HEALTH TIPS

ಕೋವಿಡ್ ಚಿಕಿತ್ಸೆಯಲ್ಲಿ ಮೈಲುಗಲ್ಲು: ಟ್ರಂಪ್ ಗೆ ನೀಡಲಾದ ಕಾಜಿರಿವಿಮಾಬ್-ಇಂಡಿವಿಮಾಬ್ ಚುಚ್ಚುಮದ್ದು ಪತ್ತನಂತಿಟ್ಟದಲ್ಲಿ: ವೈದ್ಯರಿಗೇ ನೀಡಿ ಮೊದಲ ಪ್ರಯೋಗ: ಒಂದು ಡೋಸ್‍ನ ಬೆಲೆ 59,750 ರೂ!

                                            

           ಪತ್ತನಂತಿಟ್ಟು:  ಕೋವಿಡ್ ಚಿಕಿತ್ಸೆಯಲ್ಲಿ ಪ್ರಮುಖ ಹೆಜ್ಜೆಯಾಗಿ ಕಾಸಿರಿವಿಮಾಬ್-ಇಂಡೆವಿಮಾಬ್ ಎಂಬ ಪ್ರತಿಕಾಯ ಔಷಧಿಯನ್ನು ಪತ್ತನಂತಿಟ್ಟು ಜನರಲ್ ಆಸ್ಪತ್ರೆಯ ವೈದ್ಯರಿಗೆ ಪ್ರಾಯೋಗಿಕವಾಗಿ ಚುಚ್ಚಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್‍ಗೆ ಚಿಕಿತ್ಸೆ ನೀಡಲು ಸಾಸ್ರ್ಕೋ -2 ವರ್ಗಕ್ಕೆ ಸೇರಿದ ಪ್ರತಿಕಾಯವನ್ನು ಬಳಸುವುದು ರಾಜ್ಯದಲ್ಲಿ ಇದೇ ಮೊದಲು.

         ಔಷಧದ ಒಂದು ಡೋಸ್ ಬೆಲೆ 59,750 ರೂ. 1.10 ಲಕ್ಷ ರೂ.ಗಳ ವೆಚ್ಚದಲ್ಲಿ 2 ಡೋಸ್‍ಗಳನ್ನು ಹೊಂದಿರುವ ಬಾಟಲ್ ನ್ನು ಪತ್ತನಂತಿಟ್ಟು ಜನರಲ್ ಆಸ್ಪತ್ರೆಗೆ ತರಲಾಯಿತು. ಇದು ದೇಹದಲ್ಲಿ ವೈರಸ್ ಬೆಳೆಯುವುದನ್ನು ಸಂಪೂರ್ಣವಾಗಿ ನಿಲ್ಲಿಸುತ್ತದೆ.

               ಕೋವಿಡ್ ಪಾಸಿಟಿವ್ ಆಗಿ ಮೊದಲ 72 ಗಂಟೆಗಳಲ್ಲಿ ಔಷಧವು ಹೆಚ್ಚು ಪರಿಣಾಮಕಾರಿಯಾಗಿದೆ. ವೈರಸ್ ದೇಹದಲ್ಲಿ ಋಣಾತ್ಮಕವಾದ ಬಳಿಕ  ಈ ಔಷಧಿ ಬಳಸುವುದರಿಂದ ಯಾವುದೇ ಮಹತ್ವದ ಪ್ರಯೋಜನವಿಲ್ಲ. ಪತ್ತನಂತಿಟ್ಟು  ಜನರಲ್ ಆಸ್ಪತ್ರೆಯ ವೈದ್ಯರೇ ಈ ಔಷಧಿಯನ್ನು ಮೊದಲು ಬಳಸಿರುವರು. 

          ಔಷಧವು ಫಲಿತಾಂಶಗಳನ್ನು ತೋರಿಸಲು ಪ್ರಾರಂಭಿಸುತ್ತಿದೆ ಎಂದು ಚಿಕಿತ್ಸೆಯನ್ನು ಮುನ್ನಡೆಸುತ್ತಿರುವ ಡಾ. ಅರುಣ್ ಜೂಡ್ ಅಲ್ಫೋನ್ಸ್ ತಿಳಿಸಿರುವರು. ಬಾಟಲಲ್ಲಿರುವ ಎರಡನೇ ಪ್ರಮಾಣವನ್ನು ಸರ್ಕಾರಿ ಫಾರ್ಮಸಿಸ್ಟ್ ಗಳಿಗೆ ಚುಚ್ಚಲಾಗುತ್ತದೆ.

                ಪಂದಳಂ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಈ ಔಷಧಿ ಪಡೆದ ಸರ್ಕಾರಿ ವೈದ್ಯರನ್ನು ಪತ್ತನಂತಿಟ್ಟು ಆಸ್ಪತ್ರೆಗೆ ಸಾಗಿಸಲಾಗುವುದು. ಅವರು ಕೇವಲ 3 ದಿನಗಳಿಂದ ಮಧುಮೇಹ ಸೇರಿದಂತೆ ದೈಹಿಕ ಕಾಯಿಲೆಗಳಿಂದ ಬಳಲುತ್ತಿದ್ದರು. ಔಷಧಿಯನ್ನು ಬಳಸಲು ಇದು ಪರಿಣಾಮಕಾರಿ ಸಮಯವಾದ್ದರಿಂದ ಹಲವು ಶಂಕೆಗಳ ಮಧ್ಯೆಯೂ ಚುಚ್ಚಲಾಗಿದೆ. ಮಧುಮೇಹಿಗಳು, ಡಯಾಲಿಸಿಸ್ ರೋಗಿಗಳು ಮತ್ತು ಕೀಮೋಥೆರಪಿಸ್ಟ್‍ಗಳಲ್ಲಿನ ಪ್ರಯೋಗಗಳು ಕೋವಿಡ್ ವೈರಸ್‍ಗಳ ಹರಡುವಿಕೆಯನ್ನು 70 ಶೇ. ತಡೆಗಟ್ಟುತ್ತದೆ ಎಂದು ತೋರಿಸಿದೆ.

           ಔಷಧದ ಬಳಕೆಯಿಂದ ಅನೇಕರು ಆಸ್ಪತ್ರೆಗೆ ದಾಖಲಾಗುವುದರಿಂದ ಬಚವಾದರು. ಮಾರಣಾಂತಿಕರಾಗಿದ್ದವರು ಇದೀಗ ಚೇತರಿಸಿದ್ದಾರೆ ಎಂದು ವೈದ್ಯರು ಸಾಕ್ಷ್ಯ ನೀಡುತ್ತಾರೆ. ಪ್ರತಿಕಾಯ ಔಷಧಿಗಳನ್ನು ಯುನೈಟೆಡ್ ಸ್ಟೇಟ್ಸ್ ಮತ್ತು ವಿವಿಧ ಯುರೋಪಿಯನ್ ಯೂನಿಯನ್ ದೇಶಗಳಲ್ಲಿ 12 ನೇ ವಯಸ್ಸಿನಿಂದ ಮೊದಲ್ಗೊಂಡವರಿಂದಲೇ ಬಳಸಲಾಗುತ್ತಿದೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries