HEALTH TIPS

ಜಿರಳೆಯನ್ನು ಪಶು ಆಸ್ಪತ್ರೆಗೆ ಕರೆದುತಂದ ಮಹಾನುಭಾವ!

           ಥಾಯ್ಲೆಂಡ್​ : ಭಾರತದಲ್ಲಂತೂ ಜಿರಳೆ ಕಂಡರೆ ತಕ್ಷಣ ಹೊಡೆದು ಹಾಕುವವರೇ ಹೆಚ್ಚು. ಆದರೆ ಥಾಯ್ಲೆಂಡ್​ನಲ್ಲಿ ಜಿರಳೆಯ ಬಗ್ಗೆ ಮಿಡಿಯುವ ಹೃದಯಗಳಿವೆ ಎಂಬುದು ಇತ್ತೀಚೆಗೆ ಬೆಳಕಿಗೆ ಬಂದಿದೆ. ಹೌದು, ಏಟುಬಿದ್ದಿದ್ದ ಜಿರಳೆ ಬಗ್ಗೆ ಅನುಕಂಪ ತೋರಿದ ಪುಣ್ಯಾತ್ಮನ ಬಗ್ಗೆ ಥಾಯಿ ಪಶುವೈದ್ಯರೊಬ್ಬರು ಫೇಸ್​ಬುಕ್​ನಲ್ಲಿ ತಿಳಿಸಿದ್ದಾರೆ.


        ರಸ್ತೆಯ ಮೇಲೆ ಏಟುತಿಂದು ಬಿದ್ದಿದ್ದ ಜಿರಳೆಯನ್ನು ವ್ಯಕ್ತಿಯೊಬ್ಬರು ಪಶುವೈದ್ಯರ ಬಳಿಗೆ ಚಿಕಿತ್ಸೆಗಾಗಿ ಕರೆದೊಯ್ದಿರುವ ಪ್ರಸಂಗ ನಡೆದಿದೆ. ಈ ಬಗ್ಗೆ ಸಮುತ್​ ಸಖೋನ್​ ಅನಿಮಲ್​ ಹಾಸ್ಪಿಟಲ್​ನ ಡಾ. ತನು ಲಂಪಾಪಟ್ಟನವನಿಚ್​ ಎಂಬ ಪಶುವೈದ್ಯ ಚಿತ್ರದ ಸಮೇತ ಪೋಸ್ಟ್​ ಮಾಡಿದ್ದಾರೆ.

          'ನಿನ್ನೆ ರಾತ್ರಿ ಯಾರೋ ರಸ್ತೆಯ ಬದಿಯಲ್ಲಿದ್ದ ಜಿರಳೆಯನ್ನು ತುಳಿದುಬಿಟ್ಟಿದ್ದರು. ಅದರ ಸ್ಥಿತಿಯನ್ನು ನೋಡಿ ಅನುಕಂಪ ಮೂಡಿದ ಸಜ್ಜನರೊಬ್ಬರು ಅದನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತಂದರು. ಈಗ ಅದರ ಒದ್ದಾಟ ಅರ್ಧದಷ್ಟು ಕಡಿಮೆಯಾಗಿದೆ' ಎಂದು ಡಾ. ತನು ಥಾಯಿ ಭಾಷೆಯಲ್ಲಿ ಪೋಸ್ಟ್​ ಮಾಡಿದ್ದಾರೆ. ಜೊತೆಗೆ, 'ಇದು ತಮಾಷೆಯಲ್ಲ. ಇದು ಪ್ರತಿಯೊಂದು ಜೀವಿಯ ಬಗ್ಗೆಯೂ ಅಂತಃಕರಣ ಹೊಂದಿರಬೇಕೆಂಬುದಕ್ಕೆ ಉದಾಹರಣೆ. ಇಂತಹ ಜನರು ಜಗತ್ತಿನಲ್ಲಿ ಹೆಚ್ಚಾಗಲಿ ಎಂದು ಆಶಿಸುತ್ತೇನೆ' ಎಂದು ಬರೆದಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries