HEALTH TIPS

ಲಾಕ್ ಡೌನ್: ತುರ್ತು ಪ್ರಯಾಣ ಪಾಸ್ ಪಡೆಯಲು ವೆಬ್‍ಸೈಟ್ ಕಾರ್ಯಾರಂಭ

                                  

             ತಿರುವನಂತಪುರಂ: ಲಾಕ್ ಡಾನ್ ಸಂದರ್ಭ ಕೇರಳ ಪೋಲೀಸರು ತುರ್ತು ಪ್ರಯಾಣಕ್ಕಾಗಿ ನೀಡಿರುವ ಪಾಸ್‍ಗೆ ಅರ್ಜಿ ಸಲ್ಲಿಸಲು ವೆಬ್‍ಸೈಟ್ ನಿನ್ನೆ ಸಂಜೆ ಪ್ರಾರಂಭಿಸಲಾಗಿದೆ. ಅರ್ಜಿದಾರರು https://pass.bsafe.kerala.gov.in/ ವೆಬ್‍ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.



                   ಅಗತ್ಯ ಸೇವೆಗಳ ವಿಭಾಗದಲ್ಲಿ ಗುರುತಿನ ಚೀಟಿ ಇಲ್ಲದವರು ಮತ್ತು ಗೃಹ ಕಾರ್ಮಿಕರು ಮತ್ತು ಇತರ ಕಾರ್ಮಿಕರು ಆನ್‍ಲೈನ್‍ನಲ್ಲಿ ಪಾಸ್‍ಗೆ ಅರ್ಜಿ ಸಲ್ಲಿಸಬಹುದು. ಅವರ ಉದ್ಯೋಗದಾತರು ಸಹ ಅರ್ಜಿ ಸಲ್ಲಿಸಬಹುದು. ಪಾಸ್ ನ್ನು ಈ ಸೈಟ್ನಿಂದ ಅನುಮತಿಯೊಂದಿಗೆ ಡೌನ್ಲೋಡ್ ಮಾಡಬಹುದು.

                ಅಂತರ್ ಜಿಲ್ಲಾ ಪ್ರಯಾಣ ಕೂಡದೆಂದು ಈಹಿಂದೆಯೇ ತಿಳಿಸಲಾಗಿತ್ತು. ಆದರೂ ಅತೀ ತುರ್ತು ಕಾರ್ಯಕ್ರಮಗಳು,  ಮದುವೆ, ಅತ್ಯಂತ ಹತ್ತಿರದ ಸಂಬಂಧಿಯ ಭೇಟಿ ಅಥವಾ ರೋಗಿಯನ್ನು ಚಿಕಿತ್ಸೆಗೆ ವರ್ಗಾಯಿಸಲು ಮಾತ್ರ ಜಿಲ್ಲೆಯಿಂದ ಪ್ರಯಾಣಿಸಲು ಅನುಮತಿ ಇದೆ.

               ಪೆÇಲೀಸ್ ಪಾಸ್ ನೊಂದಿಗೆ ಗುರುತಿನ ಚೀಟಿ ಇರಬೇಕು. ವ್ಯಾಕ್ಸಿನೇಷನ್ ಮಾಡಲು ಹೋಗುವವರಿಗೆ ಮತ್ತು ಅಗತ್ಯ ವಸ್ತುಗಳನ್ನು ಖರೀದಿಸಲು ಹತ್ತಿರದ ಅಂಗಡಿಗಳಿಗೆ ಹೋಗುವವರಿಗೆ ಅಫಿಡವಿಟ್ ಅಗತ್ಯವಿದೆ. ಇದರ ಮಾದರಿಯು ಈ ವೆಬ್‍ಸೈಟ್‍ನಲ್ಲಿ ಲಭ್ಯವಿದೆ. ಅಫಿಡವಿಟ್ ತಯಾರಿಸಲು ಈ ಸ್ವರೂಪದಲ್ಲಿ ಬಿಳಿ ಕಾಗದದ ಮೇಲೆ ಸ್ವತಃ ಬರೆದು ಸಹಿ ಹಾಕಿದ್ದರೆ ಸಾಕಾಗುತ್ತದೆ.  



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries