HEALTH TIPS

ಕೋವಿಡ್‌ ಎರಡನೇ ಅಲೆ: 'ಡೆಲ್ಟಾ'ದಿಂದ ಶೇ 80ರಷ್ಟು ಹೊಸ ಪ್ರಕರಣಗಳ ಸೃಷ್ಟಿ

          ನವದೆಹಲಿ: ದೇಶದಲ್ಲಿ ಕೋವಿಡ್‌-19 ಸಾಂಕ್ರಾಮಿಕದ ಎರಡನೇ ಅಲೆ ಉಲ್ಬಣಕ್ಕೆ ಡೆಲ್ಟಾ ರೂಪಾಂತರ ತಳಿಯೇ ಕಾರಣವಾಗಿದ್ದು, ಇದರಿಂದ ಶೇ 80ರಷ್ಟು ಹೊಸ ಪ್ರಕರಣಗಳು ಸೃಷ್ಟಿಯಾದವು ಎಂದು ಇಂಡಿಯನ್ ಸಾರ್ಸ್‌-ಕೋವ್‌2 ಜಿನೋಮಿಕ್ಸ್‌ ಕನ್ಸೊರ್ಟಿಯಂ ಸಹ ಅಧ್ಯಕ್ಷ ಡಾ. ಎನ್. ಕೆ. ಅರೋರಾ ಪ್ರತಿಪಾದಿಸಿದ್ದಾರೆ.

          ಮುಂದೆಯೂ ಹೀಗೆ ಕೊರೊನಾದ ಹೊಸ ಹೊಸ ರೂಪಾಂತರ ತಳಿಗಳು ಬರುತ್ತಿದ್ದರೆ, ಸೋಂಕಿನ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಏರಿಕೆಯಾಗಲಿದೆ ಎಂದು ಅರೋರಾ ಒತ್ತಿ ಹೇಳಿದ್ದಾರೆ.

          ಈ ಡೆಲ್ಟಾ ರೂಪಾಂತರ ತಳಿಯು, ಹಿಂದಿನ ಆಲ್ಫಾ ರೂಪಾಂತರಕ್ಕಿಂತ ಶೇ 40 ರಿಂದ 60 ರಷ್ಟು ವೇಗವಾಗಿ ಹರಡಬಲ್ಲದು. ಈ ರೂಪಾಂತರ ತಳಿ ಈಗಾಗಲೇ ಬ್ರಿಟನ್‌, ಅಮೆರಿಕ ಮತ್ತು ಸಿಂಗಪುರ ಸೇರಿದಂತೆ ಜಗತ್ತಿನ 80ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಹರಡಿಕೊಂಡಿದೆ.

          ಡೆಲ್ಟಾ ಪ್ಲಸ್‌ ರೂಪಾಂತರ ತಳಿಗಳಾದ ಎವೈ.1 ಮತ್ತು ಎವೈ.2 ವೈರಸ್‌ಗಳು ಮಹಾರಾಷ್ಟ್ರ, ತಮಿಳುನಾಡು ಮತ್ತು ಮಧ್ಯಪ್ರದೇಶ ಸೇರಿದಂತೆ ದೇಶದ 11 ರಾಜ್ಯಗಳಲ್ಲಿ ಕಾಣಿಸಿಕೊಂಡಿವೆ. ಈ ತಳಿಯಲ್ಲಿರುವ ಹರಡುವಿಕ ಶಕ್ತಿ, ಪ್ರಖರತೆ‌ ಮತ್ತು ಲಸಿಕೆಯಿಂದ ತಪ್ಪಿಸಿಕೊಳ್ಳುವ ಗುಣಲಕ್ಷಣಗಳ ಕುರಿತು ಅಧ್ಯಯನ ನಡೆಯುತ್ತಿದೆ ಎಂದು ಡಾ. ಅರೋರಾ ಹೇಳಿದ್ದಾರೆ.

ಡೆಲ್ಟಾ ರೂಪಾಂತರ ತಳಿ ಭಾರತದಲ್ಲಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ ಪತ್ತೆಯಾಯಿತು. ಇದು ದೇಶದಲ್ಲಿ ಕೋವಿಡ್‌-19 ಸಾಂಕ್ರಾಮಿಕದ ಎರಡನೇ ಅಲೆ ಸೃಷ್ಟಿಗೆ ಕಾರಣವಾಯಿತು ಎಂದು ಅರೋರಾ ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries