HEALTH TIPS

ವಿದ್ಯಾರ್ಥಿಗಳ 10,11 ಮತ್ತು 12ನೇ ತರಗತಿಯ ಸಾಧನೆ ಆಧರಿಸಿ 12ನೇ ತರಗತಿ ಫಲಿತಾಂಶ ಪ್ರಕಟ: ಸುಪ್ರೀಂ ಕೋರ್ಟ್ ಗೆ ಸಿಬಿಎಸ್ ಇ ವರದಿ ಸಲ್ಲಿಕೆ

          ನವದೆಹಲಿ12ನೇ ತರಗತಿ ವಿದ್ಯಾರ್ಥಿಗಳಿಗೆ ಈ ಬಾರಿ ಗ್ರೇಡ್ ಹೇಗೆ ನೀಡಲಾಗುತ್ತದೆ, ವಿದ್ಯಾರ್ಥಿಗಳ ಮೌಲ್ಯಮಾಪನ ಮಾನದಂಡ ಬಗ್ಗೆ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್ ಇ) ಸಮಿತಿ ಅಂತಿಮಗೊಳಿಸಿದ ವರದಿಯನ್ನು ಸುಪ್ರೀಂ ಕೋರ್ಟ್ ಮುಂದೆ ಮಂಡಿಸಿದೆ.

            ಈ ಹಿಂದೆ 10 ಮತ್ತು 11ನೇ ತರಗತಿಯಲ್ಲಿ ವಿದ್ಯಾರ್ಥಿಗಳ ಸಾಧನೆ ಮತ್ತು ಫಲಿತಾಂಶವನ್ನು ಆಧರಿಸಿ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಒಟ್ಟು ಅಂಕಗಳನ್ನು ನೀಡಲಾಗುತ್ತದೆ. ಶೇಕಡಾ 40ರಷ್ಟು ಅಂಕಗಳು ವಿದ್ಯಾರ್ಥಿಯ 12ನೇ ತರಗತಿಯ ಹಿಂದಿನ ಪರೀಕ್ಷೆಗಳನ್ನು ಪರಿಗಣಿಸಲಾಗುತ್ತದೆ ಎಂದು ಕೋರ್ಟ್ ಗೆ ಸಲ್ಲಿಸಿರುವ ಮೌಲ್ಯಮಾಪನ ಮಾನದಂಡಗಳ ಬಗ್ಗೆ ಸಿಬಿಎಸ್ ಇ ಹೇಳಿದೆ.

         ಮೌಲ್ಯಮಾಪನ ಮಾನದಂಡ ಹೇಗೆ: ಶೇಕಡಾ 30ರಷ್ಟು ಅಂಕಗಳನ್ನು ವಿದ್ಯಾರ್ಥಿಯು 11ನೇ ತರಗತಿಯ ಅಂತಿಮ ಪರೀಕ್ಷೆಯಲ್ಲಿ ತೆಗೆದುಕೊಂಡ ಅಂಕಗಳು, ಶೇಕಡಾ 30ರಷ್ಟು ಅಂಕಗಳನ್ನು 10ನೇ ತರಗತಿಯ ಮೂರು ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳು ಯಾವ ಪರೀಕ್ಷೆಯಲ್ಲಿ ಬಂದಿರುತ್ತದೋ ಅದರಿಂದ ಸೇರಿಸಿ ಹಾಗೂ ಉಳಿದ ಶೇಕಡಾ 40ನ್ನು 12ನೇ ತರಗತಿಯ ಈ ಹಿಂದಿನ ಪರೀಕ್ಷೆಗಳಲ್ಲಿ ತೆಗೆದುಕೊಂಡ ಅಂಕಗಳನ್ನು ಆಧರಿಸಿ ಫಲಿತಾಂಶ ನೀಡಲಾಗುತ್ತದೆ ಎಂದರು.

           ಅಗತ್ಯ ಪುನರಾವರ್ತನೆ; ಮೂರೂ ವರ್ಷಗಳ ಅಂಕಗಳನ್ನು ತೆಗೆದುಕೊಂಡರೂ ವಿದ್ಯಾರ್ಥಿ ಅರ್ಹತಾ ಮಾನದಂಡವನ್ನು ಪೂರೈಸದಿದ್ದರೆ ಅವರನ್ನು ಅಗತ್ಯ ಪುನರಾವರ್ತನೆ ಅಥವಾ ವರ್ಗ ವಿಭಾಗವೆಂದು ಪರಿಗಣಿಸಲಾಗುತ್ತದೆ. ಅರ್ಹ ತೇರ್ಗಡೆ ಮಾನದಂಡಗಳನ್ನು ಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಸಿಬಿಎಸ್ ಇ ನಡೆಸುವ 12ನೇ ತರಗತಿ ಬೋರ್ಡ್ ಪರೀಕ್ಷೆಯನ್ನು ಮತ್ತೆ ತೆಗೆದುಕೊಳ್ಳಬಹುದು ಎಂದು ಸಿಬಿಎಸ್ ಇ ಪರ ಕೋರ್ಟ್ ಗೆ ಹಾಜರಾದ ಅಟೊರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಹೇಳಿದ್ದಾರೆ.

          ಪ್ರಸ್ತುತ ಕಾರ್ಯವಿಧಾನದ ಮೂಲಕ ಅಂಕಗಳು / ಶ್ರೇಣೀಕರಣದಿಂದ ತೃಪ್ತರಾಗದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಭೌತಿಕ ಪರೀಕ್ಷೆಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಉತ್ತಮವಾಗಿ ಅಥವಾ ತಮ್ಮ ಅಂಕಗಳನ್ನು ಸುಧಾರಿಸಬಹುದು, ಕೋವಿಡ್ ಪರಿಸ್ಥಿತಿ ತಿಳಿಗೊಂಡ ನಂತರ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದರು.

         ಜುಲೈ 31ರ ಹೊತ್ತಿಗೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ಕೂಡ ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries