ನವದೆಹಲಿ:ದೇಶದಲ್ಲಿ ಕೋವಿಡ್ ನ ಎರಡನೇ ತರಂಗ ವ್ಯಾಪಕವಾಗಿ ಮುಂದುವರಿದಂತೆ, ಕೋವಿಡ್ ವ್ಯಾಕ್ಸಿನೇಷನ್ ಕ್ರಮಗಳು ಸಹ ಪ್ರಗತಿಯಲ್ಲಿವೆ. ವ್ಯಾಕ್ಸಿನೇಷನ್ ನ್ನು ಕೇಂದ್ರ ಸರ್ಕಾರದ ಕೋವಿನ್ ಆನ್‍ಲೈನ್ ವ್ಯವಸ್ಥೆಯ ಮೂಲಕ ಅಥವಾ ಆರೋಗ್ಯ ಸೇತು ಆಪ್ ಮೂಲಕ ನೋಂದಾಯಿಸಬಹುದು.
ಆದರೆ ಈಗ ನೀವು ವ್ಯಾಕ್ಸಿನೇಷನ್ಗಾಗಿ ನೋಂದಾಯಿಸಿಕೊಳ್ಳಬಹುದು ಎಂದು ಎಸ್‍ಎಂಎಸ್ ಮೂಲಕ ನಕಲಿ ಸಂದೇಶಗಳನ್ನು ಹರಡಲಾಗುತ್ತಿದೆ. ಈ ಸಂದೇಶಗಳಲ್ಲಿ ಒದಗಿಸಲಾದ ಲಿಂಕ್ ಅನ್ನು ಕ್ಲಿಕ್ ಮಾಡುವುದರಿಂದ ಕೋವಿನ್ ಪೆÇೀರ್ಟಲ್ ಬದಲಿಗೆ ಮೋಸದ ವೆಬ್‍ಸೈಟ್‍ಗೆ ನಿಮ್ಮನ್ನು ಕರೆದೊಯ್ಯುತ್ತದೆ. ಈ ಹಗರಣದ ವರದಿಗಳ ಪ್ರಕಾರ, ಗ್ರಾಹಕರ ಪೋನ್‍ನಲ್ಲಿ ಅಪಾಯಕಾರಿ ಅಪ್ಲಿಕೇಶನ್ ಇನ್ಸ್ಟಾಲ್ ಆಗುವುದು.
ಈ ಅಪ್ಲಿಕೇಶನ್ ನ್ನು 'ಲಸಿಕೆ ರಿಜಿಸ್ಟರ್' ಹೆಸರಿನಲ್ಲಿ ನಿರ್ಮಿಸಲಾಗಿದೆ. ಕೋವಿನ್ ಪ್ಲಾಟ್‍ಫಾರ್ಮ್ ನ್ನು ಅನುಕರಿಸಿ ಈ ಮೋಸದ ಅಪ್ಲಿಕೇಶನ್ ನ್ನು ವಿನ್ಯಾಸಗೊಳಿಸಲಾಗಿದೆ. ಇದು ಅಪಾಯಕಾರಿ ಅಪ್ಲಿಕೇಶನ್ ಎಂದು ತಿಳಿಯದೆ ಬಳಕೆದಾರರು ಈ ಆಪ್ ನ್ನು ಇನ್ಸ್ಟಾಲ್ ಮಾಡುತ್ತಿರುವುದಾಗಿ ದೂರುಗಳು ಕೇಳಿಬಂದಿವೆ.






