HEALTH TIPS

ಇಳಿಕೆ ಕಂಡ ಕೊರೊನಾ : ಭಾರತದಲ್ಲಿಂದು 50,848 ಕೇಸ್ ಪತ್ತೆ, 1,358 ಮಂದಿ ಸಾವು

              ನವದೆಹಲಿ : ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಇಳಿಕೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಹೊಸದಾಗಿ 50,848 ಪ್ರಕರಣಗಳು ಪತ್ತೆಯಾಗಿದೆ.

         ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, , ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಹೊಸದಾಗಿ 50,848 ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,00,28,709 ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 1,358 ಕೊರೊನಾ ಸೋಂಕಿತರು ಮೃತಪಟ್ಟಿದ್ದು, ಈ ಮೂಲಕ ಸಾವನ್ನಪ್ಪಿದವರ ಸಂಖ್ಯೆ3,90,660 ಕ್ಕೆ ಏರಿಕೆಯಾಗಿದೆ.

         ಸದ್ಯ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 6,43,194 ಕ್ಕೆ ಇಳಿದಿದೆ; 82 ದಿನಗಳಲ್ಲಿ ಕಡಿಮೆ. ಚೇತರಿಕೆ ದರವು 96.56 ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಒಟ್ಟು ಪ್ರಕರಣಗಳು: 3,00,28,709

ಒಟ್ಟು ಡಿಸ್ಚಾರ್ಜ್ ಗಳು: 2,89,94,855

ಸಾವಿನ ಸಂಖ್ಯೆ: 3,90,660

ಸಕ್ರಿಯ ಪ್ರಕರಣಗಳು: 6,43,194


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries