HEALTH TIPS

ಮಧ್ಯಂತರ ಜಾಮೀನು ವಿಸ್ತರಣೆಗಾಗಿ ನಕಲಿ ಕೋವಿಡ್ ಪಾಸಿಟಿವ್ ವರದಿ: ಕೋರ್ಟ್ ಅಸಮಾಧಾನ

             ನವದೆಹಲಿ: ಕ್ರಿಮಿನಲ್ ಮೊಕದ್ದಮೆಯೊಂದರಲ್ಲಿ ಮಧ್ಯಂತರ ಜಾಮೀನು ವಿಸ್ತರಣೆಗಾಗಿ ತಿರುಚಿದ ಕೋವಿಡ್‌ 19 ಪಾಸಿಟಿವ್‌ ವರದಿ ಸಲ್ಲಿಸಿದ್ದ ಆರೋಪಿಯ ವಿರುದ್ಧ ದೆಹಲಿ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಸಂಬಂಧ ಆರೋಪಿಯ ಸಂಬಂಧಿಕರು, ವಕೀಲರು, ಆಸ್ಪತ್ರೆ ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ತನಿಖೆಗೆ ಆದೇಶಿಸಿದೆ.


            ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರತಿಭಾ ಎಂ.ಸಿಂಗ್ ಅವರು, 'ನ್ಯಾಯಾಲಯಕ್ಕೆ ಬರುವ ಎಲ್ಲ ಕಕ್ಷಿದಾರರು 'ಪರಿಶುದ್ಧ'ವಾಗಿರಬೇಕು. ನ್ಯಾಯಾಲಯವು ಈ ಸಾಂಕ್ರಾಮಿಕದ ಕಾಲದಲ್ಲಿ ವಿಶೇಷವಾಗಿ ಕೋವಿಡ್‌ ಸೋಂಕಿಗೆ ಒಳಗಾದವರ ಬಗ್ಗೆ ಅನುಭೂತಿ ಮತ್ತು ಸಹಾಯನಭೂತಿಯನ್ನು ಹೊಂದಿರುತ್ತದೆ' ಎಂದು ಹೇಳಿದರು.

             ಆದರೆ, ಈ ಸಹಾನುಭೂತಿಯನ್ನು ದುರುಪಯೋಗಪಡಿಸಿಕೊಂಡು, ನಕಲಿ ವರದಿಗಳನ್ನು ಸಲ್ಲಿಸುವುದನ್ನು ನ್ಯಾಯಾಲಯ ಕ್ಷಮಿಸುವುದಿಲ್ಲ ಎಂದು ನ್ಯಾಯಮೂರ್ತಿಯವರು ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries