HEALTH TIPS

ಸಮರಸ ಸಂವಾದ: ಓರೆಗೆರೆಗಳ ಕಚಗುಳಿಯಲಿ "ನಗು"ವ ಭಟ್ಟರು: ಅತಿಥಿ: ವೆಂಕಟ್ ಭಟ್ ಎಡನೀರು

 ವರಕವಿ ದ.ರಾ.ಬೇಂದ್ರೆ ಅವರು "ಹಾಸ್ಯ ಕಿರಣ ತದನುಸರಣ, ತದಿತರ ಪಥ ಕಾಣೆನಾ" ಎಂದಿದ್ದಾರೆ. ಹಾಸ್ಯ ಬದುಕಿನ ಭಾಗವಾದಾಗ ಬದುಕು ಸುಂದರ. ಆ ಮಾರ್ಗದಲ್ಲಿ ನಡೆಯುವುದಕ್ಕಿಂತ ಅನ್ಯಮಾರ್ಗವೊಂದಿರಲಾರದು.
         ಕನ್ನಡದ ಹಾಸ್ಯ ಸಾಹಿತಿಗಳಾದ ಬೀಚಿ ಅವರು ಮಂಕುತಿಮ್ಮನ ಕಗ್ಗದಿಂದ ಪ್ರೇರಿತರಾಗಿ ಅಂದನಾ ತಿಮ್ಮ ಎಂಬ ಗ್ರಂಥ ರಚಿಸಿದ್ದಾರೆ. ಅಲ್ಲಿ ನಗುವಿನ ಬಗ್ಗೆ ಉಲ್ಲೇಖಿಸುತ್ತ
 ನಗಿಸುವವನು ತಿಮ್ಮಪ್ಪ ನಗುವವನು ನಮ್ಮಪ್ಪ
 ನಗುನಗುತ ನಗಿಸುವವನು ಎಲ್ಲರಪ್ಪ
ನಗೆಲಾರದವನ ಕತ್ತೆ ಎಂದ|Aದೊಡೆ


 


