HEALTH TIPS

ಭಾರತದ ಮೊದಲ ಪ್ಲಾಸ್ಮಿಡ್ ಡಿಎನ್‌ಎ ಕೋವಿಡ್-19 ಲಸಿಕೆ 'ಝೈಕೋವ್-ಡಿ' ಮುಂದಿನ ತಿಂಗಳು ಮಾರುಕಟ್ಟೆಗೆ!

          ನವದೆಹಲಿದೇಶಕ್ಕೆ 5ನೇ ಲಸಿಕೆಯಾಗಿ ಮತ್ತು ಭಾರತದ ಮೊದಲ ಪ್ಲಾಸ್ಮಿಡ್ ಡಿಎನ್‌ಎ ಕೋವಿಡ್ -19 ಲಸಿಕೆಯಾಗಿರುವ ಝೈಡಸ್ ಕ್ಯಾಡಿಲಾ ಸಂಸ್ಥೆಯ 'ಝೈಕೋವ್-ಡಿ' ಮುಂದಿನ ತಿಂಗಳೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ.


   ಈ ಬಗ್ಗೆ ಸ್ವತಃ ಕ್ಯಾಡಿಲಾ ಹೆಲ್ತ್ ಕೇರ್ ಎಂಡಿ ಶರ್ವಿಲ್ ಪಟೇಲ್ ಅವರು ಮಾಹಿತಿ ನೀಡಿದ್ದು, ಭಾರತದ ಮೊದಲ ಪ್ಲಾಸ್ಮಿಡ್ ಡಿಎನ್‌ಎ ಕೋವಿಡ್ -19 ಲಸಿಕೆ 'ಝೈಕೋವ್-ಡಿ' ಮುಂದಿನ ತಿಂಗಳು ಮಾರುಕಟ್ಟೆಗೆ ಬರಲಿದೆ ಎಂದು ಹೇಳಿದ್ದಾರೆ.

       ಈ ಬಗ್ಗೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಅವರು, 'ಆಗಸ್ಟ್ ತಿಂಗಳಿನಿಂದ ಸಂಸ್ಥೆಯ ತನ್ನ ಲಸಿಕಾ ಉತ್ಪಾದನೆಯನ್ನು ಹೆಚ್ಚಳ ಮಾಡಲಿದ್ದು, ಮುಂದಿನ ತಿಂಗಳಿನಿಂದಲೇ 1 ಕೋಟಿ ಡೋಸ್ ಲಸಿಕೆ ಉತ್ಪಾದನೆಯಾಗಲಿದೆ. ಡಿಸೆಂಬರ್ ವೇಳೆಗೆ 5 ಕೋಟಿ ಡೋಸ್ ಲಸಿಕೆ ಉತ್ಪಾದನೆ ಮಾಡುವ ಗುರಿ ಹೊಂಜಲಾಗಿದೆ. ಈ ವರ್ಷದಲ್ಲಿ 10 ಕೋಟಿ ಡೋಸ್ ಲಸಿಕೆ ಉತ್ಪಾದನೆಯ ಗುರಿ ಹೊಂದಲಾಗಿದೆ ಎಂದು ಶರ್ವಿಲ್ ಪಟೇಲ್ ಹೇಳಿದರು.

        ದೇಶದ ಮೊದಲ ಪ್ಲಾಸ್ಮಿಡ್ ಡಿಎನ್‌ಎ ಕೋವಿಡ್ -19 ಲಸಿಕೆ
ಇನ್ನು ಕ್ಯಾಡಿಲಾ ಸಂಸ್ಥೆಯ 'ಝೈಕೋವ್-ಡಿ' ದೇಶದ ಮೊದಲ ಪ್ಲಾಸ್ಮಿಡ್ ಡಿಎನ್‌ಎ ಕೋವಿಡ್ -19 ಲಸಿಕೆಯಾಗಿದ್ದು, ಲಸಿಕೆಯ ತುರ್ತುಬಳಕೆಗಾಗಿ ಡಿಸಿಜಿಐನ ಅನುಮತಿ ಕೋರಿದ್ದೇವೆ. ಈ ಸಂಬಂಧ ಅಗತ್ಯ ಎಲ್ಲ ದಾಖಲೆಗಳನ್ನೂ ಸಲ್ಲಿಕೆ ಮಾಡಲಾಗಿದ್ದು, ಶೀಘ್ರದಲ್ಲೇ ಅನುಮತಿ ದೊರೆಯುವ ವಿಶ್ವಾಸವಿದೆ ಎಂದು ಪಟೇಲ್ ಹೇಳಿದರು.

         ಈಗಾಗಲೇ ಝೈಡಸ್ ಕ್ಯಾಡಿಲಾ ಸಂಸ್ಥೆಯ ಆಯಂಟಿ ಕೋವಿಡ್ ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಈ ಔಷಧಿಗಳನ್ನು ಭಾರತದಲ್ಲಿ ವಿವಿಧ ಹಂತಗಳಲ್ಲಿ ಕ್ಲಿನಿಕಲ್ ಪ್ರಯೋಗಕ್ಕೆ ಬಳಸಲಾಗಿತ್ತು. ದೇಶದ ವಿವಿಧ ಪ್ರದೇಶಗಳ 50 ಕೇಂದ್ರಗಳಲ್ಲಿ ಈ ಪ್ರಯೋಗ ನಡೆಸಲಾಗಿತ್ತು. ಈ ಪ್ರಯೋಗದಲ್ಲಿ 12 ರಿಂದ 18 ವರ್ಷದೊಳಗಿನ ಮಕ್ಕಳೂ ಸೇರಿದ್ದರು ಎಂದು ಸಂಸ್ಥೆ ಹೇಳಿಕೊಂಡಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries