HEALTH TIPS

'ಆಜಾದಿ ಕಾ ಮಹೋತ್ಸವ್' ಶ್ರೀ ಚಿತ್ರ ತಿರುನಾಳ್ ಸಂಸ್ಥೆಯಲ್ಲಿ ಪ್ರಾರಂಭ

                            

            ತಿರುವನಂತಪುರ: ಭಾರತದ ಸ್ವಾತಂತ್ರ್ಯದ 75 ನೇ ವರ್ಷಾಚರಣೆಯನ್ನು ಆಚರಿಸುವ ರಾಷ್ಟ್ರವ್ಯಾಪಿ ಆಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಅಧೀನದಲ್ಲಿರುವ ಶ್ರೀ ಚಿತ್ರ ತಿರುನಾಲ್ ಸಂಸ್ಥೆಯಲ್ಲಿ 75 ವಾರಗಳ ಕಾಲ ನಡೆಯುವ 'ಆಜಾದಿ ಕಾ ಮಹೋತ್ಸವ್' ಅನ್ನು ಪ್ರಾರಂಭಿಸಿದ್ದಾರೆ. ಈ ಕಾರ್ಯಕ್ರಮವನ್ನು ತಿರುವಾಂಕೂರು ರಾಜಮನೆತನದ ಸದಸ್ಯ ಮತ್ತು ಖ್ಯಾತ ಇಂಗ್ಲಿಷ್ ಸಾಹಿತಿ ಅಶ್ವತಿ ತಿರುನಾಳ್ ಗೌರಿ ಲಕ್ಷ್ಮಿಬಾಯಿ ಅವರು ಆನ್‍ಲೈನ್‍ನಲ್ಲಿ ಉದ್ಘಾಟಿಸಿದರು.

              ಅಶ್ವತಿ ತಿರುನಾಳ್ ಗೌರಿ ಲಕ್ಷ್ಮಿಬಾಯಿ ಅವರು ಶ್ರೀ ಚಿತ್ರಾ ತಿರುನಾಳ್ ಸಂಸ್ಥೆಯ ಮುಖಮಂಟಪದಲ್ಲಿ ದಶಕಗಳಷ್ಟು ಹಳೆಯದಾದ, ವಿಶ್ವಪ್ರಸಿದ್ಧ ಕಲಾವಿದ ಶ್ರೀನಿವಾಸಲು ಅವರ ಪ್ರತಿಮೆಯ ಎದುರು ದೀಪ ಬೆಳಗಿಸಿ  ಉದ್ಘಾಟಿಸಿದರು. ಕಲಾವಿದ ಶಿವಕುಮಾರ್ ತಿರುಮಲ ಅವರು ಲೋಹ ಕಲಾಸೃಷ್ಟಿಯನ್ನು ಉದ್ಘಾಟಿಸಿದರು.

                 ಶ್ರೀ ಚಿತ್ರ ತಿರುನಾಳ್ ಸಂಸ್ಥೆಯ ಸಾಧನಾ ಹೆಮ್ಮೆಯ ಬಗ್ಗೆ ಸಮಗ್ರ ಸಾಕ್ಷ್ಯಚಿತ್ರವನ್ನು  ಶ್ರೀ ಚಿತ್ರ ತಿರುನಾಲ್ ಸಂಸ್ಥೆಯ ನಿರ್ದೇಶಕ ಪೆÇ್ರಫೆಸರ್ ಕೆ ಜಯಕುಮಾರ್ ಅವರು ರಾಜ್ಯ ಪೋಲೀಸ್ ಮುಖ್ಯಸ್ಥ ಲೋಕನಾಥ್ ಬೆಹ್ರಾ ಅವರಿಗೆ ನೀಡಿ ಚಾಲನೆ ನೀಡಿದರು.  ಲೋಕನಾಥ್ ಬೆಹ್ರಾ ಅವರು ಭಾರತೀಯ ಸ್ವಾತಂತ್ರ್ಯ ಹೋರಾಟ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ 'ಅಪರಿಚಿತ ಶ್ರೇಷ್ಠರು' ಕುರಿತು ಪ್ರಬಂಧ ಸ್ಪರ್ಧೆಯ ಮೌಲ್ಯಮಾಪನವನ್ನು ನಡೆಸಿದರು.

                ಅಲ್ಲದೆ ಖ್ಯಾತ  ಚಿತ್ರಕಾರ ಸಜಿತಾ ಆರ್ ಶಂಕರ್ ಅವರು ಶ್ರೀ ಚಿತ್ರ ತಿರುನಾಲ್ ಸಂಸ್ಥೆಯ 'ಸ್ಮಾರಕ ಪುಸ್ತಕ'ವನ್ನು ಉದ್ಘಾಟಿಸಿ ಲೋಗೋ, ಚಿತ್ರಕಲೆ ಮತ್ತು ಛಾಯಾಗ್ರಹಣ ಪ್ರದರ್ಶನವನ್ನು ಉದ್ಘಾಟಿಸಿದರು. ಏಷ್ಯಾ ಮತ್ತು ಯುರೋಪಿನ ಪ್ರಮುಖ ಗ್ಯಾಲರಿಗಳಲ್ಲಿ ತನ್ನ ವರ್ಣಚಿತ್ರಗಳನ್ನು ಪ್ರದರ್ಶಿಸಿರುವ ಸಜಿತಾ ಆರ್ ಶಂಕರ್, ಶ್ರೀ ಚಿತ್ರದಲ್ಲಿ ಕಲಾವಿದರು ಪ್ರದರ್ಶಿಸಿದ ಲೋಗೊ, ಚಿತ್ರಕಲೆ ಮತ್ತು ಛಾಯಾಗ್ರಹಣÀ ಸ್ಪರ್ಧೆಯ ಮೌಲ್ಯಮಾಪನವನ್ನು ನಡೆಸಿದರು.

                'ಆಜಾದಿ ಕಾ ಮಹೋತ್ಸವ'ದ ಅಂಗವಾಗಿ ಶ್ರೀ ಚಿತ್ರ 75 ವಾರಗಳ ಅವಧಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಮುಂಬರುವ ವಾರಗಳಲ್ಲಿ ದಂಡಯಾತ್ರೆ ಸ್ಮರಣಾರ್ಥ ಸೆಮಿನಾರ್‍ಗಳು, ಯೋಗ, ವಾಕಥಾನ್ ಮತ್ತು ಸಂಗೀತ ರಾತ್ರಿ ಇರುತ್ತದೆ ಎಂದು ಶ್ರೀ ಚಿತ್ರದಲ್ಲಿ ಆಜಾದಿ ಕಾ ಮಹೋತ್ಸವದ ಮುಖ್ಯ ಸಂಘಟಕ ಅಶಾಲತಾ ಹೇಳಿದರು. ಈ ಕಾರ್ಯಕ್ರಮವನ್ನು ಪೂಜಪ್ಪುರ ಬಿಎಂಟಿ ವಿಂಗ್, ತಂತ್ರಜ್ಞಾನ ವಿಭಾಗ, ಶ್ರೀ ಚಿತ್ರ ಮತ್ತು ಸಾರ್ವಜನಿಕ ಆರೋಗ್ಯದ ಎಎಂಸಿ ಜಂಟಿಯಾಗಿ ಆಯೋಜಿಸಿವೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries