HEALTH TIPS

ನಿರ್ಣಾಯಕ ಹಂತದಲ್ಲಿ ಕೊಡಕರ ಕಾಳದಂಧೆ ಪ್ರಕರಣ; ಕೆ ಸುರೇಂದ್ರನ್ ಅವರ ಹೇಳಿಕೆಯನ್ನು ದಾಖಲಿಸಲು ತನಿಖಾ ತಂಡದ ಸಿದ್ದತೆ

              ಕೊಚ್ಚಿ: ಕೊಡಕರ ಕಾಳದಂಧೆ  ಪ್ರಕರಣದಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಅವರ ಹೇಳಿಕೆಯನ್ನು ದಾಖಲಿಸಲು ತನಿಖಾ ತಂಡ ಸನ್ನದ್ದಗೊಳ್ಳುತ್ತಿದೆ. ಪಕ್ಷದ ಹಿರಿಯ ಮುಖಂಡರನ್ನು ಪ್ರಶ್ನಿಸಿದ ಬಳಿಕ ಈ ನಿರ್ಧಾರಕ್ಕೆ ರಲಾಗಿದೆ. ತನಿಖಾ ತಂಡದ ಪ್ರಕಾರ, ಕರ್ನಾಟಕದಿಂದ ರಾಜ್ಯಕ್ಕೆ 3.5 ಕೋಟಿ ರೂ. ಮೌಲ್ಯದ ಹವಾಲಾ ಹಣದ ಬಗ್ಗೆ ಬಿಜೆಪಿ ರಾಜ್ಯ ನಾಯಕರಿಗೆ ತಿಳಿದಿತ್ತು ಎನ್ನಲಾಗಿದೆ.

              ಹಣದ ಆಗಮನಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ನೀಡಿದ ಹೇಳಿಕೆಗಳ ನಡುವೆ ಭಿನ್ನಾಭಿಪ್ರಾಯವಿದೆ ಎಂದು ತನಿಖಾ ತಂಡವನ್ನು ಉಲ್ಲೇಖಿಸಿ ಮಾಧ್ಯಮಗಳ ವರದಿಯೊಂದು ಹೇಳಿದೆ. ಈ ಹಿನ್ನೆಲೆಯಲ್ಲಿ  ಕೆ ಸುರೇಂದ್ರನ್ ಅವರನ್ನು ಪ್ರಶ್ನಿಸಲಾಗುತ್ತಿದೆ.ಪೋಲೀಸರ ಪ್ರಕಾರ, ಆಲಪುಳದಲ್ಲಿರುವ ಬಿಜೆಪಿ ಮುಖಂಡರಿಗೆ ಹಸ್ತಾಂತರಿಸಲು ಕೇರಳದ ಹೊರಗಿನಿಂದ ಹಣವನ್ನು ರವಾನಿಸಲಾಗಿದೆ. ಕೊಡಕರ ಪ್ರಕರಣದ ಬಗ್ಗೆ ಮಾಧ್ಯಮ ವರದಿಗಳನ್ನು ಕೆ ಸುರೇಂದ್ರನ್ ಪತ್ರಿಕಾಗೋಷ್ಠಿಯಲ್ಲಿ ನಿರಾಕರಿಸಿದ ಬೆನ್ನಲ್ಲೇ ಪೋಲೀಸರು ತನಿಖೆಗೆ ಮುಂದಾಗುವ ಸೂಚನೆ ನೀಡಿರುವುದು ಗಮನಾರ್ಹವೂ ಆಗಿದೆ. 

               ಮನಿ ಲಾಂಡರಿಂಗ್ ಮತ್ತು ಬಿಜೆಪಿ ನಡುವೆ ಯಾವುದೇ ಸಂಬಂಧವಿಲ್ಲ ಮತ್ತು ತನಿಖೆಯೊಂದಿಗೆ ಸಹಕರಿಸುವುದಾಗಿ ಕೆ ಸುರೇಂದ್ರನ್ ಹೇಳಿದ್ದಾರೆ. ಆದರೆ ಈ ವಿಷಯದಲ್ಲಿ ಬಿಜೆಪಿ ನಾಯಕರು ಪೋಲೀಸರಿಗೆ ನೀಡಿದ ಹೇಳಿಕೆಗಳಲ್ಲಿ ಅಸಂಗತತೆಗಳಿವೆ. ಕಾಳಧನವÀನ್ನು ತಲುಪಿಸುವ ಸೌಲಭ್ಯಕ್ಕಾಗಿ ತ್ರಿಶೂರ್ ನಲ್ಲಿ ವಸತಿ ಸೌಕರ್ಯವನ್ನು ಸರಿಪಡಿಸಲು ಬಿಜೆಪಿ ಜಿಲ್ಲಾ ನಾಯಕತ್ವ ಜವಾಬ್ದಾರಿ ವಹಿಸಿತ್ತು ಎಂದು ಪೋಲೀಸರಿಗೆ ಹೇಳಿಕೆ ನೀಡಲಾಗಿತ್ತು. 

            ಕೆ ಸುರೇಂದ್ರನ್ ಅವರಲ್ಲದೆ, ಬಿಜೆಪಿ ಕೇಂದ್ರ ಸಂಘಟನಾ ಕಾರ್ಯದರ್ಶಿ ಎಲ್ ಪದ್ಮಕುಮಾರ್ ಅವರನ್ನೂ ಪೋಲೀಸರು ಪ್ರಶ್ನಿಸಲಿದ್ದಾರೆ. ಅವರು ಎರ್ನಾಕುಳಂ, ಇಡುಕ್ಕಿ, ಕೊಟ್ಟಾಯಂ ಮತ್ತು ಆಲಪ್ಪುಳ ಜಿಲ್ಲೆಗಳ ಉಸ್ತುವಾರಿ ವಹಿಸಿದ್ದರು. ಮನಿ ಲಾಂಡರಿಂಗ್ ಪ್ರಕರಣದ ಆರೋಪಿಗಳಾದ ರಂಜಿತ್ ಮತ್ತು ಮಾರ್ಟಿನ್ ಅವರ ಮೇಲೂ ವಂಚನೆ ಆರೋಪವಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries