HEALTH TIPS

ರಾಜ್ಯದ ಮಾಜಿ ಆರೋಗ್ಯ ಸಚಿವೆ ಕೆ.ಕೆ.ಶೈಲಜಾಗೆ ಮತ್ತೆ ಅಂತರರಾಷ್ಟ್ರೀಯ ಪ್ರಶಸ್ತಿ ಗರಿ: ಸಿಇಒ ಓಪನ್ ಸೊಸೈಟಿ ಪ್ರಶಸ್ತಿ

               ತಿರುವನಂತಪುರ: ಕೇರಳದ ಮಾಜಿ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಮತ್ತೊಂದು ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ಕೆ.ಕೆ.ಶೈಲಜಾ ಅವರು ಕೇಂದ್ರ ಯುರೋಪಿಯನ್ ವಿಶ್ವವಿದ್ಯಾಲಯ (ಸಿಇಒ) ಓಪನ್ ಸೊಸೈಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಶುಕ್ರವಾರ ವಿಯೆನ್ನಾದಲ್ಲಿ ನಡೆಯಲಿದೆ.

                 ಈ ಮೊದಲು ಈ ಪ್ರಶಸ್ತಿಯನ್ನು ನೊಬೆಲ್ ಪ್ರಶಸ್ತಿ ವಿಜೇತರಿಗೆ ನೀಡಲಾಗಿತ್ತು. ಮುಕ್ತ ಸಮಾಜದ ಆದರ್ಶಗಳನ್ನು ಪೂರೈಸುವ ಮಹೋನ್ನತ ವ್ಯಕ್ತಿತ್ವವನ್ನು ಪ್ರಶಸ್ತಿ ಗುರುತಿಸುತ್ತದೆ. ಕಾರ್ಲ್ ಪಾಪ್ಪರ್, ಯುಎನ್ ಮಾಜಿ ಕಾರ್ಯದರ್ಶಿ - ಜನರಲ್ ಕೋಫಿ ಅನ್ನಾನ್, ಜೆಕ್ ಗಣರಾಜ್ಯ ಅಧ್ಯಕ್ಷ ಮತ್ತು ನಾಟಕಕಾರ ವಕ್ಲಾವ್ ಹೋವೆಲ್, ಮತ್ತು ವಿಶ್ವಪ್ರಸಿದ್ಧ ಅರ್ಥಶಾಸ್ತ್ರಜ್ಞ ಜೋಸೆಫ್ ಸ್ಟಿಗ್ಲಿಟ್ಜ್ ಈ ಪ್ರಶಸ್ತಿ ಪುರಸ್ಕøತರಾದವರಾಗಿದ್ದಾರೆ.

                  ಸಾರ್ವಜನಿಕ ಸೇವಕಿಯಾಗಿ ಮತ್ತು ಮಹಿಳಾ ನಾಯಕಿಯಾಗಿ ಸಾರ್ವಜನಿಕ ಆರೋಗ್ಯಕ್ಕೆ ಅವರು ಮಾಡಿದ ಸೇವೆಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

            ಕೆಇಯು ಅಧ್ಯಕ್ಷರು ಕೆ.ಕೆ. ಶೈಲಾಜಾ ಅವರು  ಮಹಿಳೆಯರನ್ನು ಸಾರ್ವಜನಿಕ ಸೇವೆಗೆ ಪ್ರವೇಶಿಸಲು ಪೆÇ್ರೀತ್ಸಾಹಿಸಿದವರಾಗಿದ್ದಾರೆ. ಮತ್ತು ಕೇರಳದ ಸಾಂಕ್ರಾಮಿಕ ಕಾಯಿಲೆಗಳ ದಾಖಲೆ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಭರವಸೆ ನೀಡುತ್ತದೆ ಎಂದು ಹೇಳಿದರು.

             ಶೈಲಜ ಅವರು ಈ ಹಿಂದೆ, ಕೋವಿಡ್ ನಿಯಂತ್ರಣದ  ಕಾರ್ಯಾಚರಣೆ ಅಂತರರಾಷ್ಟ್ರೀಯ ಗಮನ ಸೆ¼ದಿತ್ತು.  ಕೆ.ಕೆ. ಶೈಲಾಜಾ ಅವರನ್ನು ವಿಶ್ವಸಂಸ್ಥೆಯು 2020ರ ಜೂನ್ 23 ರಂದು ಗೌರವಿಸಿತ್ತು. ಕೊರೋನ ವೈರಸ್ ಹರಡುವಿಕೆಯ ವಿರುದ್ಧ ಕೇರಳದ ಹೋರಾಟದಲ್ಲಿ ಯುಎನ್ ಸಾರ್ವಜನಿಕ ಸೇವಾ ದಿನದಂದು ಶೈಲಜಾ ಟೀಚರ್ ಅವರನ್ನು ವಿಶೇಷ ಸ್ಪೀಕರ್ ಆಗಿ ಆಹ್ವಾನಿಸಿತ್ತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries