HEALTH TIPS

ಇದೇ ಮೊದಲು: ಪಾಕಿಸ್ತಾನದ ಪ್ರತಿಷ್ಠಿತ ಸಿಎಸ್‌ಎಸ್ ಪರೀಕ್ಷೆಯಲ್ಲಿ ಹಿಂದೂ ಮಹಿಳೆ ಪಾಸ್!

        ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಇದೇ ಮೊದಲ ಬಾರಿಗೆ ಹಿಂದೂ ಮಹಿಳೆಯೊಬ್ಬರು ಪ್ರತಿಷ್ಠಿತ ಕೇಂದ್ರಿಯ ಸುಪೀರಿಯರ್ ಸರ್ವೀಸಸ್ (ಸಿಎಸ್‌ಎಸ್) ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಆ ಮೂಲಕ ಪಾಕಿಸ್ತಾನ ಆಡಳಿತ ಸೇವೆಗೆ (ಪಿಎಎಸ್) ಆಯ್ಕೆಯಾಗಿದ್ದಾರೆ.

         ಎಂಬಿಬಿಎಸ್ ಡಾಕ್ಟರ್ ಸನಾ ರಾಮಚಂದ್ ಸಿಎಸ್‌ಎಸ್ ಪರೀಕ್ಷೆ ಪಾಸ್ ಮಾಡಿದ ಹಿಂದೂ ಮಹಿಳೆ. ಇವರು ಅತಿ ಹೆಚ್ಚು ಹಿಂದೂ ಜನಸಂಖ್ಯೆಯನ್ನು ಹೊಂದಿರುವ ಸಿಂಧ್ ಪ್ರಾಂತ್ಯದ ಶಿಕರ್ ಪುರ  ಜಿಲ್ಲೆಯ ಗ್ರಾಮೀಣ ಪ್ರದೇಶದಿಂದ ಬಂದವರಾಗಿದ್ದಾರೆ.

          ಲಿಖಿತ ಪರೀಕ್ಷೆಗೆ ಹಾಜರಾಗಿದ್ದ 18,553 ಅಭ್ಯರ್ಥಿಗಳ ಪೈಕಿ 221 ಮಂದಿ ಅಭ್ಯರ್ಥಿಗಳು ಸಿಎಸ್‌ಎಸ್ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ. ಅವರಲ್ಲಿ ಸನಾ ರಾಮಚಂದ್ ಕೂಡಾ ಒಬ್ಬರಾಗಿದ್ದಾರೆ. ವಿಸ್ತಾರವಾದ ವೈದ್ಯಕೀಯ , ಮಾನಸಿಕ ಮತ್ತು ಮೌಖಿಕ ಪರೀಕ್ಷೆ ನಂತರ ಅಂತಿಮ ಆಯ್ಕೆ ಮಾಡಲಾಗುತ್ತದೆ.

        ಫಲಿತಾಂಶದ ನಂತರ ಟ್ವೀಟ್ ಮಾಡಿರುವ ಸನಾ ರಾಮಚಂದ್, ವಹೇಗುರು ಜಿ ಕಾ ಖಲ್ಸಾ ವಹೇ ಗುರು ಜಿಕಿ ಫತೇಹ್, ಸರ್ವಶಕ್ತನಾದ ಅಲ್ಲಾಹನ ಕೃಪೆಯಿಂದ ನಾನು ಸಿಎಸ್ ಎಸ್ 2020ನ್ನು ಪೂರ್ಣಗೊಳಿಸಿದ್ದೇನೆ. ಪಿಎಸ್ ಎಸ್ ಹುದ್ದೆಗೆ ನೇಮಕವಾಗಿದ್ದೇನೆ ಎಂದು ಹೇಳಿಕೊಳ್ಳಲು ನನಗೆ ಸಂತೋಷವಾಗಿದೆ. ಇದರ ಎಲ್ಲಾ ಕ್ರೆಡಿಟ್ ನನ್ನ ಪೋಷಕರಿಗೆ ಹೋಗುತ್ತದೆ ಎಂದು ಬರೆದುಕೊಂಡಿದ್ದಾರೆ.

      ಪಿಎಎಸ್ ಉನ್ನತ ಶ್ರೇಣಿಯಾಗಿದ್ದು, ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಸಹಾಯಕ ಆಯುಕ್ತರನ್ನಾಗಿ ನಿಯೋಜಿಸಲಾಗುತ್ತದೆ ನಂತರ ಜಿಲ್ಲಾಧಿಕಾರಿಯಾಗಿ ಬಡ್ತಿ ನೀಡಲಾಗುತ್ತದೆ. ಸನಾ ರಾಮಚಂದ್ ಪಿಎಎಸ್ ಹುದ್ದೆಗೇರಿದ ಪ್ರಥಮ ಹಿಂದೂ ಮಹಿಳೆಯಾಗಿದ್ದಾರೆ ಎಂದು ಬಿಬಿಸಿ ಉರ್ದು ವರದಿ ಮಾಡಿದೆ.

         ಪಾಕಿಸ್ತಾನದಲ್ಲಿ ಹಿಂದೂ ಸಮುದಾಯಕ್ಕೆ ಸನಾ ರಾಮಚಂದ್ ಹೆಮ್ಮೆಯನ್ನುಂಟು ಮಾಡಿದ್ದಾರೆ ಎಂದು ಪಿಪಿಪಿ ಹಿರಿಯ ಮುಖಂಡ ಫರ್ಹತುಲ್ಲಾ ಬಾಬರ್ ಟ್ವೀಟ್ ಮಾಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries