ತಿರುವನಂತಪುರ: ಎಲ್‍ಡಿಎಫ್ ಸರ್ಕಾರದ ಚುನಾವಣಾ ಭರವಸೆಗಳನ್ನು ಸಮಯೋಚಿತವಾಗಿ ಪೂರ್ಣಗೊಳಿಸುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ 100 ದಿನಗಳ ಕಾರ್ಯಸೂಚಿ ಪ್ರಕಟಿಸಿದ್ದಾರೆ. ಕೋವಿಡ್ ಪರಿಸ್ಥಿತಿಯಲ್ಲಿ ಘೋಷಿಸಲಾದ ಲಾಕ್‍ಡೌನ್‍ನಿಂದ ಹಳಿತಪ್ಪಿದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವುದು ಯೋಜನೆಗಳ ಉದ್ದೇಶವಾಗಿದೆ ಎಂದುಮುಖ್ಯಮಂತ್ರಿ ನಿನ್ನೆ ವಿವರಿಸಿರುವರು. ಜೂನ್ 11 ರಿಂದ ಸೆಪ್ಟೆಂಬರ್ 19 ರವರೆಗೆ 100 ದಿನಗಳಲ್ಲಿ 2464.92 ಕೋಟಿ ರೂ.ಗಳ ಯೋಜನೆಗಳನ್ನು ಪ್ರಾರಂಭಿಸಲಾಗುವುದು ಎಂದು ಸಿಎಂ ಹೇಳಿದರು.
ವಲಸಿಗರಿಗೆ 100 ಕೋಟಿ ಸಾಲ ಯೋಜನೆ:
ವಿದೇಶ ರಾಷ್ಟ್ರಗಳಿಂದ ರಾಜ್ಯಕ್ಕೆ ಮರಳಿರುವ ವಲಸಿಗರಿಗೆ ಕೆ.ಎಸ್.ಐ.ಡಿ.ಸಿ. ಮೂಲಕ 100 ಕೋಟಿ ರೂ.ಗಳ ಸಾಲ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ಸಿಎಂ ಹೇಳಿದರು. ಸಾಲವು ಪ್ರತಿ ವ್ಯಕ್ತಿಗೆ 25 ಲಕ್ಷ ರೂ.ಗಳಿಂದ 2 ಕೋಟಿ ರೂ.ಗಳ ವರೆಗೂ ಲಭ್ಯವಾಗಲಿದೆ. ಸಮುದ್ರ ಮಟ್ಟ ಏರಿಕೆಯನ್ನು ಎದುರಿಸಲು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ನಿರ್ಮಾಣ ಪ್ರಾರಂಭವಾಗುತ್ತದೆ. 100 ದಿನಗಳಲ್ಲಿ 12000 ನಿವೇಶನ ನಕ್ಷೆ(ಪಟ್ಟೆ) ಗಳನ್ನು ರಾಜ್ಯದಲ್ಲಿ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು. ಲೈಫ್ ಮಿಷನ್ 10,000 ಹೊಸ ಮನೆಗಳನ್ನು ನಿರ್ಮಿಸಲಿದ್ದು, ವಿದ್ಯಾಶ್ರೀ 50,000 ಲ್ಯಾಪ್‍ಟಾಪ್ ಮತ್ತು 100 ಟೇಕ್ ಎ ಬ್ರೇಕ್ ಟಾಯ್ಲೆಟ್ ಸಂಕೀರ್ಣಗಳನ್ನು ಪ್ರಯಾಣಿಕರಿಗಾಗಿ ನಿರ್ಮಿಸಲಿದೆ. ಬಿಪಿಎಲ್ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ವಿದ್ಯಾರ್ಥಿವೇತನ, ವಿವಿಧ ಕಾಲೇಜುಗಳಲ್ಲಿ ಹೊಸ ಬ್ಲಾಕ್‍ಗಳು, 50 ಶಾಲಾ ಕಟ್ಟಡಗಳು, 43 ಹೈಯರ್ ಸೆಕೆಂಡರಿ ಲ್ಯಾಬ್‍ಗಳು ಮತ್ತು 3 ಗ್ರಂಥಾಲಯಗಳನ್ನು ಶೀಘ್ರದಲ್ಲೇ ತೆರೆಯಲಾಗುವುದು. ವಿಕ್ಟರ್ಸ್ ಚಾನೆಲ್ ಜೊತೆಗೆ, ಶಿಕ್ಷಕರು ಮಕ್ಕಳೊಂದಿಗೆ ನೇರವಾಗಿ ಸಂವಹನ ನಡೆಸಲು ಆನ್‍ಲೈನ್ ವ್ಯವಸ್ಥೆಯನ್ನು ಸಹ ಪ್ರಾರಂಭಿಸಲಾಗುವುದು. ಇದಲ್ಲದೆ, ವಿವಿಧ ಪ್ರವಾಸೋದ್ಯಮ ಯೋಜನೆಗಳನ್ನು ಪ್ರಾರಂಭಿಸಲಾಗುವುದು.
ಆರ್ಥಿಕ ಬೆಳವಣಿಗೆ ಹೆಚ್ಚಬೇಕು:
ಕೋವಿಡ್ ಪರಿಸ್ಥಿತಿಯಲ್ಲಿ ಆರ್ಥಿಕ ಪ್ರಗತಿಯನ್ನು ವೇಗಗೊಳಿಸಲು ನಿರ್ಮಾಣ ಕಾರ್ಯಗಳು ಮತ್ತು ಉದ್ಯೋಗ ಸೃಷ್ಟಿ ತುರ್ತು ಕಾರ್ಯವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಆರೋಗ್ಯ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಕ್ಷೇತ್ರಗಳಲ್ಲಿನ ಸಾಧನೆUಳು ವೇಗಪಡೆದು ಸಾಗಬೇಕು. ಆರ್ಥಿಕತೆಯ ವೇಗವನ್ನು ಹೆಚ್ಚಿಸಲು ಗುಣಮಟ್ಟದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನೀತಿಗಳು ಮತ್ತು ಯೋಜನೆಗಳಿಗೆ ಸರ್ಕಾರ ಆದ್ಯತೆ ನೀಡಲಿದೆ. ಇದು ನಗರಗಳಲ್ಲಿ ಪರಿಸರ ಸ್ನೇಹಿ ಅಭಿವೃದ್ಧಿ ಮತ್ತು ಘನತ್ಯಾಜ್ಯ ನಿರ್ವಹಣೆ ಬಗ್ಗೆಯೂ ಗಮನ ಹರಿಸಲಿದೆ. ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ವಿಷಕಾರಿಯಲ್ಲದ ಆಹಾರವನ್ನು ಉತ್ಪಾದಿಸಲು ಸರ್ಕಾರ ಉದ್ದೇಶಿಸಿದೆ.
ದೊಡ್ಡ ಯೋಜನೆಗಳೊಂದಿಗೆ ಸರ್ಕಾರ:
ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಅನುಷ್ಠಾನಗೊಳಿಸುವ ಮಾರ್ಗಸೂಚಿಗಳನ್ನು ಮೇ 20 ರಂದು ನಡೆದ ಮೊದಲ ಕ್ಯಾಬಿನೆಟ್ ಸಭೆಯ ಬಳಿಕ ಚರ್ಚಿಸಿ ಘೋಷಿಸಲಾಯಿತು. ಇದರ ಭಾಗವಾಗಿ 100 ದಿನಗಳ ಕಾರ್ಯಸೂಚಿಗಳಿಗೆ ಕೆಐಎಫ್‍ಬಿ(ಕಿಪ್ಬಿ) ನಿಧಿ, ಪುನರ್ನಿರ್ಮಾಣ ಕೇರಳ ಯೋಜನೆಗೆ ಲೋಕೋಪಯೋಗಿ ಇಲಾಖೆ `2464.92 ಕೋಟಿ ರೂ. ಬಳಸಲಿದೆ. ಈ ಮೊತ್ತದೊಂದಿಗೆ ಅನೇಕ ರಸ್ತೆಗಳು ಮತ್ತು ಚಂಡಮಾರುತದ ಪರಿಹಾರ ಆಶ್ರಯಗಳನ್ನು ನಿರ್ಮಿಸಲಾಗುತ್ತಿದೆ. ಸಾವಯವ ತರಕಾರಿ ಕೃಷಿಯನ್ನು ರಾಜ್ಯದಲ್ಲಿ 25000 ಹೆಕ್ಟೇರ್‍ನಲ್ಲಿ ಪ್ರಾರಂಭಿಸಲಾಗುವುದು. 100 ಅರ್ಬನ್ ಸ್ಟ್ರೀಟ್ ಮಾರುಕಟ್ಟೆಗಳು ತೆರೆಯಲಿವೆ. 150 ರೈತ ಉತ್ಪಾದಕ ಗುಂಪುಗಳು ಕಾರ್ಯಾಚರಣೆ ಪ್ರಾರಂಭಿಸಲಿದ್ದು, ಕುಟ್ಟನಾಡ್ ಬ್ರಾಂಡ್ ರೈಸ್ ಗಿರಣಿ ಕಾರ್ಯಾಚರಣೆ ಆರಂಭಿಸಲಿದೆ ಎಂದು ಸಿಎಂ ಹೇಳಿದರು. ಕೈಗಾರಿಕೋದ್ಯಮಿಗಳಿಗೆ ಭೂಮಿಯನ್ನು ಗುತ್ತಿಗೆ ನೀಡಲು ಸರ್ಕಾರ ಏಕೀಕೃತ ನೀತಿಯನ್ನು ತರಲಿದೆ. ಕಾಸರಗೋಡು ಇಎಂಎಲ್ ನ್ನು(ಬಿ.ಎಚ್.ಇ.ಎಲ್- ಇ.ಎಂ.ಎಲ್: ಇಲೆಕ್ಟ್ರಿಕಲ್ ಮೆಶಿನ್ಸ್ ಲಿಮಿಟೆಡ್) ಕೇರಳ ಸರ್ಕಾರ ವಹಿಸಿಕೊಳ್ಳಲಿದೆ ಎಂದು ಸಿಎಂ ಹೇಳಿದರು. 100 ದಿನಗಳ ಕಾರ್ಯಕ್ರಮದ ಪ್ರಗತಿಯನ್ನು 100 ದಿನಗಳ ನಂತರ ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿ ವಿವರ ನೀಡಿರುವರು.
20 ಲಕ್ಷ ಉದ್ಯೋಗಗಳು:
ರಾಜ್ಯದ 20 ಲಕ್ಷ ವಿದ್ಯಾವಂತರಿಗೆ ಉದ್ಯೋಗ ನೀಡುವ ಯೋಜನೆಯನ್ನು ರೂಪಿಸಲಾಗುವುದು ಮತ್ತು ಸ್ಥಳೀಯಾಡಳಿತ -ಸರ್ಕಾರಿ ಮಟ್ಟದಲ್ಲಿ ಸಾವಿರಕ್ಕೆ ಐದು ದರದಲ್ಲಿ ಉದ್ಯೋಗ ಸೃಷ್ಟಿಸಲಾಗುವುದು ಎಂದು ಸಿಎಂ ಹೇಳಿದರು. ಕರಡನ್ನು ಸ್ಥಳೀಯ ಸಂಸ್ಥೆಗಳು ಸಿದ್ಧಪಡಿಸುತ್ತವೆ. ಇದಲ್ಲದೆ, ವಿವಿಧ ಇಲಾಖೆಗಳ ಅಡಿಯಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುವುದು. ಕೈಗಾರಿಕಾ ಇಲಾಖೆ (10,000), ಸಹಕಾರ ಇಲಾಖೆ (10,000), ಕುಟುಂಬಶ್ರೀ (2,000), ಕೇರಳ ಹಣಕಾಸು ನಿಗಮ (2,000), ಮಹಿಳಾ ಅಭಿವೃದ್ಧಿ ನಿಗಮ (2500), ಹಿಂದುಳಿದ ಅಭಿವೃದ್ಧಿ ನಿಗಮ (2,500), ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ (2,500) , ಐ.ಟಿ. ವಿಭಾಗ(1000), ಸ್ಥಳೀಯಾಡಳಿತ ಇಲಾಖೆ (7,000), ಯುವ ಮಹಿಳಾ ಉದ್ಯಮಶೀಲತೆ ಕಾರ್ಯಕ್ರಮ (5000) ಮತ್ತು ಮೈಕ್ರೋ ಎಂಟರ್‍ಪ್ರೈಸಸ್ (2000) ಗಳಲ್ಲಿ ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗುವುದು. ಇದಲ್ಲದೆ, ಆರೋಗ್ಯ ಇಲಾಖೆಯಲ್ಲಿ 4142 ಪರೋಕ್ಷ ಉದ್ಯೋಗಗಳು ಮತ್ತು ಪಶುಸಂಗೋಪನಾ ವಿಭಾಗದಲ್ಲಿ 350 ಉದ್ಯೋಗಗಳನ್ನು ಸೃಷ್ಟಿಸಲಾಗುವುದು.
ಹೊಸ ರಸ್ತೆಗಳು:
ರಾಜ್ಯದಲ್ಲಿ ಸಂಭವಿಸಿದ ಪ್ರಾಕೃತಿಕ ದುರಂತದ ಬಳಿಕ ಸರ್ಕಾರ ಸ್ಥಾಪಿಸಿದ ಪುನರ್ನಿರ್ಮಾಣ ಕೇರಳ ಯೋಜನೆಗೆ ಜರ್ಮನಿಯ ವಿಶ್ವಬ್ಯಾಂಕ್, ಕೆಎಫ್‍ಡಬ್ಲ್ಯೂ ಮತ್ತು ಎಐಐಬಿಗಳಿಂದ 5898 ಕೋಟಿ ರೂ. ನೆರವು ನೀಡಲಿದೆ. ಇದಕ್ಕೆ ರಾಜ್ಯ ಸರ್ಕಾರದ ಪಾಲನ್ನು ಸೇರಿಸಿದಾಗ ಅದು 8425 ಕೋಟಿ ರೂ.ಗಳಾಗುತ್ತದೆ. ಈ ಮೊತ್ತದಲ್ಲಿ, ಮೊದಲ 100 ದಿನಗಳಲ್ಲಿ 945.35 ಕೋಟಿ ಮೌಲ್ಯದ 9 ರಸ್ತೆಗಳ ನಿರ್ಮಾಣವನ್ನು ಪ್ರಾರಂಭಿಸಲಾಗುವುದು. ಪತ್ತನಂತಿಟ್ಟು-ಆಯಿರುರು ರಸ್ತೆ, ಗಾಂಧಿನಗರ-ವೈದ್ಯಕೀಯ ಕಾಲೇಜು ರಸ್ತೆ, ಕುಮಾರಕಂ-ನೆಡುಂಬಸ್ಸೆರಿ ರಸ್ತೆ, ಮುವಾಟ್ಟುಪುಳ-ಥೇನಿ ರಾಜ್ಯ ಹೆದ್ದಾರಿ, ತ್ರಿಶೂರ್-ಕುಟ್ಟಿಪುರಂ ರಸ್ತೆ, ಅರಕ್ಕುನ್ನಂ-ಅಂಬಲೂರು-ಪೂತ್ತೊಟ್ಟಂ-ಪಿರವೋಮ್ ರಸ್ತೆ, ಕಾಕ್ಕಡಸ್ಕೇರಿ-ಕಾಲ್ಜಾಧಾಸುರಿ ಯೋಜನೆಗಳು 100 ದಿನಗಳಲ್ಲಿ ಪ್ರಾರಂಭವಾಗುತ್ತವೆ.
ಲೋಕೋಪಯೋಗಿ ಇಲಾಖೆ:
1519.57 ಕೋಟಿ ಮೌಲ್ಯದ ಯೋಜನೆಗಳನ್ನು 100 ದಿನಗಳಲ್ಲಿ ಪ್ರಾರಂಭಿಸಲಾಗುವುದು. ಇವು 146 ಕೋಟಿ ವೆಚ್ಚದಲ್ಲಿ ಕೊಲ್ಲಂ ಮತ್ತು ಆಲಪ್ಪುಳ ಜಿಲ್ಲೆಗಳನ್ನು ಸಂಪರ್ಕಿಸುವ ದೊಡ್ಡ ಅಜೀಕಲ್ ಸೇತುವೆ, 248.63 ಕೋಟಿ ವೆಚ್ಚದಲ್ಲಿ ಪ್ಲ್ಯಾಚೆರಿ-ಪೊಂಕುನ್ನಂ ರಸ್ತೆ, 156.33 ಕೋಟಿ ವೆಚ್ಚದಲ್ಲಿ ತಲಶೇರಿ-ವಳವುಪರ ರಸ್ತೆ ನಿರ್ಮಾನ ನಡೆಯಲಿದೆ. ಇದಲ್ಲದೆ, ಆರು ಚಂಡಮಾರುತದಿಂದ ಪಾರಾಗಲಿರುವ ನೆರವಿನ ಆಶ್ರಯಗಳನ್ನು ನಿರ್ಮಿಸಲಾಗುವುದು. 100 ದಿನಗಳಲ್ಲಿ 200 ಕೋಟಿ ಕಿಬ್ಬಿ ರಸ್ತೆಗಳನ್ನು ಉದ್ಘಾಟಿಸಲಾಗುವುದು ಎಂದು ಸಿಎಂ ಹೇಳಿದರು.






