HEALTH TIPS

ಟಿವಿ ಚಾನಲ್ ಆಯ್ಕೆ ವೆಬ್ ಪೋರ್ಟಲ್ ಪ್ರಾರಂಭಿಸಿದ ಟ್ರಾಯ್: ಪ್ರಯೋಜನಗಳ ಬಗ್ಗೆ ಹೀಗಿದೆ ಮಾಹಿತಿ

           ನವದೆಹಲಿಭಾರತದ ಟೆಲಿಕಾಮ್ ನಿಯಂತ್ರಕ ಪ್ರಾಧಿಕಾರ ಜೂ.16 ರಂದು ಟಿವಿ ಚಾನಲ್ ಆಯ್ಕೆ ವೆಬ್ ಪೋರ್ಟಲ್ ನ್ನು ಪ್ರಾರಂಭಿಸಿದೆ.

         ಟ್ರಾಯ್ ನ ಮೊಬೈಲ್ ಫೋನ್ ಆಪ್ ನ್ನು ಬಳಕೆ ಮಾಡುವುದಕ್ಕೆ ಸಾಧ್ಯವಾಗದವರು ಅಥವಾ ಬ್ರೌಸರ್ ನ್ನು ಮೊಬೈಲ್ ಫೋನ್ ನಲ್ಲಿ ಬಳಕೆ ಮಾಡಲು ಇಚ್ಛಿಸದವರು ಈ ವೆಬ್ ಪೋರ್ಟಲ್ ಮೂಲಕ ತಮ್ಮ ಇಷ್ಟದ ಟಿವಿ ಚಾನಲ್ ನ್ನು ಆಯ್ಕೆ ಮಾಡುವುದಕ್ಕಾಗಿ ಬಳಕೆ ಮಾಡಬಹುದಾಗಿದೆ.

             ಕಳೆದ ವರ್ಷವೇ ಟ್ರಾಯ್ ಈ ಉದ್ದೇಶಕ್ಕಾಗಿ ಆಪ್ ನ್ನೂ ಅಭಿವೃದ್ಧಿಪಡಿಸಿತ್ತು. ಡಿಟಿಹೆಚ್/ ಕೇಬಲ್ ಆಪರೇಟರ್ ಗೆ ಕಳಿಸುವ ಮೊದಲೇ ಚಂದಾದಾರಿಕೆಯನ್ನು ಅತ್ಯುತ್ತಮವಾಗಿಸಿಕೊಳ್ಳುವುದನ್ನು ಸಾಧ್ಯವಾಗಿಸುವುದು ಆಪ್ ಹಾಗೂ ವೆಬ್ ಪೋರ್ಟಲ್ ನ ಮುಖ್ಯ ಉದ್ದೇಶವಾಗಿದೆ.

           ಚಂದಾದಾರಿಕೆಯನ್ನು ಪರಿಶೀಲಿಸುವುದು, ಬದಲಾವಣೆ ಮಾಡುವುದು, ತಮ್ಮ ಕೇಬಲ್ ಆಪರೇಟರ್ ಗಳು ನೀಡಿರುವ ಚಾನಲ್ ಗಳ ಪಟ್ಟಿಯನ್ನು ನೋಡುವುದು ಹಾಗೂ ಅವುಗಳಲ್ಲಿ ಇಷ್ಟದ ಚಾನಲ್ ಗಳನ್ನು ಆಯ್ಕೆ ಮಾಡುವುದಕ್ಕೆ ಈ ವೆಬ್ ಪೋರ್ಟಲ್ ನ್ನು ಬಳಕೆ ಮಾಡಬಹುದಾಗಿದೆ. ಆಪ್ ನಲ್ಲಿರುವ ಎಲ್ಲಾ ವೈಶಿಷ್ಟ್ಯಗಳೂ ಈ ವೆಬ್ ಪೋರ್ಟಲ್ ನಲ್ಲಿದ್ದು, ಡೌನ್ ಲೋಡ್ ಸೌಲಭ್ಯವನ್ನೂ ನೀಡಲಾಗಿದೆ.

         ಗ್ರಾಹಕರು ಪ್ರತಿಕ್ರಿಯೆಗಳನ್ನು ಸಲ್ಲಿಸುವುದಕ್ಕೂ ಅವಕಾಶವಿದ್ದು, 16 ಡಿಟಿಹೆಚ್ ಹಾಗೂ ಕೇಬಲ್ ಆಪರೇಟರ್ ಗಳೊಂದಿಗೆ ಈ ವೆಬ್ ಪೋರ್ಟಲ್ ಹಾಗೂ ಆಪ್ ಕಾರ್ಯನಿರ್ವಹಿಸುತ್ತದೆ ಎಂದು ಟ್ರಾಯ್ ಹೇಳಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries