ಕಾಸರಗೋಡು: ಮುಳಿಯಾರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್, ಜ್ವರ ಕ್ಲಿನಿಕ್, ಆಕ್ಸಿಜನ್ ಸೌಲಭ್ಯವಿರುವ 25 ಬೆಡ್ ಗಳಿರುವ ಸಿ.ಎಫ್.ಎಲ್.ಟಿ.ಸಿ. ಶೀಘ್ರದಲ್ಲಿ ಆರಂಭಗೊಳ್ಳಲಿದೆ.
ಇದರ ಅಂಗವಾಗಿ ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್, ಜಿಲ್ಲಾ ಕೊರೋನಾ ನಿಯಂತ್ರಣ ಘಟಕ ಎಚ್.ಆರ್.ನೋಡೆಲ್ ಅಧಿಕಾರಿ ಡಾ.ಪ್ರಸಾದ್ ಥಾಮಸ್ , ಕಂಟೈನ್ಮೆಂಟ್ ಝೋನ್ ಆಂಡ್ ಕ್ಲಸ್ಟರ್ ಮೆನೆಜ್ಮೆಂಟ್ ನೋಡೆಲ್ ಅಧಿಕಾರಿ ಡಾ.ಮ್ಯಾಥ್ಯೂ ಜೆ.ವಾಳಂಪರಂಬಿಲ್ ಮುಳಿಯಾರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡಿ ಅವಲೋಕನ ನಡೆಸಿದರು. ಜಿಲ್ಲಾ ಆರೋಗ್ಯ ಕೇಂದ್ರದ ನೇತೃತ್ವದಲ್ಲಿ ಆರಂಭಿಸಲಾಗುವ ಆಸ್ಪತ್ರೆಗೆ ಅಗತ್ಯವಿರುವ ಸೌಲಭ್ಯಗಳನ್ನು ಕಾರಡ್ಕ ಬ್ಲೋಕ್ ಪಂಚಾಯತ್ ಒದಗಿಸಲಿದೆ. ಕೋವಿಡ್ ನಿಯಂತ್ರಣ ಘಟಕದ ಚಟುವಟಿಕೆ ಮತ್ತು ಆಂಬುಲೆನ್ಸ್ ಸೇವೆ ಈಗಾಗಲೇ ಆರಂಭಗೊಂಡಿದೆ. ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಳಗೊಂಡಿರುವ ಹಿನ್ನೆಲೆಯಲ್ಲಿ ಕಾರಡ್ಕ ಬ್ಲೋಕ್ನ 7 ಗ್ರಾಮ ಪಂಚಾಯತ್ ಗಳಲ್ಲೂ ಪ್ರಾಥಮಿಕ ಶುಶ್ರೂಷೆ ಕೇಂದ್ರಗಳು ಆರಂಭಗೊಂಡಿವೆ.