 ಅಗಸನಾ ಕತ್ತೆ ಅತ್ತಿತ್ತೋ ತಿಮ್ಮ
        ಎಂದು ನಗುವಿನ ಬಗ್ಗೆ ಸವಿಸ್ತಾರ ಚಿಂತನೆಗಳನ್ನು ಹರಿಸಿರುವುದು ವಿಶಿಷ್ಟವಾದುದು. ಒಂದು ನಗು ವೈರಿಯನ್ನು ಸ್ನೇಹಿತರನ್ನಾಗಿಸುತ್ತದೆ. ಅಲ್ಲದೆ ವೈದ್ಯರನ್ನೂ ದೂರವಿರಿಸುತ್ತದೆ ಎಂಬ ಮಾತು ಪ್ರಚಲಿತದಲ್ಲಿದೆ.
   ಕಚಗುಳಿಯಿಡುವ, ತಿದ್ದುವ, ತೀಡುವ ಶಕ್ತಿ ನಗುವ ತರಿಸುವ  ಚಿತ್ರ, ಭಾಷೆಗಳಿಗೆ ಇದೆ. ಈ ಪೈಕಿ ವ್ಯಂಗ್ಯ ಚಿತ್ರ ಕ್ಷೇತ್ರ ಅತ್ಯಂತ ಹೆಚ್ಚು ಜನಾಕರ್ಷಣೆ ಪಡೆದ ಒಂದು ವಿಭಾಗ.
        ಕಾರ್ಟೂನ್ ಒಂದು ವ್ಯಕ್ತಿಯ ನೋಟವು ವಿರೂಪಗೊಂಡಿರುವ ವ್ಯಕ್ತಿ. ವ್ಯಂಗ್ಯಚಿತ್ರ ಪದ ಇಟಾಲಿಯನ್ ಮೂಲದದ್ದು "ಕ್ಯಾರಿಕೇರ್" ಅದರ ಅರ್ಥವೆಂದರೆ "ಲೋಡ್"ಅಥವಾ"ಉತ್ಪ್ರೇಕ್ಷೆ".
       ಕಾಸರಗೋಡಿನ ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ಪ್ರಸ್ತುತ ಪ್ರಚಲಿತದಲ್ಲಿರುವವರು ವೆಂಕಟ್ ಭಟ್ ಎಡನೀರು ಅವರು. ತಮ್ಮ ಓರೆ ಗೆರೆಗಳ ಮೂಲಕ ವರ್ತಮಾನದ ಓರೆಕೋರೆಗಳನ್ನು ಚಿತ್ರಿಸಿ ವೀಕ್ಷಜಕರಿಗೆ ನಗು ತರಿಸುವ ಜೊತೆಗೆ ವ್ಯವಸ್ಥೆಗಳ ನ್ಯೂನತೆಗಳ ಬಗ್ಗೆ ಗಂಭೀರ ಚಿಂತನೆಗಳಿಗೆ ಎಳೆದೊಯ್ಯುವ ಶಕ್ತಿ ಹೊಂದಿದವರು. ಸಮರಸ ಸುದ್ದಿ ಇಂದು ಅವರೊಂದಿಗೆ ಮುಕ್ತ ಸಂವಾದದ ಮೂಲಕ ಯಶೋಗಾಥೆಯನ್ನು ತೆರೆದಿರಿಸಲು ಯತ್ನಿಸಿದೆ. ಎಡನೀರು ಸ್ವಾಮೀಜೀಸ್ ಹೈಸ್ಕೂಲಿನಲ್ಲಿ ಸುಧೀರ್ಘ ಕಾಲ ಉದ್ಯೋಗಿಯಾಗಿ ನಿವೃತ್ತರಾಗಿರುವ ಭಟ್ ಅವರು ಶ್ರೀಮಠದ ಶಿವೈಕ್ಯರಾದ ಪರಮಪೂಜ್ಯ ಶ್ರೀಕೇಶವಾನಂದ ಭಾರತೀ ಪಾದಂಗಳವರಿಗೆ ನಿಕಟರಾಗಿದ್ದವರು. ಪ್ರಸ್ತುತ ಎಡನೀರಿನ ಸ್ವಗ್ರಾಮದಲ್ಲೇ ವಾಸಿಸುತ್ತಿರುವ ಇವರು ಪೆರಡಾಲಮೂಲೆ ದಿ.ಸುಬ್ರಹ್ಮಣ್ಯ ಭಟ್-ಶಾರದಾ ಎಸ್.ಭಟ್ ಅವರ ಸುಪುತ್ರರಾಗಿದ್ದು,  ಭಟ್ ಅವರ ಪತ್ನಿ ಶಿಕ್ಷಕಿ ಜ್ಯೋತಿಲಕ್ಷೀ ಎಸ್, ಪುತ್ರ ಆದಿತ್ಯ ಭಟ್, ಪುತ್ರಿ ಅಕ್ಷತ ಭಟ್ ಅವರೊಂದಿಗೆ ಸುಖ ಸಂಸಾರ ನಡೆಸುತ್ತಿದ್ದಾರೆ.     
                       ಅಂದಹಾಗೆ, ವೆಂಕಟ್ ಭಟ್ ಅವರ ಮನೆಯ ಹೆಸರು "ನಗು". ಹೌದು ವೆಂಕಟ್ ಭಟ್ ಅವರು ತಮ್ಮ ಮನೆಗಿರಿಸಿದ ಹೆಸರು ನಿಜವಾಗಿಯೂ ಅವರ ಹೃದಯ ವೈಶಾಲ್ಯತೆ, ಜೀವನ ದೃಷ್ಟಿಯನ್ನು ಬಿಂಬಿಸುತ್ತದೆ. ಡಿವಿಜಿ ಅವರೆಂದAತೆ    
           ನಗುವು ಸಹಜದ ಧರ್ಮ; ನಗಿಸುವುದು ಪರಧರ್ಮ
          ನಗುವ ಕೇಳುತ ನಗುವುದತಿಶಯದ ಧರ್ಮ
          ನಗುವ ನಗಿಸುವ ನಗಿಸಿ ನಗುತ ಬಾಳುವ ವರವ
          ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ
               ಎಂಬುದಿಲ್ಲಿ ನಿಜವಾಗಿಯೂ ಸಾಕಾರಗೊಂಡಿದೆ.
                           ಸ|ಂದರ್ಶನ ವೀಕ್ಷಿಸಿ, ಹಂಚಿ ಮತ್ತು ಪ್ರೋತ್ಸಾಹಿಸಿ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries