HEALTH TIPS

ಕೋವಿಡ್-19: 2ನೇ ಅಲೆಯನ್ನೂ ಮೀರಿಸುತ್ತದೆ ಮೂರನೇ ಅಲೆಯ ಆರ್ಭಟ: ಏಮ್ಸ್ ನಿರ್ದೇಶಕ ಗಂಭೀರ ಎಚ್ಚರಿಕೆ

               ನವದೆಹಲಿಕೋವಿಡ್ ನಿಯಮಗಳ ಕುರಿತ ಜನರ ಗಂಭೀರ ನಿರ್ಲಕ್ಷ್ಯತೆ ಹೀಗೆಯೇ ಮುಂದುವರೆದರೆ 3ನೇ ಅಲೆ ಈ ಹಿಂದೆ ಬಂದ ಎರಡನೇ ಅಲೆಯ ಆರ್ಭಟವನ್ನೂ ಮೀರಿಸಿ, ಅಪಾರ ಪ್ರಮಾಣದ ಸಾವು-ನೋವು ಸಂಭವಿಸುತ್ತದೆ ಎಂದು ದೆಹಲಿ ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ಗುರುವಾರ ಹೇಳಿದ್ದಾರೆ.

              ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಗಳನ್ನು ಬಳಸುವುದು ಮತ್ತು ಲಸಿಕೆ ತೆಗೆದುಕೊಳ್ಳುವಂತಹ ಕೋವಿಡ್-ಸೂಕ್ತವಾದ ನಡವಳಿಕೆಯನ್ನು ಅನುಸರಿಸುವ ಮೂಲಕ ಮೂರನೇ ಅಲೆಯನ್ನು ತಗ್ಗಿಸಬಹುದು. ಆದರೆ ರೋಗನಿರೋಧಕ ಶಕ್ತಿ ಕ್ಷೀಣಿಸುವ ಸಾಮರ್ಥ್ಯವಿರುವ ರೂಪಾಂತರಿ ಸೋಂಕು ಹರಡುತ್ತಿರುವ ಈ ಹೊತ್ತಿನಲ್ಲಿ ಜನರು ಕೋವಿಡ್ ನಿಯಮಗಳನ್ನು ಗಾಳಿಗಿ ತೂರಿ ವರ್ತಿಸುತ್ತಿರುವುದು ಅತ್ಯಂತ ಅಪಾಯಕಾರಿ. ಜನರ ವರ್ತನೆ ಹೀಗೆಯೇ ಮುಂದುವರೆದರೆ ಖಂಡಿತಾ ಮೂರನೇ ಅಲೆ 2ನೇ ಅಲೆಗಿಂತ ಹೆಚ್ಚಿನ ಪ್ರಮಾಣದ ಸಾವುನೋವು ತರುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

          ಸಾಂಕ್ರಾಮಿಕ ರೋಗದ ಸಂಭವನೀಯ ಮೂರನೇ ಅಲೆಯ ಪಥವನ್ನು ವಿಭಿನ್ನ ಸನ್ನಿವೇಶಗಳಲ್ಲಿ ಪ್ರದರ್ಶಿಸಲು ಹಲವಾರು ಅಧ್ಯಯನಗಳು ಮತ್ತು ಮಾಡೆಲಿಂಗ್‌ಗಳನ್ನು ನಡೆಸಲಾಗಿದೆ. ಐಐಟಿಯಿಂದ ಅಂತಹ ಒಂದು ಮಾದರಿಯು ಎಲ್ಲಾ ರೀತಿಯ ಕೋವಿಡ್ ನಿರ್ಬಂಧಗಳನ್ನು ತೆಗೆದುಹಾಕಿದರೆ ಮತ್ತು ವೈರಸ್ (ರೂಪಾಂತರ) ಸಹ ಪ್ರತಿರಕ್ಷೆಯಿಂದ ಪಾರಾಗಲು ಸಾಧ್ಯವಾದರೆ ಮುಂದಿನ ಅಲೆಯು ಎರಡನೇ ಅಲೆಗಿಂತ ದೊಡ್ಡ ಪ್ರಮಾಣದ ಅನಾಹುತ ತರುತ್ತದೆ ಎಂದು ತೋರಿಸುತ್ತದೆ. ಕೆಲವು ನಿರ್ಬಂಧಗಳನ್ನು ಇರಿಸಿದರೆ ಮತ್ತು ವೈರಸ್ ಸಹ ಸ್ಥಿರವಾಗಿದ್ದರೆ ಪ್ರಕರಣಗಳು ಹೆಚ್ಚಾಗುವುದಿಲ್ಲ ಮತ್ತು ನಾವು ಹೆಚ್ಚಿನ ನಿರ್ಬಂಧಗಳನ್ನು ಮುಂದುವರೆಸಿದರೆ ಪ್ರಕರಣಗಳು ಮತ್ತಷ್ಟು ಕಡಿಮೆಯಾಗುತ್ತವೆ. ಹೊಸ ರೂಪಾಂತರಗಳು ಹೊರಹೊಮ್ಮಿದರೂ ಸಹ, ಲಭ್ಯವಿರುವ ಲಸಿಕೆಗಳ ಮೂಲಕ ಅವುಗಳನ್ನು ನಿಯಂತ್ರಿಸಬಹುಜು ಎಂದು ಗುಲೇರಿಯಾ ಹೇಳಿದರು.

        ಕೋವಿಡ್ ಲಸಿಕೆ ವ್ಯಾಪಕವಾಗಿರುವ ರಾಷ್ಟ್ರಗಳಿಲ್ಲಿಯೂ ಮೂರನೇ ಅಲೆ ಆರ್ಭಟವಿದೆಯಾದರೂ, ಅಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇದು ಲಸಿಕೆಗಳು ಹೇಗೆ ಕಾರ್ಯ ನಿರ್ವಹಿಸುತ್ತಿವೆ ಎಂಬು ಸ್ಪಷ್ಟ ನಿದರ್ಶನವಾಗಿದೆ. ದೇಶದಲ್ಲಿ ಕೋವಾಕ್ಸಿನ್, ಕೋವಿಶೀಲ್ಡ್ ಮತ್ತು ಸ್ಪುಟ್ನಿಕ್ ವಿ ಹೊರತುಪಡಿಸಿ, ಇನ್ನೂ ಹಲವಾರು ಲಸಿಕೆಗಳು ದೇಶದಲ್ಲಿವೆ. ಮುಂದಿನ ದಿನಗಳಲ್ಲಿ ಅವು ಜನರಿಗೆ ಲಭ್ಯವಾಗುತ್ತವೆ ಎಂದು ಗುಲೇರಿಯಾ ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries