ತಿರುವನಂತಪುರ: ಇಂಧನ ಬೆಲೆ ಏರಿಕೆ ಮುಂದುವರಿದ ಹಿನ್ನೆಲೆಯಲ್ಲಿ ಬಸ್ ದರ ಹೆಚ್ಚಿಸಬಹುದೇ ಎಂಬ ಬಗ್ಗೆ ಸಾರಿಗೆ ಸಚಿವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಇಂಧನ ಬೆಲೆಗಳ ಏರಿಕೆಯಿಂದ ಉಂಟಾಗುವ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಟಿಕೆಟ್ ದರವನ್ನು ಹೆಚ್ಚಿಸುವ ಪರಿಗಣನೆಯಲ್ಲಿಲ್ಲ ಎಂದು ಸಚಿವ ಆಂಟನಿ ರಾಜು ಹೇಳಿದ್ದಾರೆ.
ಬಸ್ ಶುಲ್ಕ ಹೆಚ್ಚಿಸುವ ಬಗ್ಗೆ ಯಾವುದೇ ಚಿಂತನೆಗಳು ನಡೆದಿಲ್ಲ. ಕೆ.ಎಸ್.ಆರ್.ಟಿ.ಸಿ.ಯಲ್ಲಿನ ಪಿಂಚಣಿ ಬಿಕ್ಕಟ್ಟು ಬಗೆಹರಿಯಲಿದೆ. ಸಹಕಾರಿ ಬ್ಯಾಂಕ್ ಮೂಲಕ ವಿತರಣೆಗಾಗಿ ಇರುವ ಕರಾರನ್ನು ನವೀಕರಿಸಲಾಗುವುದು. ಕೆ.ಎಸ್.ಆರ್.ಟಿ.ಸಿ.ಯಲ್ಲಿ ಆರ್ಥಿಕ ಶಿಸ್ತು ಪರಿಚಯಿಸಲಾಗುವುದು ಎಂದರು.
ತಿರುವನಂತಪುರಂನಲ್ಲಿ ಕೆಎಸ್‍ಆರ್‍ಟಿಸಿಯ ಮೊದಲ ಎಲ್‍ಎನ್‍ಜಿ ಬಸ್ ಸೇವೆಯನ್ನು ಉದ್ಘಾಟಿಸಿದ ನಂತರ ಸಚಿವರು ಮಾತನಾಡಿದರು. ಕೋವಿಡ್ ನಿಯಂತ್ರಣಗಳು ಮುಂದುವರೆದಂತೆ ದೈನಂದಿನ ಇಂಧನ ಬೆಲೆ ಏರಿಕೆಯ ವರದಿಗಳ ಹಿನ್ನೆಲೆಯಲ್ಲಿ ಬಸ್ ದರವನ್ನು ಹೆಚ್ಚಿಸಬಹುದೆಂಬ ಆತಂಕದ ಮಧ್ಯೆ ಸಚಿವರ ಹೇಳಿಕೆ ಮಹತ್ವ ಪಡೆದಿದೆ. ಇದೇ ವೇಳೆ, ಖಾಸಗಿ ಬಸ್ ಮಾಲ್ಹಕರ ಸಂಘವು ತೆರಿಗೆ ವಿನಾಯಿತಿ ಸೇರಿದಂತೆ ಹಲವಾರು ಬೇಡಿಕೆಗಳನ್ನು ಸರ್ಕಾರಕ್ಕೆ ಮಂಡಿಸಿದೆ.
ಕೆ.ಎಆರ್.ಟಿಸಿ ನೌಕರರ ವೇತನ ಪರಿಷ್ಕರಣೆಯೊಂದಿಗೆ ಮಾತುಕತೆ ಆರಂಭವಾಗಿದೆ. 2015 ರಲ್ಲಿ, ಸೇವಾ-ವೇತನ ಸುಧಾರಣೆಯ ಪ್ರಯತ್ನ ನಡೆದರೂ ಅದನ್ನು ಮುಂದೂಡಲಾಯಿತು. ಸಾರಿಗೆ ಸಚಿವ ಆಂಟನಿ ರಾಜು ಮಾತನಾಡಿ, ಕೆ.ಎಸ್.ಆರ್.ಟಿ.ಸಿ. ಆಧುನೀಕರಣದ ಹಾದಿಯಲ್ಲಿದೆ ಮತ್ತು ನೌಕರರ ಆತ್ಮವಿಶ್ವಾಸದಿಂದ ಆಧುನೀಕರಣವನ್ನು ಜಾರಿಗೆ ತರಲು ಮುನ್ನುಡಿಯಾಗಿ ವೇತನ ಸುಧಾರಣಾ ಮಾತುಕತೆಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದಿರುವರು.





