HEALTH TIPS

ಚೀನಾದಿಂದ ದೇಶಗಳೇ ನಾಶವಾಗಿದೆ: 10 ಟ್ರಿಲಿಯನ್ ಡಾಲರ್ ಪರಿಹಾರಕ್ಕೆ ಅಮೆರಿಕಾ ಮಾಜಿ ಅಧ್ಯಕ್ಷ ಟ್ರಂಪ್ ಬೇಡಿಕೆ!

           ವಾಷಿಂಗ್ ಟನ್: ಅಧ್ಯಕ್ಷೀಯ ಪದವಿಯಿಂದ ನಿರ್ಗಮಿಸಿದ ಬಳಿಕವೂ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದ ವಿರುದ್ಧ ಗುಟುರು ಹಾಕುವುದನ್ನು ಮುಂದುವರೆಸಿದ್ದಾರೆ.

             ಜೂ.06 (ಭಾರತೀಯ ಕಾಲಮಾನ)ದ ಪ್ರಕಾರ ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾದ ಕೋವಿಡ್-19 ನಿಂದ ದೇಶಗಳೇ ನಾಶವಾಗಿದ್ದು, ಚೀನಾ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

           ಉತ್ತರ ಕ್ಯಾರೋಲಿನಾ ರಿಪಬ್ಲಿಕನ್ ಕನ್ವೆನ್ಷನ್ ನಲ್ಲಿ ಮಾತನಾಡಿರುವ ಟ್ರಂಪ್, ಚೀನಾದ ಕಮ್ಯುನಿಸ್ಟ್ ಪಕ್ಷದಿಂದ ಪರಿಹಾರ ಕೇಳುವುದಕ್ಕೆ ಅಮೆರಿಕ ಹಾಗೂ ವಿಶ್ವಸಮುದಾಯಕ್ಕೆ ಇದು ಸೂಕ್ತ ಸಮಯ ಎಂದು ಹೇಳಿದ್ದಾರೆ.

         "ಚೀನಾ ಪರಿಹಾರ ನೀಡಬೇಕು" ಎಂಬುದನ್ನು ನಾವು ಒಕ್ಕೊರಲಿನಿಂದ ಕೇಳಬೇಕು" ಎಂದು ಟ್ರಂಪ್ ಕರೆ ನೀಡಿದ್ದಾರೆ.

       ಚೀನಾದ ಉತ್ಪನ್ನಗಳ ಮೇಲೆ ಶೇ.100 ರಷ್ಟು ತೆರಿಗೆ ವಿಧಿಸಲು ಅಮೆರಿಕ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದಿರುವ ಟ್ರಂಪ್, ಚೀನಾ ವೈರಸ್ ಬರುವವರೆಗೂ ತಾವು ಚೀನಾದ ಅಧ್ಯಕ್ಷ ಕ್ಸೀ ಜಿನ್ಪಿಂಗ್ ಅವರೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಿದ್ದಾಗಿ ಹೇಳಿದ್ದಾರೆ. ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡನ್ ಅವರಿಗೆ ಚೀನಾ ಹೆಚ್ಚು ಹೆದರುವುದಿಲ್ಲ ಎಂದೂ ಟ್ರಂಪ್ ಹೇಳಿದ್ದಾರೆ.

            ಕೇವಲ ಅಮೆರಿಕವಷ್ಟೇ ಅಲ್ಲದೇ ಎಲ್ಲಾ ದೇಶಗಳೂ ಚೀನಾದಿಂದ 10 ಟ್ರಿಲಿಯನ್ ಡಾಲರ್ ಪರಿಹಾರವನ್ನು ಪಡೆಯುವುದಕ್ಕೆ ಒಗ್ಗಟ್ಟಿನಿಂದ ಮುಂದಾಗಬೇಕು ಎಂದು ಟ್ರಂಪ್ ಕರೆ ನೀಡಿದ್ದಾರೆ.

ಇದರ ಮೊದಲ ಭಾಗವಾಗಿ ಯಾವೆಲ್ಲಾ ದೇಶಗಳು ಚೀನಾದಿಂದ ಸಾಲ ಪಡೆದಿವೆಯೋ ಆ ದೇಶಗಳು ಸಾಲವನ್ನು ಇತ್ಯರ್ಥಗೊಳಿಸಿಕೊಳ್ಳಬೇಕು, ಯಾವುದೇ ದೇಶವೂ ಚೀನಾಗೆ ಸಾಲಗಾರನಾಗಿರಬಾರದು, ಚೀನಾ ಹಲವು ರಾಷ್ಟ್ರಗಳನ್ನು ಹಾಳುಗೆಡವಿದೆ. ಚೀನಾ ವಿಶ್ವಸಮುದಾಯಕ್ಕೆ ಬಾಕಿ ನೀಡಬೇಕಿದೆ ಎಂದು ಟ್ರಂಪ್ ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries