ಕಾಸರಗೋಡು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಡಬ್ಲ್ಯೂಜೆಎ) ಇದರ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ನಿನ್ನೆ ಮಂಜೇಶ್ವರ ಕ್ಷೇತ್ರದ ನೂತನ ಶಾಸಕ ಸಿ.ಎಚ್ ಕುಂಞಬು ಹಾಗೂ ಎ.ಕೆ.ಎಂ ಅಶ್ರಫ್ ಅವರನ್ನು ಸಂಘದ ಪರವಾಗಿ ಕೆಡಬ್ಲ್ಯೂಜೆಎ ಕಾಸರಗೋಡು ಜಿಲ್ಲಾ ಘಟಕಾಧ್ಯಕ್ಷ ಅಬ್ದುಲ್ ರಹಮಾನ್ ಸುಬ್ಬಯ್ಯಕಟ್ಟೆ ಅಭಿನಂದಿಸಿದರು. ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಗಂಗಾಧರ ಯಾದವ್, ಕೋಶಾಧಿಕಾರಿ ಪುರುಷೋತ್ತಮ ಪೆರ್ಲ ಮತ್ತಿತರರು ಉಪಸ್ಥಿತರಿದ್ದರು.
ಕಳೆದ ಮಾರ್ಚ್‍ನಲ್ಲಿ ಆಸ್ತಿತ್ವಕ್ಕೆ ಬಂದ ಕೆಡಬ್ಲ್ಯೂಜೆಎ ಕಾಸರಗೋಡು ಜಿಲ್ಲಾ ಸಮಿತಿಯು ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಿದೆ. ಕೋವಿಡ್ 2ನೇ ಅಲೆಯಲ್ಲಿ ಸಂಕಷ್ಟಕ್ಕೊಳಗಾದ ಪತ್ರಕರ್ತರಿಗೆ ವಿಶೇಶವಾಗಿ ಸ್ಪಂದಿಸುತ್ತಿದೆ.
ಕಳೆದ ಭಾನುವಾರÀ ಮಂಗಳೂರು ಜೆಪ್ಪು ಇಲ್ಲಿನ ಸಂತ ಅಂತೋನಿ ಆಶ್ರಮದಲ್ಲಿ ಆಚರಿಸಲಾದ ವಾರ್ಷಿಕ ಹಬ್ಬದ ನಿಮಿತ್ತ ಸಂತ ಆಂತೋನಿ ಆಶ್ರಮದ ನಿರ್ದೇಶಕ ರೆ| ಫಾ| ಒನಿಲ್ ಡಿಸೋಜ ಅವರ ಮಾರ್ಗದರ್ಶನದಂತೆ ಆಶ್ರಮದ ವತಿಯಿಂದ ಪತ್ರಕರ್ತರಿಗೆ ಆಹಾರ ಕಿಟ್ ಗಳ ನೆರವು ವಿತರಿಸಲಾಗಿತ್ತು. ಈ ಆಹಾರದ ಕಿಟ್‍ಗಳನ್ನು ಸ್ಟೇನ್ಲಿ ಬಿಕರ್ಣಕಟ್ಟೆ ಸಹಯೋಗದೊಂದಿಗೆ ಇದೇ ಬುಧವಾರ (ಜೂ.16) ಕಾಸರಗೋಡು ಕನ್ನಡಿಗ ಪತ್ರಕರ್ತರಿಗೂ ಹಂಚಲಾಗುವುದು ಎಂದು ಎ.ಆರ್ ಸುಬ್ಬಯ್ಯಕಟ್ಟೆ ತಿಳಿಸಿದ್ದಾರೆ.





