HEALTH TIPS

ಕೋವ್ಯಾಕ್ಸಿನ್‌ ಲಸಿಕೆ ಪ್ರಯೋಗ: 6-12 ವರ್ಷದ ಮಕ್ಕಳ ನೋಂದಣಿ

            ನವದೆಹಲಿ: ಕೋವ್ಯಾಕ್ಸಿನ್‌ ಲಸಿಕೆಯ ಪ್ರಯೋಗಕ್ಕಾಗಿ 6 ರಿಂದ 12 ವರ್ಷದ ಮಕ್ಕಳ ನೋಂದಣಿ ಪ್ರಕ್ರಿಯೆಯು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್‌) ಮಂಗಳವಾರ ಆರಂಭವಾಗಲಿದೆ.


          2 ರಿಂದ 6 ವರ್ಷದ ಮಕ್ಕಳ ಮೇಲಿನ ಪ್ರಯೋಗದ ನಂತರ ಈ ಪ್ರಕ್ರಿಯೆ ಶುರುವಾಗುತ್ತಿದೆ. 12 ರಿಂದ 18 ವರ್ಷದ ಮಕ್ಕಳ ನೋಂದಣಿ ಮುಗಿದಿದ್ದು, ಮೊದಲ ಡೋಸ್‌ ನೀಡಲಾಗಿದೆ ಎಂದು ಏಮ್ಸ್‌ ಹೇಳಿಕೆ ತಿಳಿಸಿದೆ.

          ಭಾರತ ಔಷಧ ಮಹಾನಿಯಂತ್ರಕರು (ಡಿಸಿಜಿಐ) 2 ರಿಂದ 18 ವರ್ಷದ ಮಕ್ಕಳ ಮೇಲೆ ಲಸಿಕೆ ಪ್ರಯೋಗಕ್ಕೆ ಮೇ 12ರಂದು ಅನುಮತಿ ನೀಡಿದ್ದರು ಎಂದು ಏಮ್ಸ್‌ನ ಡಾ.ಸಂಜಯ್‌ ರಾಯ್ ಅವರು ತಿಳಿಸಿದ್ದಾರೆ.

          ಈ ವರ್ಷದ ಮಕ್ಕಳ ಮೇಲೆ ಲಸಿಕೆ ಪ್ರಯೋಗವು ಮೂರು ಹಂತದಲ್ಲಿ ನಡೆಯಲಿದೆ. 2-6, 6-12 ಮತ್ತು 12-18 ವರ್ಷ ವಯೋಮಾನದ ಗುಂಪುಗಳಲ್ಲಿ ತಲಾ 175 ಮಕ್ಕಳಿಗೆ, 28 ದಿನಗಳ ಅಂತರದಲ್ಲಿ ಲಸಿಕೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

         ಮಕ್ಕಳಲ್ಲಿ ಇನ್ನೂ ಕೋವಿಡ್‌-19 ಪರಿಣಾಮ ಗಾಢವಾಗಿ ಕಾಣುತ್ತಿಲ್ಲ. ಆದರೆ, ಸೋಂಕು ರೂಪಾಂತರಗೊಂಡಲ್ಲಿ ಪ್ರತಿಕೂಲ ಪರಿಣಾಮ ಆಗಬಹುದು. ಹೀಗಾಗಿ, ಪರಿಸ್ಥಿತಿ ಎದುರಿಸಲು ಸಿದ್ಧತೆ ನಡೆದಿದೆ ಎಂದು ಸರ್ಕಾರ ಹೇಳಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries