೇ ಬಾರಿ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ಎಲ್.ಡಿ.ಎಫ್ ಸರ್ಕಾರದ ಮೊದಲ ಆದ್ಯತೆಯ ಪ್ರಕಟಣಾ ಭಾಷಣದಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹಲವಾರು ಕಲ್ಯಾಣ ಯೋಜನೆಗಳನ್ನು ಪ್ರಸ್ತಾಪಿಸಿದ್ದಾರೆ. ಪ್ರಣಾಳಿಕೆಯ ವಿಷಯಗಳನ್ನು ಜಾರಿಗೆ ತರಲು ಸರ್ಕಾರ ಸನ್ನದ್ದವಾಗಿದೆ ಎಂದು ರಾಜ್ಯಪಾಲರು ಹೇಳಿರುವರು.
ಸರ್ಕಾರಿ ಸೇವೆಗಳು ಅಕ್ಟೋಬರ್ 2 ರಿಂದ ಆನ್‍ಲೈನ್‍ನಲ್ಲಿ ಲಭ್ಯವಿರುತ್ತವೆ. ಸಾರ್ವಜನಿಕ ಸ್ಥಳಗಳಲ್ಲಿ ಉಚಿತ ವೈಫೈ ಲಭ್ಯವಿರುತ್ತದೆ. ಹೈ-ಸ್ಪೀಡ್ ಇಂಟರ್ನೆಟ್ ನ್ನು ಬಡವರಿಗೆ ಉಚಿತವಾಗಿಸಲಾಗುವುದು ಎಂದು ರಾಜ್ಯಪಾಲರು ಸರ್ಕಾರದ ಆಡಳಿತ ಲಕ್ಷ್ಯದ ಬಗ್ಗೆ ಬೆಳಕುಚೆಲ್ಲಿದರು.
ಸ್ತ್ರೀವಾದ ಮತ್ತು ಜಾತ್ಯತೀತತೆಯ ಬಗ್ಗೆ ಕೆಲಸ ಮಾಡುವುದು ಸರ್ಕಾರದ ಗುರಿಯಾಗಿದೆ. ಈ ಸರ್ಕಾರವು ಸಮಾಜದ ಕಟ್ಟಕಡೆಯಲ್ಲಿರುವವರ ಉನ್ನತಿಗೆ ಕಾರ್ಯಯೋಜನೆ ಹೊಂದಿದೆ. ಆರ್ಥಿಕ ಬಿಕ್ಕಟ್ಟಿನ ಹೊರತಾಗಿಯೂ, ಸರ್ಕಾರ ಈ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಂಡಿದೆ. ಕೋವಿಡ್ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲು ಸರ್ಕಾರಕ್ಕೆ ಸಾಧ್ಯವಾಗಿದೆ ಎಂದು ರಾಜ್ಯಪಾಲರು ಹೇಳಿದರು.






