HEALTH TIPS

ಮಾದಕ ಪದಾರ್ಥ ವ್ಯಸನ ವಿರುದ್ಧ ಸಪ್ತಾಹ ಆರಂಭ

           ಕಾಸರಗೋಡು: ಅಂತಾರಾಷ್ಟ್ರೀಯ ಮಾದಕ ಪದಾರ್ಥ ದಿನಾಚರಣೆ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ಮಾದಕ ಪದಾರ್ಥ ವ್ಯಸನ ವಿರುದ್ಧ ಸಪ್ತಾಹ ಆರಂಭಗೊಂಡಿದೆ. 

                      ಸಮಾಜನೀತಿ ಇಲಾಖೆಯ ನೇತೃತ್ವದಲ್ಲಿ ಪೆÇಲೀಸ್, ಅಬಕಾರಿ, ಮಹಿಳಾ-ಶಿಶು ಅಭಿವೃದ್ಧಿ, ಶಿಕ್ಷಣ ಇಲಾಖೆಗಳು, ಕುಟುಂಬಶ್ರೀ ಮಿಷನ್, ನೆಹರೂ ಯುವಕೇಂದ್ರ, ಬೆಟರ್ ಲೈಫ್ ಫೌಂಡೇಷನ್ ಜಂಟಿ ಸಹಕಾರದೊಂದಿಗೆ ಒಂದು ವಾರದ ಅವಧಿಯಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ. 

                 ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸಪ್ತಾಹಕ್ಕೆ ಚಾಲನೆ ನೀಡಿದರು. ಜಿಲ್ಲಾ ಸಮಾಜನೀತಿ ಅಧಿಕಾರಿ ಸಿ.ಕೆ.ಷೀಬಾ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಅಬಕಾರಿ ಕಮೀಷನರ್ ವಿನೋದ್ ಬಿ.ನಾಯರ್ ಮುಖ್ಯ ಅತಿಥಿಯಾಗಿದ್ದರು. ನಾರ್ಕೋಟಿಕ್ಸ್ ಡಿ.ವೈ.ಎಸ್.ಪಿ. ಟಿ.ಪಿ.ಪ್ರೇಮರಾಜನ್ ಪ್ರಧಾನ ಭಾಷಣ ಮಾಡಿದರು. ಜಿಲ್ಲಾ ಶಿಕ್ಷಣ ಉಪನಿರ್ದೇಶಕಿ ಕೆ.ವಿ.ಪುಷ್ಪಾ, ಜಿಲ್ಲಾ ಮಹಿಳಾ-ಶಿಶು ಅಭಿವೃದ್ಧಿ ಅಧಿಕಾರಿ ಕವಿತಾರಾಣಿ ರಂಜಿತ್, ಕುಟುಂಬಶ್ರೀ ಮಿಷನ್ ಜಿಲ್ಲಾ ಸಂಚಾಲಕ ಟಿ.ಟಿ.ಸುರೇಂದ್ರನ್, ಬೆಟರ್ ಲೈಫ್ ಫೌಂಡೇಷನ್ ಅಧ್ಯಕ್ಷ ಮೋಹನದಾಸ್ ಮೊದಲಾದವರು ಉಪಸ್ಥಿತರಿದ್ದರು. ಪೆÇ್ರಬೇಷನ್ ಅಧಿಕಾರಿ ಪಿ. ಬಿಜು ಸ್ವಾಗತಿಸಿದರು. ಎಂ.ಅಬ್ದುಲ್ಲ ವಂದಿಸಿದರು. 

            ಸಪ್ತಾಹದ ಅಂಗವಾಗಿ ಜಿಲ್ಲೆಯ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಕಥಾರಚನೆ ಸ್ಪರ್ಧೆ, ಸಾರ್ವಜನಿಕರಿಗಾಗಿ ಮೊಬೈಲ್ ಶಾರ್ಟ್ ಫೀಲಂ ಸ್ಪರ್ಧೆ ಜರುಗಲಿದೆ. "ಮಾದಕ ಪದಾರ್ಥ ಸೇವನೆಯಿಂದ ಶಿಥಿಲಗೊಂಡ ಬದುಕು" ಎಂಬುದು ವಿಷಯವಾಗಿದೆ. ಕಥೆ 3 ಪುಟಗಳನ್ನು ಮೀರಬಾರದು. ಇತರ ಸ್ಪರ್ಧೆಗಳಿಗೆ ಕಳುಹಿಸಿರುವ, ಬಹುಮಾನ ಲಭಿಸಿದ ಕೃತಿಗಳು ಸಲ್ಲದು. ಮೊಬೈಲ್ ಸಾರ್ಟ್ ಫಿಲಂ 5 ನಿಮಿಷಗಳನ್ನು ಮೀರಬಾರದು. ಒಬ್ಬರು ಒಂದು ವೀಡಿಯೋ ಮಾತ್ರ ಕಳುಹಿಸಬೇಕು. ಜೂ.30ರ ಮುಮಚಿತವಾಗಿ ವೀಡಿಯೋ, ಪಿ.ಡಿ.ಎಫ್. ನಲ್ಲಿ ಸಿದ್ಧಪಡಿಸಿರುವ ಕಥೆ ಯನ್ನು 8113030112 ಎಂಬ ವಾಟ್ಸ್ ಆಪ್ ಗೆ ಮತ್ತು ಜಡಿugಜಿಡಿeeಞಚಿsಚಿಡಿಚಿgoಜ@gmಚಿiಟ.ಛಿomಎಂಬ ಇ-ಮೇಲ್ ಗೆ ಕಳುಹಿಸಬೇಕು. ಹೆಸರು, ವಿಳಾಸ, ದೂರವಾಣಿ ನಂಬ್ರ ಇತ್ಯಾದಿಗಳನ್ನೂ ಜತೆಗೆ ಕಳುಹಿಸಬೇಕು. ಮೊದಲ ಮತ್ತು ದ್ವಿತೀಯ ಬಹುಮಾನ ವಿಜೇತರಿಗೆ ಅರ್ಹತಾಪತ್ರ, ಸ್ಮರಣಿಕೆ ಲಭಿಸಲಿದೆ. ಮಾದಕ ಪದಾರ್ಥ ಸೇವನೆ ವಿರುದ್ಧ ಸಪ್ತಾಹ ಅಂಗವಾಗಿ ಸೈಕಲ್ ರಾಲಿ, ವೆಬಿನಾರ್, ಐ.ಇ.ಸಿ. ಶಿಬಿರಗಳು, ಸಂವಾದ ಇತ್ಯಾದಿ ನಡೆಯಲಿವೆ. ದೂರವಾಣಿ ಸಂಖ್ಯೆ: 9747019509. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries