HEALTH TIPS

ಒಂದು ತಿಂಗಳಿನಿಂದ ಏಕಾಂಗಿಯಾಗಿ ವಾಸಿಸುತ್ತಿದ್ದ 16 ರ ಹರೆಯದ ಬಾಲಕಿಯ ರಕ್ಷಣೆ: ಬಾಲಿಕಾ ಸದನ್ ಗೆ ವರ್ಗಾವಣೆ

            ಪತ್ತನಂತಿಟ್ಟು:  ಹೆತ್ತವರಿಂದ ತ್ಯಜಿಸಲ್ಪಟ್ಟು ಕಳೆದ ಒಂದು ತಿಂಗಳಿನಿಂದ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ 16 ವರ್ಷದ ಬಾಲಕಿಯನ್ನು ಜಿಲ್ಲಾಧಿಕಾರಿ ಸಂರಕ್ಷಿಸಿಸದ ಘಟನೆ ನಡೆದಿದೆ. ಜಿಲ್ಲಾಧಿಕಾರಿ ದಿವ್ಯಾ ಎಸ್. ಅಯ್ಯರ್ ನೇತೃತ್ವದಲ್ಲಿ ಬಾಲಿಕಾ ಸದನ್ ಗೆ ಬಾಲಿಕಿಯನ್ನು ಕರೆದೊಯ್ಯಲಾಯಿತು. ಪತ್ತನಂತಿಟ್ಟು ನಾರಂಗನಂ ಜಾನುವಾರು ಹುಲ್ಲುಗಾವಲಿನ ಮನೆಯೊಂದರಲ್ಲಿ ವಾಸಿಸುತ್ತಿದ್ದ ಅನಾಥೆಗೆ ಈ ಮೂಲಕ ಹೊಸ ದಿಶ|ಎ ನೀಡಲಾಯಿತು. 

                  ಜಿಲ್ಲಾಧಿಕಾರಿ ಬಾಲಿಕಾ ಸದಾನ್‍ಗೆ ಭೇಟಿ ನೀಡಿ ಮಗುವನ್ನು ಭೇಟಿ ಮಾಡಿ ಅಗತ್ಯವಿರುವ ಎಲ್ಲ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಕೌಟುಂಬಿಕ ಸಮಸ್ಯೆಗಳಿಂದಾಗಿ ಪ್ರತ್ಯೇಕವಾಗಿದ್ದ ಮಗುವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಮಗು ತಾತ್ಕಾಲಿಕವಾಗಿ ಬಾಲಕಿಯರ ಮನೆಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು. ಮಗುವಿಗೆ ಜಿಲ್ಲಾಡಳಿತದ ಎಲ್ಲಾ ಆರೈಕೆ ಮತ್ತು ನಿರ್ವಹಣೆ ನೀಡಲಿದೆ.  ಆರೋಗ್ಯ ಮತ್ತು ಶಿಕ್ಷಣದಂತಹ ಎಲ್ಲಾ ಮೂಲ ಸೌಲಭ್ಯಗಳನ್ನು ಒದಗಿಸಲಾಗುವುದು. ಕೌಟುಂಬಿಕ ಸಮಸ್ಯೆಗಳೊಂದಿಗೆ ಮಕ್ಕಳ ಭವಿಷ್ಯವು ಈ ರೀತಿಯಾಗಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದರು.

                ತಾಯಿ ಬಿಟ್ಟುಹೋದ ಬಳಿಕ ಹುಡುಗಿ ಏಕಾಂಗಿಯಾಗಿದ್ದಳು. ಎಂಟು ವರ್ಷಗಳ ಹಿಂದೆ, ತಂದೆ ಇನ್ನೊಬ್ಬ ಮಹಿಳೆಯೊಂದಿಗೆ ಮನೆ ಬಿಟ್ಟರು. ನಂತರ, ಹುಡುಗಿಯ ತಂದೆ ತನ್ನ ತಾಯಿಯ ಹೆಸರಿನ ಸ್ಥಳದಿಂದ ಅವಳನ್ನು ಹೊರಹಾಕಲು ಪ್ರಯತ್ನಿಸಿದನು. ಆದರೆ ನ್ಯಾಯಾಲಯವು ಮಧ್ಯಪ್ರವೇಶಿಸಿ ಮನೆ ಕೈತಪ್ಪದಂತೆ ನೆರವಾಯಿತು. ಬಳಿಕ ಮಗುವಿನ ಮಲತಂದೆ ಮಗುವಿನ ತಾಯಿಯನ್ನು ಹಿಂಸಿಸುತ್ತಿದ್ದರು. ತಾಯಿ ಒಂದು ತಿಂಗಳ ಹಿಂದೆ ಮನೆಯನ್ನೂ, ಪುತ್ರಿಯನ್ನೂ ತೊರೆದಿದ್ದಳು. ಇದರೊಂದಿಗೆ ಬಾಲಕಿ ದಿಕ್ಕೆಟ್ಟು ನಾಲ್ಕು ಗೋಡೆಗಳ ಮಧ್ಯೆ ಒಬ್ಬಂಟಿಯಾಗಬೇಕಾಯಿತು. ಇದು ಸುದ್ದಿಯಾದ ಬಳಿಕ  ಸರ್ಕಾರ ನೆರವಿಗೆ ಧಾವಿಸಿತು. 

                ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಒಳಗೊಂಡಂತೆ ನಿರ್ಧಾರದ ಸಂದರ್ಭದಲ್ಲಿ ಮಗುವಿಗೆ ಅಗತ್ಯ ಸಹಾಯವನ್ನು ನೀಡಲಾಗುವುದು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮಕ್ಕಳ ಕಲ್ಯಾಣ ಸಮಿತಿಗೆ ನಿರ್ದೇಶನ ನೀಡಲಾಗಿದೆ. ಸಮಿತಿಯು ಅಗತ್ಯ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಆರೋಗ್ಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ವೀಣಾ ಜಾರ್ಜ್ ಈ ಘಟನೆ ಕುರಿತು ಚರ್ಚಿಸಿದ್ದಾರೆ. ಮಗುವನ್ನು ಸುರಕ್ಷತೆಯತ್ತ ಸಾಗಿಸಲು ಸಹಾಯ ಮಾಡಲು ಜಿಲ್ಲಾ ಮಕ್ಕಳ ರಕ್ಷಣಾ ಕಚೇರಿ ಮತ್ತು ಪೋಲೀಸರನ್ನು ಕರೆಸಲಾಯಿತು.

                  ಇತರ ವಿಚಾರಣೆಗಳ ನಂತರ ಉತ್ತಮ ಜೀವನ ವ್ಯವಸ್ಥೆಗಳಿದ್ದರೆ, ಮಗುವಿನ ಇಚ್ಚೆಯನುಸಾರ ಕುಟುಂಬದೊಂದಿಗೆ ಒಟ್ಟಿಗೆ ವಾಸಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿರುವÀರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries