HEALTH TIPS

ಸುಳ್ಳು ಅರೋಪಗಳಿಂದ ಬಿಜೆಪಿ ಯನ್ನು ಇಲ್ಲವಾಗಿಸಲು ಸಾಧ್ಯವಿಲ್ಲ: ಕೆ.ಶ್ರೀಕಾಂತ್

            ಕುಂಬಳೆ: ಬಿಜೆಪಿ ಕೇರಳ ರಾಜ್ಯಾಧ್ಯಕ್ಷರ ಮೇಲೆ ಸುಳ್ಳುಆರೋಪಗಳ ದೂರು ದಾಖಲಿಸಿ ಬಿಜೆಪಿ ಪಕ್ಷವನ್ನು ಇಲ್ಲವಾಗಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಿಲ್ಲ. ರಾಜ್ಯದಲ್ಲಿ ಪಿಣರಾಯಿ ಸರ್ಕಾರ ಮಾಡಿರುವ ಅರಣ್ಯ ಲೂಟಿ ಕೋಟ್ಯಂತರ ರೂ ಹಗರಣ ಜನತೆಗೆ ತಿಳಿಯದಂತೆ ಮಾಡುವುದೇ ಸರ್ಕಾರದ ಪ್ರಮುಖ ಅಜೆ0ಡ ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್ ಹೇಳಿದರು.

                  ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ಕುಂಬಳೆ ಪೇಟೆಯಲ್ಲಿ ಶುಕ್ರವಾರ ನಡೆದ ಸತ್ಯಾಗ್ರಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.

                      ಕೋವಿಡ್ ಮಾನದಂಡ ಪಾಲಿಸಿ ಸತ್ಯಾಗ್ರಹ ಆಯೋಜಿಸಲಾಗಿತ್ತು. ಮಂಡಲ ಅಧ್ಯಕ್ಷ ಮಣಿಕಂಠ ರೈ ಪಟ್ಲ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಕೋಳಾರು 

ಸತೀಶ್ಚಂದ್ರ ಭಂಡಾರಿ, ಎ.ಕೆ. ಕಯ್ಯಾರು, ವಿಜಯ್ ರೈ, ಪುಷ್ಪರಾಜ್ ಐಲ, ವಸಂತ ಮಯ್ಯ, ಸುಧಾಕರ ಕಾಮತ್ ,ರಮೇಶ್ ಭಟ್, ಹಾಗೂ ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಮುರಳೀಧರ ಯಾದವ್ ಸ್ವಾಗತಿಸಿ, ಆದರ್ಶ್ ಬಿಎಂ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries