HEALTH TIPS

ಈ ಸಮಯದಲ್ಲಿ ಹಲಸಿನ ಗಟ್ಟಿ ಸವಿಯದಿದ್ದರೆ ಹೇಗೆ, ಅಲ್ವಾ?

              ಹಲಸಿನ ಹಣ್ಣಿನ ಸೀಸನ್‌ನ ಈ ಸಮಯದಲ್ಲಿ ಹಲಸಿನ ಹಿಟ್ಟು ಸವಿಯದಿರಲು ಸಾಧ್ಯವೇ? ಕೆಲವು ಕಡೆ ಇದನ್ನು ಹಲಸಿನ ಗಟ್ಟಿ ಎಂದು ಕೂಡ ಕರೆಯಲಾಗುವುದು. ಹಲಸಿನ ಹಣ್ಣಿನ ಸಮಯದಲ್ಲಿ ಎಷ್ಟೋ ಬಾರಿ ಬೆಳಗ್ಗಿನ ಬ್ರೇಕ್‌ಫಾಸ್ಟ್‌ ಅಥವಾ ಸಂಜೆಯ ಸ್ನ್ಯಾಕ್ಸ್ ಇದೇ ಆಗಿರುತ್ತದೆ.


halisina gatti recipe

          ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇಷ್ಟಪಟ್ಟು ಸವಿಯುವ ಈ ಗಟ್ಟಿ ಮಾಡುವುದು ಸ್ವಲ್ಪ ಶ್ರಮದ ಕೆಲಸವೇ, ಆದರೆ ನಾವಿಲ್ಲಿ ನಿಮ್ಮ ಶ್ರಮ ಕಡಿಮೆ ಮಾಡುವ ಟಿಪ್ಸ್ ಜೊತೆ ವಿವರಿಸಿದ್ದೇವೆ.. ಬನ್ನಿ ಹಲಸಿನ ಹಿಟ್ಟು ಮಾಡುವುದು ಹೇಗೆ ಎಂದು ನೋಡೋಣ:

halisina gatti recipe

ಸೂಚನೆ: ಬಕ್ಕೆಯಾದರೆ ರುಬ್ಬಬೇಕು, ಕೂಳೆಯಾದರೆ ಅದರ ರಸ ತೆಗೆದು ಮಾಡಬಹುದಾಗಿದೆ.

halisina gatti recipe, ಹಲಸಿನ ಗಟ್ಟಿ ರೆಸಿಪಿ

PREP TIME
20 Mins
COOK TIME
30M
TOTAL TIME
50 Mins

Recipe By: Reena TK

Recipe Type: sweet

Serves: 10

INGREDIENTS
  • ಬೇಕಾಗುವ ಸಾಮಗ್ರಿ

    2 ದೊಡ್ಡ ಕಪ್ ಹಲಸಿನ ತೊಳೆ

    1 ಕಪ್ ಬೆಲ್ಲ

    1 ಕಪ್ ತೆಂಗಿನ ತುರಿ

    2 ಕಪ್‌ ಅಕ್ಕಿ ಹಿಟ್ಟು (ಕಡುಬಿಗೆ ಮಾಡುವಂತೆ ತರಿತರಿ ಇರಲಿ)

    1 ಚಮಚ ಏಲಕ್ಕಿ

    ಬಾಳೆಲೆ

    ತುಪ್ಪ

    ಹುರಿಗಡಲೆ (Optional)


HOW TO PREPARE
ಮಾಡುವ ವಿಧಾನ
  • * ಹಲಸಿನ ತೊಳೆಯನ್ನು ರುಬ್ಬಿ ಪೇಸ್ಟ್ ಮಾಡಿ.

    * ಅದಕ್ಕೆ ಒಂದು ಕಪ್ ಬೆಲ್ಲದ ಪುಡಿ ಸೇರಿಸಿ (ಸಿಹಿ ನೋಡಿ ಬೇಕಿದ್ದರೆ ಇನ್ನು ಸ್ವಲ್ಪ ಸೇರಿಸಬಹುದು).

    * ನಂತರ ತೆಂಗಿನ ತುರಿ, ಏಲಕ್ಕಿ, ಅಕ್ಕಿ ಹಿಟ್ಟು ಹಾಕಿ ಮಿಶ್ರ ಮಾಡಿ. ಮಿಶ್ರಣ ಸ್ವಲ್ಪ ಗಟ್ಟಿಯಿರಲಿ, ತುಂಬಾ ಗಟ್ಟಿ ಬೇಡ. ಬೇಕಿದ್ದರೆ ಹುರಿಗಡಲೆ ಸೇರಿಸಬೇಡಿ.

    * ಈಗ ಬಾಳೆಲೆ ಬಿಸಿ ಮಾಡಿ.

    * ನಂತರ ಬಾಳೆಲೆಯನ್ನು ಕತ್ತರಿಸಿ ಇಡಿ.

    * ಅದಕ್ಕೆ ತುಪ್ಪ ಸವರಿ, ಅದರ ಮೇಲೆ ಹಿಟ್ಟು ಹಾಕಿ ಹರಿ, ಮಡಚಿ

    * ಹೀಗೆ ಎಲ್ಲಾ ಮಾಡಿ ಹಬೆಯಲ್ಲಿ 30 ನಿಮಿಷ ಬೇಯಿಸಿ.

    * ಇಷ್ಟು ಮಾಡಿದರೆ ರುಚಿ-ರುಚಿಯಾದ ಹಲಸಿನ ಹಿಟ್ಟು ಸವಿಯಲು ರೆಡಿ.

INSTRUCTIONS
  • * ತೆಂಗಿನ ತುರಿಯ ಬದಲಿಗೆ ತೆಂಗಿನ ಕಾಯಿಯ ಚಿಕ್ಕ-ಚಿಕ್ಕ ಹೋಳು ಹಾಕಬಹುದು. * ಇದಕ್ಕೆ ಬೆಲ್ಲದ ಬದಲಿಗೆ ಸಕ್ಕರೆ ಹಾಕಬಹುದು, ಆದರೆ ಬೆಲ್ಲದ ರುಚಿಯೂ ಸೂಪರ್, ಆರೋಗ್ಯಕರ ಕೂಡ * ಅಕ್ಕಿ ಇಟ್ಟು ನೆನೆಹಾಕಿ ಅದನ್ನು ತೊಳೆ ಜೊತೆ ಗಟ್ಟಿ ರುಬ್ಬಿ ಮಾಡಿದರೆ ಇನ್ನೂ ಸೂಪರ್ ಗಿರುತ್ತೆ.
NUTRITIONAL INFORMATION
  • ಸರ್ವ್ - 100ಗ್ರಾಂ ಹಲಸಿನ ಹಣ್ಣು
  • ಕೊಬ್ಬು - 1ಗ್ರಾಂ
  • ಪ್ರೊಟೀನ್ - 2.8ಗ್ರಾಂ
  • ಕಾರ್ಬ್ಸ್ - 38 ಗ್ರಾಂ
  • ನಾರಿನಂಶ - 2.5 ಗ್ರಾಂ
Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries