ಕಾಸರಗೋಡು: ಕೋವಿಡ್ ತಡೆಗಟ್ಟುವ ಚಟುವಟಿಕೆಗಳ ಅಂಗವಾಗಿ ಅಜಾನೂರು ಪಂಚಾಯತಿ ಸದಸ್ಯ ಸಿ.ಕೆ.ಇರ್ಷಾದ್ ಅವರ ನೇತೃತ್ವದಲ್ಲಿ ಕೋವಿಡ್ ಜಾಗೃತಾ ಸಮಿತಿಯ ಸಹಯೋಗದೊಂದಿಗೆ ಚಿತ್ತಾರಿ ಸೌತ್ ನಲ್ಲಿ ಕೋವಿಡ್ ವಾರ್ ರೂಮ್ ಗುರುವಾರ ಆರಂಭಗೊಂಡಿತು.
ಅಜಾನೂರು ಪಂಚಾಯತಿ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಶೀಬಾ ಉಮ್ಮರ್ ಸಮಾರಂಭವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮುಸ್ಲಿಂ ಲೀಗ್ ವಾರ್ಡ್ ಅಧ್ಯಕ್ಷ ಬಶೀರ್ ಮಟ್ಟುಮ್ಮಲ್, ಪ್ರಧಾನ ಕಾರ್ಯದರ್ಶಿ ಅಹ್ಮದ್ ಕಪ್ಪನಕ್ಕಲ್, ಗ್ರಾ.ಪಂ.ಸದಸ್ಯರಾದ ಹಜಾರಾ ಸಲಾಮ್, ಬಶೀರ್ ಚಿತ್ತಾರಿ, ಕೆ.ಸಿ.ಮೊಹಮ್ಮದ್ ಕುಂಞÂ, ಜಂಶೀದ್ ಕುನ್ನಮ್ಮಲ್, ಹರೂನ್ ಚಿತ್ತಾರಿ, ರಾಫಿ ತಾಯಲ್, ಅಶ್ರಫ್ ಬೋಂಬೆ, ಆಶಾ ಕಾರ್ಯಕರ್ತೆಯರಾದ ರಮಣಿ, ಮಾಯಾ ಮೊದಲಾದವರು ಉಪಸ್ಥಿತರಿದ್ದರು.
ಗಾಲಿಕುರ್ಚಿಗಳು, ಪಿಪಿಇ ಕಿಟ್‍ಗಳು, ಆಕ್ಸಿಮೀಟರ್‍ಗಳು, ಮಾಸ್ಕ್ ಗಳು, ಕೈಗವಸುಗಳು ಮತ್ತು ಸ್ಯಾನಿಟೈಜರ್‍ಗಳು ವಾರ್ ರೂಮ್ ನಲ್ಲಿ ತುರ್ತು ಬಳಕೆಗಾಗಿ ಲಭ್ಯವಿದೆ. ಕೋವಿಡ್ ವಾರ್ ರೂಂ ಸೋಂಕಿತರ ಧೈರ್ಯ, ವೈದ್ಯಕೀಯ ಆರೈಕೆ, ಆಸ್ಪತ್ರೆ ಪ್ರವೇಶ, ತಪಾಸಣೆ, ರೋಗನಿರೋಧಕ ಶಕ್ತಿ ಮತ್ತು ಲಸಿಕೆ ನೋಂದಣಿ ಸೇರಿದಂತೆ ಹಲವಾರು ಸೇವೆಗಳನ್ನು ಒದಗಿಸುತ್ತದೆ. 18 ರಿಂದ 44 ವರ್ಷದೊಳಗಿನ ವಲಸಿಗರಿಗೆ ಲಸಿಕೆ ನೋಂದಣಿ ಮತ್ತು ಇತರ ಸೇವೆಗಳು ಸಹ ಇಲ್ಲಿ ಲಭ್ಯಗೊಳಿಸಲಾಗಿದೆ. ಎಲ್ಲಾ ಚಟುವಟಿಕೆಗಳನ್ನು ಮುನ್ನಡೆಸಲು 21 ನೇ ವಾರ್ಡ್ ವಿಜಿಲೆನ್ಸ್ ಸಮಿತಿ ಮುಂಚೂಣಿಯಲ್ಲಿದೆ. ಸಂಪರ್ಕ ಸಂಖ್ಯೆ: 9605866988.


