HEALTH TIPS

ಆಷಾಢ ಮಾಸ 2021: ಯಾವಾಗ ಪ್ರಾರಂಭ? ಈ ತಿಂಗಳಿನಲ್ಲಿ ಬರುವ ಹಬ್ಬಗಳು, ವ್ರತಗಳು

            ಹಿಂದೂ ಪಂಚಾಂಗದ ಪ್ರಕಾರ ಚಾಂದ್ರಮಾನ ಪಂಚಾಂಗದ ನಾಲ್ಕನೇ ಮಾಸವೇ ಆಷಾಢ. ದಕ್ಷಿಣಾಯಣದ ಪರ್ವ ಕಾಲದಲ್ಲಿ ಜ್ಯೇಷ್ಠ ಮಾಸದ ಅಮವಾಸ್ಯೆಯ ಮರುದಿನ ಪಾಡ್ಯ ತಿಥಿಯಿಂದ ಆಷಾಢ ಮಾಸ ಆರಂಭವಾಗುವುದು.

                  ಈ ವರ್ಷ ಆಷಾಢ ಮಾಸ ಜೂನ್‌ 25ರಿಂದ ಪ್ರಾರಂಭ ಜುಲೈ 24ರವರೆಗೆ ಇರುತ್ತದೆ.

            ಆಷಾಢ ಮಾಸ:
          ಆಷಾಢ ಮಾಸದ ಬಗ್ಗೆ ಹಲವಾರು ನಂಬಿಕೆಗಳಿವೆ. ಕೆಲವರು ಈ ಮಾಸದಲ್ಲಿ ಯಾವುದೇ ಶುಭ ಕಾರ್ಯ ಮಾಡಬಾರದು ಎನ್ನುತ್ತಾರೆ. ಆದ್ದರಿಂದಲೇ ಮದುವೆಯಂಥ ಶುಭ ಕಾರ್ಯವನ್ನು ಈ ತಿಂಗಳಿನಲ್ಲಿ ಮಾಡುವುದಿಲ್ಲ. ಅಲ್ಲದೆ ಹೊಸದಾಗಿ ಮದುವೆಯಾದ ಜೋಡಿ ಈ ತಿಂಗಳಿನಲ್ಲಿ ಜೊತೆಗೆ ಇರಬಾರದು ಎಂದು ಕೆಲವರು ಅಂದ್ರೆ ಇನ್ನು ಕೆಲವರು ಅತ್ತೆ-ಸೊಸೆ ಈ ತಿಂಗಳಿನಲ್ಲಿ ಒಂದೇ ಮನೆಯಲ್ಲಿ ಇರಬಾರದು ಎಂದು ಹೇಳುತ್ತಾರೆ. ಇನ್ನು ಆಷಾಢ ತಿಂಗಳಿನಲ್ಲಿ ದೇವತೆಗಳು ಯೋಗ ನಿದ್ರೆಯಲ್ಲಿರುತ್ತಾರೆ, ಆದ್ದರಿಂದ ಮಂಗಳಕಾರ್ಯಕ್ಕೆ ಯೋಗ್ಯವಾದ ತಿಂಗಳಲ್ಲ ಎಂದು ಕೂಡ ಹೇಳುತ್ತಾರೆ. ಹೀಗೆ ಆಷಾಢ ಮಾಸದ ಬಗ್ಗೆ ಒಬ್ಬೊಬ್ಬರಲ್ಲಿ ಒಂದೊಂದು ನಂಬಿಕೆಗಳಿವೆ. ಹಾಗಂತ ಆಷಾಢ ಎಂದರೆ ಆ ತಿಂಗಳಿನಲ್ಲಿ ಏನೂ ವಿಶೇಷ ದಿನವಿಲ್ಲ ಎಂದಲ್ಲ, ಈ ತಿಂಗಳಲ್ಲಿ ಹಲವಾರು ವಿಶೇಷಗಳಿವೆ.
          ಆಷಾಢ ಮಾಸದ ವಿಶೇಷ ದಿನಗಳು ಜೂನ್‌ 25: ಆಷಾಢ ಪ್ರಾರಂಭ ಜೂನ್‌ 27: ಗಣೇಶ ಚತುರ್ಥಿ: ಜುಲೈ 2 : ಶೀತಾಲಷ್ಟಮಿ ಜುಲೈ 5: ಯೋಗಿನಿ ಏಕಾದಶಿ
       ಆಷಾಢ ಮಾಸದ ವಿಶೇಷ ದಿನಗಳು ಜುಲೈ 7: ಪ್ರದೋಷ ವ್ರತ ಜುಲೈ 8: ಮಾಸಿಕ ಶಿವರಾತ್ರಿ ಜುಲೈ 9: ಹುಣ್ಣಿಮೆ ಜುಲೈ 11: ಗೂಢ ನವರಾತ್ರಿ ಪ್ರಾರಂಭ ಜುಲೈ 12: ಜಗ್ನಾಥ ರಥ ಯಾತ್ರೆ ಪ್ರಾರಂಭ

ಆಷಾಢ ಮಾಸದ ವಿಶೇಷ ದಿನಗಳು ಜುಲೈ 13: ವಿನಾಯಕ ಚತುರ್ದಶಿ ಜುಲೈ 16: ಕರ್ಕ ಸಂಕ್ರಮಣ ಜುಲೈ 20: ದೇವಾಸ್ಯ ಏಕಾದಶಿ ಹಾಗೂ ಬಕ್ರೀದ್ ಜುಲೈ 21: ಪ್ರದೋಷ ಉಪವಾಸ ಜುಲೈ 22: ವಿಜಯ ಪಾರ್ವತಿ ಉಪವಾಸ ಜುಲೈ 24: ಆಷಾಢ ಪೂರ್ಣಿಮೆ




Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries