ಕುಂಬಳೆ : ಸಾಮಾಜಿಕ ಕಾರ್ಯಕರ್ತ ಮಹೇಶ್ ಪುಣಿಯೂರ್ ಹಾಗೂ ಹಿತಾಕ್ಷಿ ದಂಪತಿಗಳ ಪುತ್ರ ಚಿನ್ಮಯ ಕೃಷ್ಣನ ಹುಟ್ಟುಹಬ್ಬದ ಪ್ರಯುಕ್ತ ಕುಂಬಳೆಯ ಪ್ರಸಿದ್ಧ ವೈದ್ಯ ಸರ್ವೇಶ್ವರ ಭಟ್ ರನ್ನು ಗುರುವಾರ ಸಂಘ ಪರಿವಾರದ ನೇತಾರರ ಉಪಸ್ಥಿತಿಯಲ್ಲಿ ಶಾಲು ಹೊದಿಸಿ ಫಲ ಪುಷ್ಪಗಳನ್ನು ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಕಳೆದ 53 ವರ್ಷಗಳಿಂದ ಸೇವಾನಿರತರಾಗಿರುವ ಡಾ.ಸರ್ವೇಶ್ವರ ಭಟ್ ಅವರು ಕೊರೋನಾ ದಂತಹ ವಿಷಮ ಪರಿಸ್ಥಿತಿಯಲ್ಲೂ ಒಂದೇ ಒಂದು ದಿನ ರಜೆ ಮಾಡದೆ ಅವಿರತವಾಗಿ ತನ್ನ ಕರ್ತವ್ಯ ನಿರ್ವಹಿಸಿ ಜನಪ್ರಿಯತೆ ಗಳಿಸಿದ್ದಾರೆ. ಅಗ್ಗದ ದರದಲ್ಲಿ ಜನಸಾಮಾನ್ಯರಿಗೆ ಗರಿಷ್ಠ ಮಟ್ಟದ ಚಿಕಿತ್ಸೆ ನೀಡುತ್ತಿರುವ ವೈದ್ಯರ ಸೇವಾ ತತ್ಪರತೆ ಕುಂಬಳೆ ಪರಿಸರದಲ್ಲಿ ಮನೆಮಾತಾಗಿದೆ.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ಗ್ರಾಮಾಂತರ ಜಿಲ್ಲಾ ಸಹ ಭೌದ್ದಿಕ್ ಪ್ರಮುಖ ವಿಘ್ನೇಶ್ ಪ್ರತಾಪನಗರ, ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ವಿ ರವೀಂದ್ರನ್, ಬಿಜೆಪಿ ಕುಂಬಳೆ ಪಂಚಾಯತಿ ಅಧ್ಯಕ್ಷ ಕೆ. ಸುಧಾಕರ ಕಾಮತ್, ಜಿಲ್ಲಾ ಸಮಿತಿ ಸದಸ್ಯ ವಿನೋದನ್, ಒಬಿಸಿ ಮೋರ್ಚಾ ಜಿಲ್ಲಾ ಸಮಿತಿ ಸದಸ್ಯ ಶಶಿ ಕುಂಬಳೆ ಉಪಸ್ಥಿತರಿದ್ದರು.





