ಭೋಪಾಲ್: ಕೋವಿಡ್ -19 ಲಸಿಕೆ ಪಡೆಯಲು ಹಿಂಜರಿಯಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಒತ್ತಾಯಿಸಿದ್ದಾರೆ. ಇನ್ನು ಪ್ರಧಾನಿ ಅವರೊಂದಿಗೆ ಮಾತನಾಡಿದ ಬಳಿಕ ಮಧ್ಯಪ್ರದೇಶದ ಗ್ರಾಮಸ್ಥರೊಬ್ಬರು ತಮ್ಮ ಇಡೀ ಕುಟುಂಬಕ್ಕೆ ಲಸಿಕೆ ಹಾಕಿಸಿದ್ದಾರೆ.
ಕೊರೋನಾವೈರಸ್ ವಿರುದ್ಧ ಲಸಿಕೆ ಪಡೆಯುವಂತೆ ಬೆತುಲ್ ಜಿಲ್ಲೆಯ ದುಲಾರಿಯಾ ಗ್ರಾಮದ ನಿವಾಸಿಗಳೊಂದಿಗೆ ಪ್ರಧಾನಿ ಮೋದಿ ಮಾತನಾಡಿದರು. ಪ್ರಧಾನಮಂತ್ರಿಯ ಮಾಸಿಕ ಮನ್ ಕೀ ಬಾತ್ ನಲ್ಲಿ ಈ ದೂರವಾಣಿ ಸಂಭಾಷಣೆಯನ್ನು ಪ್ರಸಾರ ಮಾಡಲಾಯಿತು.
ಲಸಿಕೆ ಅಭಿಯಾನದ ಬಗ್ಗೆ ಇರುವ ಅನುಮಾನಗಳನ್ನು ಬಗೆಹರಿಸುವ ಪ್ರಯತ್ನ ನಡೆಸಿದ ಮೋದಿ ಲಸಿಕೆ ಪಡೆಯುವಂತೆ ಸಲಹೆ ನೀಡಿದರು. ಪ್ರಧಾನಿಗಳೊಂದಿಗಿನ ಮಾತುಕತೆ ನಂತರ 43 ವರ್ಷದ ರಾಜೇಶ್ ಹಿರಾವೆ ತನ್ನು ಕುಟುಂಬ ಸದಸ್ಯರೊಂದಿಗೆ ಶನಿವಾರ ಕೊರೋನಾವೈರಸ್ ತಡೆಗಟ್ಟಲು ಲಸಿಕೆ ಡೋಸ್ ಪಡೆದಿರುವುದಾಗಿ ಹಿರವೆ ಹೇಳಿದ್ದಾರೆ.
ಇದೇ ಅಲ್ಲದೆ ತಮ್ಮ ಗ್ರಾಮದಲ್ಲಿನ ಜನರನ್ನು ಪ್ರೋತ್ಸಾಹಿಸಿ ಬರೋಬ್ಬರಿ 127 ಜನರಿಗೆ ಲಸಿಕೆ ಕೊಡಿಸಲಾಯಿತು ಎಂದು ಅವರು ಹೇಳಿದರು. ಅಲ್ಲದೆ ಇನ್ನಷ್ಟು ಗ್ರಾಮಸ್ಥರು ಲಸಿಕೆ ಪಡೆಯುವಂತೆ ಸ್ಫೂರ್ತಿ ನೀಡುವುದಾಗಿ ಹೇಳಿದರು.
ಪ್ರಧಾನಿ ಜೊತೆ ಮಾತನಾಡಿದ್ದು ತುಂಬಾ ಸಂತೋಷವಾಗಿದೆ. ನನ್ನ ಸಂತೋಷವನ್ನು ವ್ಯಕ್ತಪಡಿಸಲು ನನ್ನ ಬಳಿ ಪದಗಳಿಲ್ಲ ಎಂದು ಹಿರಾವೆ ಹೇಳಿದ್ದಾರೆ.
ವಾಟ್ಸ್‌ಆಯಪ್‌ನಲ್ಲಿ ಲಸಿಕೆ ಬಗ್ಗೆ ತಪ್ಪು ಮಾಹಿತಿಗಳು ಹರಡಿರುವುದರಿಂದ ಜನರು ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ ಎಂದು ಹಿರಾವೆ ಪ್ರಧಾನ ಮಂತ್ರಿಯೊಂದಿಗೆ ಮಾತನಾಡುತ್ತಾ ಹೇಳಿದರು.
ಹಿರಾವ್ ಮತ್ತು ಧುರ್ವೆ ಅವರೊಂದಿಗೆ ಮಾತನಾಡುವಾಗ ಪ್ರಧಾನಿ ಮೋದಿ ಅವರು ಸುಮಾರು 100 ವರ್ಷದ ತಮ್ಮ ತಾಯಿ ಲಸಿಕೆಯ ಎರಡೂ ಡೋಸ್ ಗಳನ್ನು ತೆಗೆದುಕೊಂಡಿದ್ದಾರೆ. ಜನರು ವದಂತಿಗಳನ್ನು ನಂಬಬೇಡಿ ಎಂದರು.





