HEALTH TIPS

ಕೋವಿಡ್ ಮಹಾಮಾರಿ: ರಾಜ್ಯದಲ್ಲಿ ಅನಾಥರಾದ 42 ಮಕ್ಕಳು: 980 ಮಂದಿ ಕಳಕೊಂಡಿರುವುದು ಒಬ್ಬ ಪೋಷಕರನ್ನು

          ತಿರುವನಂತಪುರ: ತೀವ್ರ ಬಿಕಟ್ಟು ಮತ್ತು ಅನಿರೀಕ್ಷಿತ ವಿದ್ಯಮಾನಗಳನ್ನು ಸೃಷ್ಟಿಸಿರುವ ಕೋವಿಡ್‍ನಿಂದಾಗಿ ಇದುವರೆಗೆ ರಾಜ್ಯದಲ್ಲಿ 42 ಮಕ್ಕಳು ಅನಾಥರಾಗಿದ್ದಾರೆ ಎಂದು ರಾಜ್ಯ ಸರ್ಕಾರ ಹೇಳಿದೆ. 980 ಮಕ್ಕಳು ತಮ್ಮ ಹೆತ್ತವರಲ್ಲಿ ಒಬ್ಬರನ್ನು ಕಳೆದುಕೊಂಡಿರುವರು.  ಕೇಂದ್ರ ಸರ್ಕಾರದ ಬಾಲ್ ಸೇಫ್ಟಿ ಪೆÇೀರ್ಟಲ್ ನಲ್ಲಿ ಈ ಮಾಹಿತಿಯನ್ನು ಅಪ್‍ಲೋಡ್ ಮಾಡುವುದರ ಜೊತೆಗೆ, ಮಾಹಿತಿಯನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯಕ್ಕೂ ರವಾನಿಸಲಾಗಿದೆ. ಮಕ್ಕಳ ವೈಯಕ್ತಿಕ ಮಾಹಿತಿಯನ್ನು ನಂತರ ಸಲ್ಲಿಸಲಾಗುತ್ತದೆ. ಪಟ್ಟಿಯನ್ನು ಸುಪ್ರೀಂ ಕೋರ್ಟ್‍ಗೆ ಸಲ್ಲಿಸಲಾಗುವುದು.

               ಹೆತ್ತವರನ್ನು ಕಳೆದುಕೊಂಡ ಮಕ್ಕಳನ್ನು ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ. ಕೋವಿಡ್ ನಿಂದ ತಾಯಿ ಮತ್ತು ತಂದೆ ಮೃತಪಟ್ಟ ಜನರ ಗುಂಪು. ಮತ್ತೊಂದು ವರ್ಗವೆಂದರೆ ಪೋಷಕರಲ್ಲಿ ಒಬ್ಬರು ಮೃತಪಟ್ಟವರ ಗುಂಪು ಎಮದು. ಈ ಪಟ್ಟಿಯನ್ನು ಜಿಲ್ಲಾ ಮಕ್ಕಳ ಕಲ್ಯಾಣ ಅಧಿಕಾರಿ ಸಿದ್ಧಪಡಿಸಿದ್ದಾರೆ.

               ಕೋವಿಡ್ ಬಾಧಿಸಿ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳ ಮಾಹಿತಿಯನ್ನು ಬಿಡುಗಡೆ ಮಾಡುವಂತೆ ಕೇಂದ್ರ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಒತ್ತಾಯಿಸಿತ್ತು. ಕೋವಿಡ್ ನಿಂದ ಪೋಷಕರನ್ನು ಕಳೆದುಕೊಂಡವರು ಮತ್ತು ಒಬ್ದಬರು ಪೋಷಕರನ್ನು ಕಳಕೊಂಡವರ ವಿವರಗಳನ್ನು ಬಾಲ ಸ್ವರಾಜ್ ಪೆÇೀರ್ಟಲ್‍ನಲ್ಲಿ ಅಪ್‍ಲೋಡ್ ಮಾಡುವಂತೆ ಸೂಚಿಸಲಾಗಿತ್ತು. 

             ಕೋವಿಡ್‍ನಿಂದಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳ ಹೆಸರಿನಲ್ಲಿ 3 ಲಕ್ಷ ರೂ.ಗಳನ್ನು ಹೂಡಿಕೆ ಮಾಡುವುದಾಗಿ ಈ ಹಿಂದೆ ರಾಜ್ಯ ಸರ್ಕಾರ ತಿಳಿಸಿತ್ತು. 18 ವರ್ಷ ವಯಸ್ಸಿನವರೆಗೆ ತಿಂಗಳಿಗೆ ಎರಡು ಸಾವಿರ ರೂಪಾಯಿ. ಪದವಿಯ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದು ಸರ್ಕಾರ ಘೋಷಿಸಿತ್ತು. ಮಕ್ಕಳ ಹೆಸರಿನಲ್ಲಿ 10 ಲಕ್ಷ ರೂ.ಗಳ ಹೂಡಿಕೆಯನ್ನೂ ಕೇಂದ್ರ ಪ್ರಕಟಿಸಿದೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries