ಬದಿಯಡ್ಕ: ನೂತನ ಶೈಕ್ಷಣಿಕ ಅಧ್ಯಯನ ವರ್ಷ ಆರಂಭಗೊಂಡು, ತರಗತಿಗಳು ಡಿಜಿಟಲ್ ಮಾಧ್ಯಮದ ಮೂಲಕ ನಡೆಯುತ್ತಿದೆ. ಆದರೆ ಆರ್ಥಿಕವಾಗಿ ತೀರಾ ಹಿಂದುಳಿದವರು ಮಕ್ಕಳ ವಿದ್ಯಾಭ್ಯಾಸದ ಕುರಿತು ಚಿಂತೆಗೀಡಾಗಿರುವುದೂ ವರದಿಯಾಗುತ್ತಿದೆ. ಕಲಿಯುವಿಕೆಯಲ್ಲಿ ಆಸಕ್ತಿಯಿದ್ದರೂ ಸತತ ಲಾಕ್ ಡೌನ್ ,ಉದ್ಯೋಗ ಇಲ್ಲದುದರಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿ ಮಕ್ಕಳಿಗೆ ಸರಿಯಾಗಿ ಡಿಜಿಟಲ್ ಮಾಧ್ಯಮದ ತರಗತಿಗಳನ್ನು ನೀಡಲು ಅಸಹಾಯಕರಾಗಿರುವರು. ಇಂತಹ ಕಷ್ಟದ ಸಂದರ್ಭದಲ್ಲಿ ಮಕ್ಕಳ ವಿದ್ಯಾರ್ಜನೆಗೆ ಯಾವುದೇ ಕುಂದು ಕೊರತೆಗಳಾಗಬಾರದೆಂದು ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವರಾದ, ಕೊಡುಗೈದಾನಿ , ಬದಿಯಡ್ಕ ಪಂಚಾಯತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಕಿಳಿಂಗಾರು ಶಾಲಾ ವ್ಯವಸ್ಥಾಪಕರೂ ಆದ ಕೆ.ಎನ್ ಕೃಷ್ಣ ಭಟ್ ಮಕ್ಕಳ ಓನ್ಲೈನ್ ಕಲಿಕೆಗೆ ಸಹಾಯಹಸ್ತ ನೀಡಿರುವರು. ವಿದ್ಯಾರ್ಥಿಗಳಿಗೆ ಉಚಿತ ಸ್ಮಾಟ್ರ್ಫೋನ್ ನೀಡಿ ಕಲಿಕೆಗೆ ಪೆÇ್ರೀತ್ಸಾಹ ನೀಡಿದರು. ಕಿಳಿಂಗಾರು ಸೀತಾಂಗೋಳಿ ಆಸುಪಾಸಿನ ವಿದ್ಯಾರ್ಥಿಗಳಿಗೆ ಉಚಿತ ಸ್ಮಾರ್ಟ್ ಪೋನ್ ವಿತರಿಸಿದರು. ಈ ಸಂದರ್ಭದಲ್ಲಿ ಎ.ಎಲ್.ಪಿ ಕಿಳಿಂಗಾರು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀವಿದ್ಯಾ ಎ, ಅಧ್ಯಾಪಕ ಪ್ರದೀಪ್ ಕುಮಾರ್ ಶೆಟ್ಟಿ, ಅಧ್ಯಾಪಿಕೆ ಸಹನಾ ಯಂ ಉಪಸ್ಥಿತರಿದ್ದರು.





