HEALTH TIPS

ಕೋವಿಡ್ ನಂತರದ ಅವಧಿಗಾಗಿ ಚಿಕಿತ್ಸಾ ಕ್ಲಿನಿಕ್ ಗಳನ್ನು ಸಜ್ಜುಗೊಳಿಸಲಿರುವ ಹೋಮಿಯೋ ಇಲಾಖೆ

                              

           ಕಾಸರಗೋಡು: ಕೋವಿಡ್ ನಂತರದ ಅವಧಿಗಾಗಿ ಹೋಮಿಯೋ ಇಲಾಖೆ ಕಾಸರಗೋಡು ಜಿಲ್ಲೆಯಲ್ಲಿ ಪ್ರತ್ಯೇಕ ಚಿಕಿತ್ಸಾ ಕ್ಲಿನಿಕ್ ಗಳನ್ನು ಸಜ್ಜುಗೊಳಿಸಲಿದೆ. 

                   ಕೋವಿಡ್ ಒಂದು ಅಸಾಮಾನ್ಯ ರೋಗವಾಗಿ ಕಾಡುತ್ತಿರುವ ಪರಿಣಾಮ, ಕೋವಿಡ್ ನಿಂದ ಗುಣಮುಖರಾದವರಲ್ಲೂ ಕೆಲವು ಆರೋಗ್ಯ ಸಮಸ್ಯೆಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಹೋಮಿಯೋಪತಿ ಇಲಾಖೆ ಈ ರೀತಿಯ ವ್ಯವಸ್ಥೆಗಳನ್ನು ಜಾರಿಗೆ ತರಲಿದೆ. ಹೋಮಿಯೋಪತಿ ಇಲಾಖೆಯ ಜಿಲ್ಲಾ ವೈದ್ಯಾಧಿಕಾರಿ ಅವರು ನೋಡೆಲ್ ಅಧಿಕಾರಿಯಾಗಿರುವ ಯೋಜನೆಯೊಂದು ಈ ನಿಟ್ಟಿನಲ್ಲಿ ಜಾರಿಗೊಂಡಿದೆ. ಇದರ ಅಂಗವಾಗಿ ಜಿಲ್ಲೆಯ ಎಲ್ಲ ಸರಕಾರಿ ಹೋಮಿಯೋ 

 


ಡಿಸ್ಪೆನ್ಸರಿಗಳಲ್ಲೂ, ತಾಲೂಕು ಹೋಮಿಯೋ ಆಸ್ಪತ್ರೆಗಳಲ್ಲೂ ಆಯುಷ್ ಡಿಸ್ಪೆನ್ಸರಿಗಳೂ ಕೋವಿಡ್ ನಂತರಹೋಮಿಯೋಪತಿ ಪ್ರಾಥಮಿಕ ಕೇಂದ್ರಗಳಾಗಿ ಚಟುವಟಿಕೆ ನಡೆಸಲಿವೆ. ಪ್ರತಿ ಮಂಗಳ, ಗುರು ವಾರದಂದು ಮಧ್ಯಾಹ್ನ 12ರಿಂದ 2 ಗಂಟೆ ವರೆಗೆ ಸಾರ್ವಜನಿಕರಿಗೆ ಇಲ್ಲಿ ಸೇವೆ ಲಭಿಸಲಿದೆ. ಪ್ರತಿದಿನ ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಜಿಲ್ಲಾ ಹೋಮಿಯೋ ಆಸ್ಪತ್ರೆಗಳು ಕೋವಿಡ್ ನಂತರ ಪ್ರಾಥಮಿಕ ಕೇಂದ್ರಗಳಾಗಿ ಚಟುವಟಿಕೆ ನಡೆಸಲಿವೆ. ಈ ಕೇಂದ್ರಗಳಲ್ಲಿ ಲಭ್ಯವಿರುವ ಹಾಸುಗೆಗಗಳಲ್ಲಿ ಶೇ 20 ಕೋವಿಡ್ ನಂತರದ ಚಿಕಿತ್ಸೆಗೆ ಮೀಸಲಿರುವುದು. 


            ಈ ನಿಟ್ಟಿನಲ್ಲಿ ಅಗತ್ಯದ ಪ್ರಮಾಣದ ವೈದ್ಯರು ಸಹಿತ ಸಿಬ್ಬಂದಿಯನ್ನು ಸಜ್ಜುಗೊಳಿಸಲಾಗಿದೆ ಎಂದು ಹೋಮಿಯೋ ಜಿಲ್ಲಾ ವೈದ್ಯಾಧಿಕಾರಿ ಡಾ.ಅಶೋಕ್ ಕುಮಾರ್ ಐ.ಆರ್. ತಿಳಿಸಿದರು. ಕೋವಿಡ್ ತಗುಲಿದ ನಂತರ ತತ್ಸಂಬಂಧಿ ಇತರ ಆರೋಗ್ಯ ಸಮಸ್ಯೆ ಅನುಭವಿಸುತ್ತಿರುವ ಮಂದಿ ಈ ಕೆಂದ್ರಗಳಿಂದ ಚಿಕಿತ್ಸೆ ಪಡೆಯುವುದು ಪ್ರಯೋಜನಕಾರಿ. ಕೇಂದ್ರಗಳಿಗೆ ಹಾಜರಾಗಲು ಸಾಧ್ಯವಾಗದೇ ಇರುವ ಮಂದಿಗಾಗಿ ದೂರವಾಣಿ/ ವೀಡಿಯೋ ಸೌಲಭ್ಯಗಳ ಮೂಲಕವೂ ಚಿಕಿತ್ಸೆ ಒದಗಿಸುವ ಸಜ್ಜೀಕರಣ ನಡೆಸಲಾಗುವುದು ಎಂದವರು ನುಡಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries