ತಿರುವನಂತಪುರ; ರಾಜ್ಯದ ಜಲ ಸಾರಿಗೆ ಇಲಾಖೆಯ ಅಡಿಯಲ್ಲಿರುವ ದೋಣಿಗಳನ್ನು ಸೌರ ಇಂಧನ ಚಾಲನೆಗೆ ಪರಿವರ್ತಿಸಲಾಗುವುದು ಎಂದು ಸಾರಿಗೆ ಸಚಿವ ಆಂಟನಿ ರಾಜು ಹೇಳಿದ್ದಾರೆ.
ಪ್ರಸ್ತುತ, ದಟ್ಟಣೆಯ ಮಾರ್ಗಗಳಲ್ಲಿ 30 ಪ್ರಯಾಣಿಕರನ್ನು ಹೊತ್ತ ನಾಲ್ಕು ದೋಣಿಗಳನ್ನು ಸೌರಶಕ್ತಿ ಚಾಲಿತ ಸೇವೆಗಳಾಗಿ ಪರಿವರ್ತಿಸಲಾಗುತ್ತಿದೆ. ಇಂಧನವನ್ನು ತೊಡೆದುಹಾಕುವ ಮೂಲಕ ಮತ್ತು ಪರಿಸರ ಸ್ನೇಹಿ ಮತ್ತು ಕಡಿಮೆ ವೆಚ್ಚದ ದೋಣಿ ಸೇವೆಗಳನ್ನು ಒದಗಿಸುವ ಮೂಲಕ ಜಲ ಸಾರಿಗೆ ಕ್ಷೇತ್ರವನ್ನು ಲಾಭದಾಯಕವಾಗಿಸುವ ಗುರಿ ಹೊಂದಿದೆ ಎಂದು ಸಚಿವರು ಹೇಳಿರುವರು.
ಇದಕ್ಕಾಗಿ 10 ಕೋಟಿ ರೂ.ಗಳ ಆಡಳಿತಾತ್ಮಕ ಅನುಮತಿ ನೀಡಲಾಗಿದೆ. ಟೆಂಡರ್ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ಈ ನಾಲ್ಕು ಮಾರ್ಗಗಳಲ್ಲಿನ ದೋಣಿಗಳು 18 ತಿಂಗಳಲ್ಲಿ ಸಂಪೂರ್ಣ ಸೌರಶಕ್ತಿ ಚಾಲನೆಯಾಗಲಿದೆ ಎಂದು ಸಚಿವರು ಹೇಳಿರುವರು.






