HEALTH TIPS

ಜಿಲ್ಲಾ ಯೋಜನೆ ಸಮಿತಿ : 5 ಮಂದಿ ಸದಸ್ಯರ ಆಯ್ಕೆ

          ಕಾಸರಗೋಡು: ಜಿಲ್ಲಾ ಯೋಜನೆ ಸಮಿತಿಗೆ ಜಿಲ್ಲಾ ಪಂಚಾಯತ್ ನ ಸದಸ್ಯರ ಆಯ್ಕೆ ನಡೆಸಲಾಯಿತು. 

                    4 ಮಂದಿ ಸದಸ್ಯೆಯರನ್ನು, ಪರಿಶಿಷ್ಟ ಜಾತಿ/ ಪಂಗಡ ವಿಭಾಗ(ಜನರಲ್) ವಿಭಾಗದಿಂದ ಒಬ್ಬರನ್ನು ಆರಿಸಲಾಗಿದೆ. 

                ಜಿಲ್ಲಾ ಪಂಚಾಯತ್ ನ 10 ಮಂದಿ ಸದಸ್ಯರು ಯೋಜನೆ ಸಮಿತಿಗಾಗಿ ಆಯ್ಕೆಗೊಳ್ಳಬೇಕಿದೆ. ಪರಿಶಿಷ್ಟ ಜಾತಿ/ ಪಂಗಡ ಮಹಿಳಾ ವಿಭಾಗದಿಂದ ಸ್ಪರ್ಧಾಳುವಿಲ್ಲದ ಕಾರಣ ನಡೆದಿರಲಿಲ್ಲ. ಜನರಲ್ ವಿಭಾಗದಿಂದ 4 ಮಂದಿಯ ಆಯ್ಕೆ ನಂತರ ನಡೆಸುವುದಾಗಿ ತಿಳಿಸಲಾಗಿದೆ. 

            ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಪ್ರಧಾನ ಸಭಾಂಗಣದಲ್ಲಿ ಆಯ್ಕೆ ನಡೆಸಲಾಗಿದೆ. ಚುನಾವಣೆ ಅಧಿಕಾರಿಯಾಗಿದ್ದ, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಚುನಾವಣೆ ನಿಯಂತ್ರಿಸಿದರು. 

             ಪರಿಶಿಷ್ಟ ಜಾತಿ/ಪಂಗಡ(ಜನರಲ್) ವಿಭಾಗದಿಂದ ಜಿಲ್ಲಾ ಪಂಚಾಯತ್ ಸದಸ್ಯ ಎಂ.ಮನು ಆಯ್ಕೆಯಾಗಿದ್ದಾರೆ. 2 ಮತಗಳ ಅಂತರದಲ್ಲಿ ಅವರು ಗೆದ್ದಿದ್ದಾರೆ. 4 ಮಂದಿ ಸದಸ್ಯೆಯರ ಆಯ್ಕೆಯ ಸ್ಪರ್ಧೆಯಲ್ಲಿ 5 ಮಂದಿ ಕಣದಲ್ಲಿದ್ದರೂ, ಒಬ್ಬರ ನಾಮಪತ್ರಿಕೆ ಅಸಿಂಧುಗೊಂಡಿತ್ತು. ಜಿಲ್ಲಾ ಪಂಚಾಯತ್ ವಿವಿಧ ಸ್ಥಾಯೀ ಸಮಿತಿ ಅಧ್ಯಕ್ಷರುಗಳಾದ ಕೆ.ಶಕುಂತಲಾ, ನ್ಯಾಯವಾದಿ ಎಸ್.ಎನ್.ಸರಿತಾ, ಗೀತಾ ಕೃಷ್ಣನ್, ಜಾಸ್ಮಿನ್ ಕಬೀರ್ ಈ ವಿಭಾಗದಲ್ಲಿ ಆಯ್ಕೆಗೊಂಡರು. 

             ನಗರಸಭೆಯಿಂದ ಇಬ್ಬರ ಆಯ್ಕೆಗಾಗಿ ಬುಧವಾರ ಬೆಳಗ್ಗೆ 11 ಗಂಟೆಗೆ ಕಾಸರಗೋಡು ನಗರಸಭೆ ಸಭಾಂಗಣದಲ್ಲಿ ಸಭೆ ನಡೆಯಲಿದೆ. ಜಿಲ್ಲಾ ಪಂಚಾಯತ್ ನಲ್ಲಿ ಸ್ಪರ್ಧಾಳುಗಳು ಇಲ್ಲದೇ ಇರುವ ಕಾರಣ ನಡೆಯದೇ ಇದ್ದ ಪರಿಶಿಷ್ಟ ಜಾತಿ/ಪಂಗಡ ಮಹಿಳಾ ವಿಭಾಗದ ಸದಸ್ಯೆಯ ಆಯ್ಕೆ ಇಲ್ಲಿ ಮೊದಲಿಗೆ ನಡೆಯಲಿದೆ. ಇಲ್ಲೂ ಸ್ಪರ್ಧಾಳು ಇಲ್ಲದೇ ಇದ್ದಲ್ಲಿ ಜು.9ರಂದು ನಡೆಯಲಿರುವ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಪರಿಶಿಷ್ಟ ಜಾತಿ/ ಪಂಗಡ ಜನರಲ್ ಗೊಳಿಸಿದ ನಂತರ ಆಯ್ಕೆ ನಡೆಯಲಿದೆ. ಈ ಸಬೆಯಲ್ಲೇ ಜನರಲ್ ವಿಭಾಗದ 4 ಮಂದಿಯ ಆಯ್ಕೆಯೂ ಜರುಗಲಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries