ಕುಂಬಳೆ : ಕೋಟೆಕ್ಕಾರ್ ನಿವಾಸಿ ಸಾವಿತ್ರಿ ಯಾನೆ ಅಪ್ಪು ಎಂಬವರ ಕಂಪೌಂಡಿನಲ್ಲಿರುವ ಸಾಧರಣ 12 ಫೀಟ್ ಎತ್ತರದ ಆರೋಗ್ಯಪೂರ್ಣವಾಗಿ ಬೆಳೆದ ಬಾಳೆ ಗಿಡದ ಕೊನೆಯ ಎಲೆಯೂ ಬಂದ ಕೆಲ ದಿನಗಳ ನಂತರ ಮಧ್ಯಭಾಗದಲ್ಲಿ ಅಚ್ಚರಿ ಎನ್ನುವ ರೀತಿಯಲ್ಲಿ ಬಾಳೆ ಗೊನೆ ಮೂಡಿಬಂದಿದ್ದು, ನೋಡುಗರಲ್ಲಿ ಕೌತುಕ ಮೂಡಿಸಿದೆ.
ಪರಿಸರ ದಿನಾಚರಣೆಯ ಹಿನ್ನೆಲೆಯಲ್ಲಿ ಪ್ರಕೃತಿಯ ಇಂತಹದೊಂದು ವಿಶೇಷತೆ ಹೆಚ್ಚು ಗಮನ ಸೆಳೆಯುತ್ತಿದೆ.
ಸಮರಸಕ್ಕಾಗಿ ಚಿತ್ರ ಮಾಹಿತಿ ನೀಡಿದವರು ಶರತ್ ಕುಂಬಳೆ.






