ಬದಿಯಡ್ಕ: ಶ್ರೀದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಕೊಲ್ಲಂಗಾನ ಇದರ 24ನೇ ವರ್ಷದ ಯಶಸ್ವಿ ತಿರುಗಾಟ ಶುಕ್ರವಾರ ಶ್ರೀಕ್ಷೇತ್ರ ಕೊಲ್ಲಂಗಾನದಲ್ಲಿ ನಡೆಯಿತು.
ತಂತ್ರಿವರ್ಯ ಗಣಾಧಿರಾಜ ಉಪಾಧ್ಯಾಯ ಅವರ ನೇತೃತ್ವದಲ್ಲಿ ಸಂಜೆ ರತಿ ಕಲ್ಯಾಣ ಯಕ್ಷಗಾನ ಪ್ರದರ್ಶನ ನಡೆಯಿತು. ಬಳಿಕ ಪಾರಂಪರಿಕ ಶೈಲಿಯಲ್ಲಿ ದೇವರ ಮುಂದೆ ಗಜ್ಜೆ ಸಹಿತ ಆಭರಣಗಳನ್ನು ಕಳಚಿಡುವ ಮೂಲಕ ಈ ವರ್ಷದ ತಿರುಗಾಟಕ್ಕೆ ಮಂಗಳ ಹಾಡಲಾಯಿತು.


