HEALTH TIPS

ಭಾರತದಲ್ಲಿರುವ ವಿದೇಶಿ ಪ್ರಜೆಗಳ ವೀಸಾ ಅವಧಿ ವಿಸ್ತರಣೆ

          ನವದೆಹಲಿ : ಕರೊನಾದಿಂದಾಗಿ ಅಂತರರಾಷ್ಟ್ರೀಯ ವಾಣಿಜ್ಯ ವಿಮಾನಗಳ ಮೇಲೆ ನಿರ್ಬಂಧಗಳಿರುವುದರಿಂದ ಭಾರತದಲ್ಲೇ ಇರಬೇಕಾಗಿ ಬಂದಿರುವ ವಿದೇಶೀಯರ ವೀಸಾ ವಾಲಿಡಿಟಿಯನ್ನು ಆಗಸ್ಟ್​ 31 ರವರೆಗೆ ವಿಸ್ತರಿಸಲಾಗಿದೆ. ಹಲವು ವಿದೇಶೀಯರು 2020ರ ಮಾರ್ಚ್​ನಿಂದಲೂ ಭಾರತದಲ್ಲೇ ವಾಸಿಸುತ್ತಿದ್ದು, ಈವರೆಗೆ ವೀಸಾ ಅವಧಿಯಲ್ಲಿ ಮಾಸಿಕ ವಿಸ್ತರಣೆ ಪಡೆಯುತ್ತಿದ್ದರು ಎನ್ನಲಾಗಿದೆ.

         'ಸಾಮಾನ್ಯ ರೀತಿಯಲ್ಲಿ ವಾಣಿಜ್ಯ ವಿಮಾನ ಹಾರಾಟವನ್ನು ಪುನರಾರಂಭಿಸದೆ ಇರುವುದರಿಂದ ಭಾರತದಲ್ಲಿ ಸಿಲುಕಿರುವಂತಹ ವಿದೇಶಿ ಪ್ರಜೆಗಳ ಭಾರತೀಯ ವೀಸಾ ಅಥವಾ ವಾಸ್ತವ್ಯದ ಅವಧಿಯನ್ನು 31.08.2021 ರವರೆಗೆ ಉಚಿತವೆಂದು ಪರಿಗಣಿಸಲಾಗುತ್ತದೆ. ಈ ಕುರಿತಾಗಿ ಯಾವುದೇ ಓವರ್‌ಸ್ಟೇ ದಂಡ ವಿಧಿಸಲಾಗುವುದಿಲ್ಲ. ಇಂಥ ವಿದೇಶಿ ಪ್ರಜೆಗಳು ಪ್ರತ್ಯೇಕವಾಗಿ ವಿಸ್ತರಣೆ ಅರ್ಜಿಗಳನ್ನು ಸಲ್ಲಿಸುವ ಅಗತ್ಯವಿಲ್ಲ' ಎಂದು ಕೇಂದ್ರ ಗೃಹವ್ಯವಹಾರಗಳ ಸಚಿವಾಲಯದ ಹೇಳಿಕೆ ತಿಳಿಸಿದೆ.

             ಸದರಿ ವಿದೇಶಿ ಪ್ರಜೆಗಳು ಭಾರತವನ್ನು ಬಿಟ್ಟು ಹೊರಹೋಗುವ ಅವಕಾಶ ಲಭಿಸಿದಾಗ ಎಕ್ಸಿಟ್ ಪರ್ಮಿಷನ್​ಗಾಗಿ ಸಂಬಂಧಿತ ಎಫ್​ಆರ್​ಆರ್​ಒಗೆ ಅರ್ಜಿ ಸಲ್ಲಿಸಬಹುದು. ಯಾವುದೇ ದಂಡ ವಿಧಿಸದೆ ತೆರಳಲು ಅನುಮತಿ ನೀಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries