ಕಾಸರಗೋಡು: ಕಾರಡ್ಕ ಮತ್ತು ಕಾಞಂಗಾಡು ರಾಜ್ಯದ ಪ್ರಥಮ ಇ-ಕಚೇರಿ ಬ್ಲೋಕ್ ಪಂಚಾಯತ್ ಗಳಾಗುತ್ತಿವೆ. ಈ ಸಂಬಂಧ ಜುಲೈ 1ರಂದು ಘೋಷಣೆ ನಡೆಯಲಿದೆ.
ಅಂದು ಬೆಳಗ್ಗೆ 10 ಗಂಟೆಗೆ ಶಾಸಕ ಸಿ.ಎಚ್.ಕುಂಞಂಬು ಆನ್ ಲೈನ್ ಮೂಲಕ ಈ ಘೋಷಣೆ ನಡೆಸುವರು. ಗ್ರಾಮಾಭಿವೃದ್ಧಿ ಕಮೀಷನರ್ ವಿ.ಆರ್.ವಿನೋದ್ ಮುಖ್ಯ ಅತಿಥಿಯಾಗಿರುವರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಪ್ರಾಸ್ತಾವಿಕ ಭಾಷಣ ಮಾಡುವರು. ಕಾಞಂಗಾಡು ಬ್ಲೋಕ್ ಪಂಚಾಯತ್ ಅಧ್ಯಕ್ಷ ಕೆ.ಮಣಿಕಂಠನ್ ಅಧ್ಯಕ್ಷತೆ ವಹಿಸುವರು.
ರಾಜ್ಯದಲ್ಲೇ ಪ್ರಥಮ ಬಾರಿಗೆ ಇ-ಕಚೇರಿ ಬ್ಲೋಕ್ ಪಂಚಾಯತ್ ಗಳು ಕಾಸರಗೋಡು ಜಿಲ್ಲೆಯ ಸಾಧನೆಯಾಗಿವೆ. ಒಂದೇ ತಿಂಗಳ ಅವಧಿಯಲ್ಲಿ ಉಳಿದ 4 ಬ್ಲೋಕ್ ಪಂಚಾಯತ್ ಗಳೂ ಇ-ಕಚೇರಿ ಸೌಲಭ್ಯ ದೊಂದಿಗೆ ಬದಲಾಗಲಿವೆ. ಈ ಮೂಲಕ ಸಂಪೂರ್ಣ ಸಾಧನೆ ಗಳಿಸುವ ಯತ್ನ ಸಾಗಿದೆ.