ತಿರುವನಂತಪುರ: ಯುಡಿಎಫ್ ಬಣದ ಸಹ ಪಕ್ಷವಾದ ಆರ್.ಎಸ್.ಪಿ ಕಳೆದ ವಿಧಾನಸಭಾ ಚುನಾವಣೆಯ ಬಳಿಕ ತೀವ್ರ ಭ್ರಮನಿರಸನಗೊಂಡಿದ್ದು, ಯುಡಿಎಫ್ ನಿಂದ ಹೊರಗಿಳಿಯುವ ಸೂಚನೆ ನೀಡಿದೆ. ಆರ್.ಎಸ್.ಪಿ ಯುಡಿಎಫ್ ನ ಕಾರ್ಯಚಟುವಟಿಕೆಗಳನ್ನು ತೀವ್ರವಾಗಿ ಟೀಕಿಸಿದೆ. ಚುನಾವಣಾ ಸೋಲಿಗೆ ಯುಡಿಎಫ್‍ನ ಸಾಂಸ್ಥಿಕ ದೌರ್ಬಲ್ಯವನ್ನು ಆರ್‍ಎಸ್‍ಪಿ ಮುಖಂಡ ಮತ್ತು ಸಂಸದ ಎನ್ ಕೆ ಪ್ರೇಮಚಂದ್ರನ್ ದೂಷಿಸಿದ್ದಾರೆ. ಎಡಪಂಥೀಯರ ಸಾಂಸ್ಥಿಕ ಸ್ಥಿರತೆಯ ಹಿನ್ನೆಲೆಯಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ದೌರ್ಬಲ್ಯದಿಂದಾಗಿ ಈ ಸೋಲು ಸಂಭವಿಸಿದೆ. ಎಲ್.ಡಿ.ಎಫ್‍ನ ಸಾಂಸ್ಥಿಕ ರಚನೆಯನ್ನು ಎದುರಿಸಲು ಯುಡಿಎಫ್ ಬದ್ಧವಾಗಿಲ್ಲ ಮತ್ತು ಎಡಪಂಥೀಯರು ಮೂಲಭೂತವಾದಿ ಶಕ್ತಿಗಳೊಂದಿಗೆ ಚುನಾವಣಾ ಒಪ್ಪಂದಕ್ಕೆ ಬಂದಿದ್ದಾರೆ ಎಂದು ಪ್ರೇಮಚಂದ್ರನ್ ತಿರುವನಂತಪುರದÀಲ್ಲಿ ನಿನ್ನೆ ಹೇಳಿದರು.
ಇದೇ ವೇಳೆ, ಆರ್ ಎಸ್ ಪಿ ರಾಜ್ಯ ಕಾರ್ಯದರ್ಶಿ ಎಎ ಅಜೀಜ್ ಪ್ರತಿಕ್ರಿಯಿಸಿ, ಯುಡಿಎಫ್ ನಿಂದ ಹೊರ ತೆರಳುವ ಬಗ್ಗೆ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ಚುನಾವಣಾ ಸೋಲಿನ ಹೆಸರಿನಲ್ಲಿ ಯುಡಿಎಫ್ ಬಣದಿಂದ ಹೊರ ತೆರಳುವುದು ಕಾರ್ಯಸೂಚಿಯಲ್ಲಿಲ್ಲ. ಆಗಸ್ಟ್ 9 ರಂದು ಕೊಲ್ಲಂನಲ್ಲಿ 500 ನಾಯಕರ ಸಮಾವೇಶ ನಡೆಯಲಿದೆ.ಅಲ್ಲಿ ಅಂತಿಮ ನಿರ್ಣಯ ನಡೆಯಲಿದೆ ಎಂದು ಅಜೀಜ್ ತಿಳಿಸಿದ್ದಾರೆ.





